ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ ‘ಕಲ್ಕಿ 2898 ಎಡಿ’? ‘ಪುಷ್ಪ 2’ ಜೊತೆ ಸೆಣೆಸಾಟಕ್ಕೆ ನಿಂತ ಪ್ರಭಾಸ್ ಸಿನಿಮಾ
ಪ್ಯಾನ್ ಇಂಡಿಯಾ ಎನ್ನುವ ಕಾರಣಕ್ಕೆ ಸ್ವಾಂತತ್ರ್ಯ ದಿನಾಚರಣೆ ಮೇಲೆ ‘ಕಲ್ಕಿ 2898 ಎಡಿ’ ಸಿನಿಮಾ ಕಣ್ಣಿಟ್ಟಿದೆ. ಈಗಾಗಲೇ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹಾಗೂ ಕನ್ನಡದಲ್ಲಿ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಈ ಡೇಟ್ನ ಲಾಕ್ ಮಾಡಿವೆ. ಇದರ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಬರುತ್ತದೆ ಎಂದರೆ ಸ್ಪರ್ಧೆ ಜೋರಾಗಲಿದೆ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಗೊಂದಲ ಶುರುವಾಗಿದೆ. ಮೇ 9ರಂದು ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿತ್ತು. ಆದರೆ, ಇದೇ ಸಂದರ್ಭದಲ್ಲಿ ತೆಲುಗು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೊಳ್ಳಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಇದಕ್ಕಾಗಿ ನಿರ್ಮಾಪಕ ಸಿ. ಅಶ್ವಿನಿ ದತ್ ಅವರು ಹೊಸ ಡೇಟ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿರೋ ಕಾರಣ ಆಗಸ್ಟ್ 15 ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ ಎಂದು ವರದಿ ಆಗಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮೇ 13ರಂದು ವೋಟಿಂಗ್ ನಡೆಯಲಿದೆ. ಚುನಾವಣೆ ಎಂದರೆ ಎಲ್ಲರ ಗಮನ ಅತ್ತವೇ ಇರುತ್ತದೆ. ಸೆಲೆಬ್ರಿಟಿಗಳು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತಾರೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡದೇ ಇರಬಹುದು ಎನ್ನುವ ಭಯ ‘ಕಲ್ಕಿ 2898 ಎಡಿ’ ಚಿತ್ರವನ್ನು ಬಹುವಾಗಿ ಕಾಡಿದೆ. ಹೀಗಾಗಿ, ರಿಲೀಸ್ ಡೇಟ್ನಲ್ಲಿ ಬದಲಾವಣೆ ಮಾಡಿಕೊಳ್ಳೋ ಆಲೋಚನೆಯನ್ನು ತಂಡ ಮಾಡುತ್ತಿದೆ.
ಪ್ಯಾನ್ ಇಂಡಿಯಾ ಎನ್ನುವ ಕಾರಣಕ್ಕೆ ಸ್ವಾಂತತ್ರ್ಯ ದಿನಾಚರಣೆ ಮೇಲೆ ‘ಕಲ್ಕಿ 2898 ಎಡಿ’ ಸಿನಿಮಾ ಕಣ್ಣಿಟ್ಟಿದೆ. ಈಗಾಗಲೇ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹಾಗೂ ಕನ್ನಡದಲ್ಲಿ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಈ ಡೇಟ್ನ ಲಾಕ್ ಮಾಡಿವೆ. ಇದರ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಬರುತ್ತದೆ ಎಂದರೆ ಸ್ಪರ್ಧೆ ಜೋರಾಗಲಿದೆ.
ಇನ್ನು, ‘ಪುಷ್ಪ 2’ ತಂಡ ಬೇರೆಯದೇ ಪ್ಲ್ಯಾನ್ ರೂಪಿಸುತ್ತಿದೆ ಎನ್ನಲಾಗಿದೆ. ಮೊದಲ ದಿನ ಸಿನಿಮಾನ ಜನರು ದೊಡ್ಡ ಸಂಖ್ಯೆಯಲ್ಲಿ ನೋಡಿಯೇ ನೋಡುತ್ತಾರೆ. ಈ ಕಾರಣಕ್ಕೆ ಆಗಸ್ಟ್ 15ರ ಬದಲು ಆಗಸ್ಟ್ 14ರಂದು ಸಿನಿಮಾ ರಿಲೀಸ್ ಮಾಡುವ ಆಲೋಚನೆಯಲ್ಲಿ ತಂಡ ಇದೆ. ಆಗಸ್ಟ್ 14 ಗುರುವಾರ. ಈ ದಿನ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಥಿಯೇಟರ್ಗೆ ಬಂದರೆ ನಂತರ ಆಗಸ್ಟ್ 15 (ಸ್ವಾತಂತ್ರ್ಯ ದಿನಾಚರಣೆ), ಆಗಸ್ಟ್ 16 (ಶನಿವಾರ) ಹಾಗೂ ಆಗಸ್ಟ್ 17 (ಭಾನುವಾರ) ದೊಡ್ಡ ಸಂಖ್ಯೆಯಲ್ಲಿ ಜನರು ಥಿಯೇಟರ್ಗೆ ಬರುತ್ತಾರೆ. ಇದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ. ಒಂದೊಮ್ಮೆ ಪ್ರಭಾಸ್ ಸಿನಿಮಾ ಕೂಡ ಸ್ಪರ್ಧೆಗೆ ಇಳಿದರೆ ಫ್ಯಾನ್ಸ್ಗೆ ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲ ಹುಟ್ಟಿಕೊಳ್ಳೋದು ಪಕ್ಕಾ ಆಗಲಿದೆ.
ಇದನ್ನೂ ಓದಿ: ಬದಲಾಗುತ್ತಾ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ದಿನಾಂಕ? ಗೊಂದಲ ಶುರು
‘ಪುಷ್ಪ 2’ ಹಾಗೂ ‘ಭೈರತಿ ರಣಗಲ್’ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಎರಡೂ ಸಿನಿಮಾಗಳು ಅನುಕ್ರಮವಾಗಿ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಆಗಿರುವುದರಿಂದ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ‘ಕಲ್ಕಿ 2898 ಎಡಿ’ ಟ್ರೇಲರ್ ರಿಲೀಸ್ ಆದ ಬಳಿಕವೇ ಚಿತ್ರದ ಬಗ್ಗೆ ತಿಳಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ