ಬೇಬಿ ಶಾಮಿಲಿ ಎಂದರೆ ಅನೇಕರಿಗೆ ಪರಿಚಯ ಇದೆ. 90ರ ದಶಕದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದರು. ಬಾಲ ಕಲಾವಿದೆಯಾಗಿ ಪಡೆದ ಜನಪ್ರಿಯತೆ ತುಂಬಾನೇ ದೊಡ್ಡದು. 1987ರ ಜುಲೈ 10ರಂದು ಅವರು ಜನಿಸಿದರು. ಶಾಮಿಲಿ ಜನಿಸಿದ್ದು ತಮಿಳುನಾಡಿನಲ್ಲಿ. ಎರಡೇ ವರ್ಷಕ್ಕೆ ಅಂದರೆ 1980ರಲ್ಲಿ ‘ರಾಜನದೈ’ ಸಿನಿಮಾದಲ್ಲಿ ನಟಿಸಿದರು. ನಂತರ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಹಾಗಾದರೆ ಅವರು ಈಗ ಏನು ಮಾಡುತ್ತಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
1990ರಲ್ಲಿ ಬೇಬಿ ಶಾಮಿಲಿ ಅವರು ‘ಅಂಜಲಿ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಪ್ರಶಸ್ತಿ ದೊರೆಯಯಿತು. ಅದೇ ವರ್ಷ ರಿಲೀಸ್ ಆದ ಮಲಯಾಳಂನ ‘ಮಲೂಟ್ಟಿ’ ಚಿತ್ರದಲ್ಲಿ ನಟಿಸಿ ರಾಜ್ಯ ಪ್ರಶಸ್ತಿ ಪಡೆದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದಲ್ಲಿ ನಟಿಸಿ ಅವರು ರಾಜ್ಯ ಪ್ರಶಸ್ತಿ ಪಡೆದರು. ಒಂದೇ ವರ್ಷ ಮೂರು ರಾಜ್ಯ ಹಾಗೂ ಒಂದು ರಾಷ್ಟ್ರ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಅವರಿಗೆ ಇದೆ.
‘ಪೋಲಿಸ್ ಲಾಕಪ್’, ‘ಭೈರವಿ’, ‘ಹೂವು ಹಣ್ಣು’, ‘ಕಾದಂಬರಿ’, ಮೊದಲಾದ ಕನ್ನಡದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 2000ರವರೆಗೆ ಅವರು ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು. ನಂತರ ಅವರು ನಾಯಕಿ ಆಗಬೇಕು ಎಂದು ಕನಸು ಕಂಡರು. ಈ ಕಾರಣಕ್ಕೆ ಒಂದು ಗ್ಯಾಪ್ ಕೊಟ್ಟರು. 2009ರಲ್ಲಿ ತೆಲುಗಿನ ‘ಒಯೇ’ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದರು. ಆದರೆ, ಅವರು ನಾಯಕಿ ಆಗಿ ಯಶಸ್ಸು ಕಾಣಲಿಲ್ಲ. ಶಾಮಿಲಿ ಮೇಲಿದ್ದ ಕ್ರೇಜ್ ಸಂಪೂರ್ಣವಾಗಿ ಹೋಗಿತ್ತು. ಹೀಗಾಗಿ ಅವರ ಸಿನಿಮಾ ಯಶಸ್ಸು ಕಾಣಲೇ ಇಲ್ಲ.
ಇದು ಅವರಿಗೆ ಬೇಸರ ಮೂಡಿಸಿತು. ಹೀಗಾಗಿ ಮತ್ತೆ ಬ್ರೇಕ್ ಪಡೆದರು. ಏಳು ವರ್ಷ ಬಿಟ್ಟು ಮತ್ತೆ ಬಂದರು. ಆದರೆ, ಸಿನಿಮಾ ಗೆಲ್ಲಲಿಲ್ಲ. ನಂತರ ತಮಿಳು ಹಾಗೂ ತೆಲುಗಿನಲ್ಲಿ ತಲಾ ಒಂದು ಸಿನಿಮಾ ಮಾಡಿದರು. ಆದರೆ, ಗೆಲುವು ಸಿಗಲೇ ಇಲ್ಲ. ಶಾಮಿಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸುಮಾರು 3 ಲಕ್ಷ ಹಿಂಬಾಲಕರು ಇದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಚಿತ್ರಗಳು; ಫೋಟೋ ನೋಡಿ ಯಾರು ಯಾರೆಂದು ಗುರುತಿಸಲು ಸಾಧ್ಯವೇ?
ಪೇಂಟಿಂಗ್ ಮಾಡುವ ಹವ್ಯಾಸ ಶಾಮಿಲಿ ಇತ್ತು. ಈಗ ಅದುವೇ ವೃತ್ತಿಯಾಗಿದೆ. ಶಾಮಿಲಿ ಅವರು ಪೇಂಟಿಂಗ್ ಮಾಡುತ್ತಾರೆ. ಇದನ್ನು ಅವರು ಮಾರಾಟ ಮಾಡುತ್ತಾರೆ. ಅವರ ಕಲ್ಪನೆಗಳನ್ನು ಬಿಡಿಸಿ ಮಾರುತ್ತಾರೆ. ಅವರು ಬಿಡಿಸೋ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Fri, 15 November 24