ಅನುಷ್ಕಾ ಜನ್ಮದಿನ; ಆ ಒಂದು ಕಾರಣಕ್ಕೆ ಮದುವೆ ಆಗದೇ ಇರುವ ನಿರ್ಧಾರ ಮಾಡಿದ್ರಾ ನಟಿ?

‘ಬಾಹುಬಲಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಸಂಬಂಧದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಆ ಬಳಿಕ ಇವರು ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಬ್ರೇಕಪ್​ನಲ್ಲಿ ಇವರ ಸಂಬಂಧ ಕೊನೆ ಆಯಿತು.

ಅನುಷ್ಕಾ ಜನ್ಮದಿನ; ಆ ಒಂದು ಕಾರಣಕ್ಕೆ ಮದುವೆ ಆಗದೇ ಇರುವ ನಿರ್ಧಾರ ಮಾಡಿದ್ರಾ ನಟಿ?
ಅನುಷ್ಕಾ
Edited By:

Updated on: Nov 07, 2024 | 8:00 AM

ನಟಿ ಅನುಷ್ಕಾ ಶೆಟ್ಟಿ ಈಗ 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು (ನವೆಂಬರ್ 7) ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅನುಷ್ಕಾ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ವರ್ಷ ಕಳೆದಂತೆ ನಟನೆಯಿಂದ ದೂರ ಹೋಗುತ್ತಿದ್ದಾರೆ. ಅವರು ಈ ವರೆಗೆ ಮದುವೆ ಆಗಿಲ್ಲ. ಇನ್ನುಮುಂದೆ ಮದುವೆ ಆಗುತ್ತಾರೆ ಎನ್ನುವ ಯಾವುದೇ ಖಾತ್ರಿ ಇಲ್ಲ. ಅನುಷ್ಕಾ ಮದುವೆ ಆಗದೇ ಇರಲು ಆ ಒಂದು ಘಟನೆ ಕಾರಣ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ.

ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಜೊತೆ ರಿಲೇಶನ್​ಶಿಪ್​ನಲ್ಲ ಇದ್ದರು ಎನ್ನಲಾಗಿದೆ. ಹಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ‘ಬಾಹುಬಲಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇವರ ಸಂಬಂಧದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಆ ಬಳಿಕ ಇವರು ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಬ್ರೇಕಪ್​ನಲ್ಲಿ ಇವರ ಸಂಬಂಧ ಕೊನೆ ಆಯಿತು.

ಅನುಷ್ಕಾ ಶೆಟ್ಟಿ ಅವರು ಹಿರಿಯ ನಟನ ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿ ಹಬ್ಬಿತ್ತು. ಈ ಕಾರಣದಿಂದಲೇ ಪ್ರಭಾಸ್ ಹಾಗೂ ಅನುಷ್ಕಾ ಬೇರೆ ಆದರು ಎನ್ನುವ ವದಂತಿ ಇದೆ. ಇದು ನಿಜ ಅಲ್ಲ ಎನ್ನುತ್ತವೆ ಕೆಲವು ವರದಿಗಳು. ಈ ರೀತಿಯ ವದಂತಿಗಳಿಂದ ಅನುಷ್ಕಾ ಸಾಕಷ್ಟು ಬೇಸರಗೊಂಡಿದ್ದು, ಮದುವೆ ಆಗದೇ ಇರುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.

ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಆಗಲಿ ಎಂಬುದು ಅನೇಕರ ಕೋರಿಕೆ. ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಹೆಸರಲ್ಲಿ ಹಲವು ಇನ್​ಸ್ಟಾಗ್ರಾಮ್ ಅಕೌಂಟ್​ಗಳು ಇವೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬೇರೆ ಆಗಲು ಕಾರಣವಾಗಿದ್ದ ಮೂರನೇ ವ್ಯಕ್ತಿ ಯಾರು?

ಅನುಷ್ಕಾ ಶೆಟ್ಟಿ ಅವರು ಒಂದು ತೆಲುಗು ಹಾಗೂ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿರಲಿಲ್ಲ. ಈಗ ಬರ್ತ್​ಡೇ ಪ್ರಯುಕ್ತ ಆ ಬಗ್ಗೆ ಅಪ್​​ಡೇಟ್ ಸಿಗುತ್ತಿದೆ. ‘ಘಾಟಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಕಟನಾರ್’ ಸಿನಿಮಾದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us