ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬೇರೆ ಆಗಲು ಕಾರಣವಾಗಿದ್ದ ಮೂರನೇ ವ್ಯಕ್ತಿ ಯಾರು?

‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ನಟಿಸಿದ್ದಾರೆ. ಈ ಸಿನಿಮಾದಿಂದ ಇಬ್ಬರೂ ಕ್ಲೋಸ್ ಆದರು ಎನ್ನಲಾಗಿತ್ತು. ಆದರೆ, ಇದನ್ನು ತಂಡ ಒಪ್ಪಿಲ್ಲ. ಅದೇ ರೀತಿ ಅನುಷ್ಕಾ ಶೆಟ್ಟಿ ಕೂಡ ಓರ್ವ ಹಿರಿಯ ನಟನ ಜೊತೆ ಅಫೇರ್ ಹೊಂದಿದ್ದರು ಎಂಬ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. 

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬೇರೆ ಆಗಲು ಕಾರಣವಾಗಿದ್ದ ಮೂರನೇ ವ್ಯಕ್ತಿ ಯಾರು?
ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 23, 2024 | 7:59 AM

ತೆಲುಗು ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಲವ್​ಸ್ಟೋರಿ ಆರಂಭ ಆಗಿ ಈಗಾಗಲೇ ಕೊನೆ ಆಗಿದೆ. ಇವರು 2009ರಲ್ಲಿ ‘ಬಿಲ್ಲಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಯಿತು. ಈ ಸಿನಿಮಾ ಹಿಟ್ ಕೂಡ ಆಯಿತು. ‘ಮಿರ್ಚಿ’, ‘ಬಾಹುಬಲಿ’ ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಇಷ್ಟೊಂದು ಸಿನಿಮಾ ಮಾಡಿದ ಬಳಿಕ ಇವರ ಮಧ್ಯೆ ಸಹಜವಾಗಿಯೇ ಪ್ರೀತಿ ಮೂಡಿತ್ತು. ಆದರೆ, ಈಗ ಇಬ್ಬರ ಮಧ್ಯೆ ಕಾಂಟ್ಯಾಕ್ಟ್ ಇಲ್ಲ. ಮದುವೆ ಆಗುತ್ತಾರೆ ಎಂದಿದ್ದ ಜೋಡಿ ಈಗ ದೂರ ಆಗಿದ್ದಾರೆ. ಇದಕ್ಕೆ ಮೂರನೇ ವ್ಯಕ್ತಿ ಕಾರಣ ಎನ್ನಲಾಗುತ್ತಿದೆ.

ಅನುಷ್ಕಾ ಶೆಟ್ಟಿ ಅವರು ಹಿರಿಯ ನಟನೊಬ್ಬರ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಪ್ರಭಾಸ್ ಹಾಗೂ ಅನುಷ್ಕಾ ದೂರ ಆದರು ಎಂಬ ಮಾತಿದೆ. ಹೀಗಾಗಿ, ಅನುಷ್ಕಾ ಅವರಿಂದ ಪ್ರಭಾಸ್ ಅಂತರ ಕಾಯ್ದುಕೊಳ್ಳುತ್ತಾ ಬಂದರು. ಇತ್ತ ಪ್ರಭಾಸ್ ಅವರು ಬಾಲಿವುಡ್ ನಟಿ ಕೃತಿ ಸನೋನ್​ ಜೊತೆ ಎಂಗೇಜ್​ಮೆಂಟ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡಿತು. ಆದರೆ, ಇದನ್ನು ಅವರು ಅಲ್ಲಗಳೆದರು.

‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ನಟಿಸಿದ್ದಾರೆ. ಈ ಸಿನಿಮಾದಿಂದ ಇಬ್ಬರೂ ಕ್ಲೋಸ್ ಆದರು ಎನ್ನಲಾಗಿತ್ತು. ಆದರೆ, ಇದನ್ನು ತಂಡ ಒಪ್ಪಿಲ್ಲ. ಅದೇ ರೀತಿ ಅನುಷ್ಕಾ ಶೆಟ್ಟಿ ಕೂಡ ಓರ್ವ ಹಿರಿಯ ನಟನ ಜೊತೆ ಅಫೇರ್ ಹೊಂದಿದ್ದರು ಎಂಬ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಪ್ರಭಾಸ್ ಅವರಿಗೆ 45 ವರ್ಷ ವಯಸ್ಸು. ಅವರು ಇನ್ಮೇಲೆ ಮದುವೆ ಆಗೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಅವರ ಗಮನ ಸಂಪೂರ್ಣವಾಗಿ ಸಿನಿಮಾ ಕೆಲಸದ ಮೇಲೆ ಇದೆ. ಪ್ರಭಾಸ್ ಹೆಸರು ಅನುಷ್ಕಾಗೆ ತಳುಕು ಹಾಕಿಕೊಂಡಷ್ಟು ಇನ್ಯಾರ ಹೆಸರ ಜೊತೆಯಲ್ಲೂ ತಳುಕು ಹಾಕಿಕೊಂಡಿಲ್ಲ.

ಇದನ್ನೂ ಓದಿ: ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್, ಈ ಬಾರಿ ಉದ್ಯಮಿ ಜೊತೆ

ಅನುಷ್ಕಾ ಶೆಟ್ಟಿ ಅವರಿಗೆ 42 ವರ್ಷ. ಅವರು ಶೀಘ್ರವೇ 43ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಅವರು ಕೂಡ ಮದುವೆ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಇಬ್ಬರೂ ವಿವಾಹ ಆಗಬೇಕು ಎಂಬುದು ಈಗಲೂ ಕೆಲವರ ಅಭಿಪ್ರಾಯಗಳಲ್ಲಿ ಒಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ