Year Eneder 2024: ಬರಾಕ್ ಒಬಾಮಾ ಫೇವರಿಟ್ ಸಿನಿಮಾಗಳಲ್ಲಿ ಭಾರತದ ಈ ಚಿತ್ರಕ್ಕೆ ಮೊದಲ ಸ್ಥಾನ

|

Updated on: Dec 21, 2024 | 4:23 PM

2024ರಲ್ಲಿ ಬಿಡುಗಡೆಯಾದ ಅನೇಕ ಸೂಪರ್ ಹಿಟ್ ಚಿತ್ರಗಳು ಬಿಡುಗಡೆ ಆಗಿವೆ. ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಈಗ ಭಾರತದ ಚಿತ್ರ ಒಂದನ್ನು ರೆಕಮಂಡ್ ಮಾಡಿದ್ದಾರೆ. ಅವರು ರೆಕಮಂಡ್ ಮಾಡಿರುವ ಈ ಚಿತ್ರ ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಇದೆ.

Year Eneder 2024: ಬರಾಕ್ ಒಬಾಮಾ ಫೇವರಿಟ್ ಸಿನಿಮಾಗಳಲ್ಲಿ ಭಾರತದ ಈ ಚಿತ್ರಕ್ಕೆ ಮೊದಲ ಸ್ಥಾನ
Year Eneder 2024: ಬರಾಕ್ ಒಬಾಮಾ ಫೇವರಿಟ್ ಸಿನಿಮಾಗಳಲ್ಲಿ ಭಾರತದ ಈ ಚಿತ್ರಕ್ಕೆ ಮೊದಲ ಸ್ಥಾನ
Follow us on

2024 ಕೊನೆ ಆಗುತ್ತಾ ಬಂದಿದೆ. ಈ ವರ್ಷ ಭಾರತದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ರಿಲೀಸ್ ಆಗಿವೆ. ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವ ಮೂಲಕ ಜನರಿಗೆ ಆ ಬಗ್ಗೆ ತಿಳಿಯುವಂತೆ ಆಗಿದೆ. ಆದರೆ, ಇನ್ನೂ ಕೆಲವು ಸಿನಿಮಾಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಜನರಿಗೆ ತಲುಪಿರುವುದಿಲ್ಲ. ಈ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ‘2024ರಲ್ಲಿ ನೋಡಲೇಬೇಕಾದ’ ಸಿನಿಮಾಗಳ ಲಿಸ್ಟ್ ನೀಡಿದ್ದಾರೆ. ಈ ಪೈಕಿ ಭಾರತದ ಸಿನಿಮಾಗೆ ಮೊದಲ ಸ್ಥಾನ ಇದೆ.

ಬರಾಕ್ ಒಬಾಮಾ ಅವರು ಅಮೆರಿಕದ ಮಾಜಿ ಅಧ್ಯಕ್ಷ. ಅವರಿಗೆ ಸಿನಿಮಾಗಳ ಬಗ್ಗೆ ಆಸಕ್ತಿ ಇದೆ. ಈಗ ಅವರು ಹಲವು ದೇಶಗಳ ಸಿನಿಮಾಗಳನ್ನು ನೋಡಿ, ಆ ಪೈಕಿ ಕೆಲವು ಉತ್ತಮ ಚಿತ್ರಗಳನ್ನು ಪಿಕ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಈ ವರ್ಷ ನೋಡಬಹುದಾದ ಕೆಲವು ಚಲನಚಿತ್ರಗಳನ್ನು ನಾನು ಶಿಫಾರಸ್ಸು ಮಾಡುತ್ತಿದ್ದೇನೆ’ ಎಂದು ಒಬಾಮಾ ಬರೆದುಕೊಂಡಿದ್ದಾರೆ. ಈ ಪೈಕಿ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರ ಮೊದಲ ಸ್ಥಾನದಲ್ಲಿ ಇದೆ.


ಪಾಯಲ್ ಕಪಾಡಿಯಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಮಲಯಾಳಂ, ಹಿಂದಿ ಹಾಗೂ ಮರಾಠಿ ಭಾಷೆಯನ್ನು ಒಳಗೊಂಡಿದೆ ಅನ್ನೋದು ವಿಶೇಷ. ಈ ಸಿನಿಮಾ ಈ ವರ್ಷ ನಡೆದ 77ನೇ ಸಾಲಿನ ಕಾನ್ಸ್​ ಸಿನಿಮೋತ್ಸವದಲ್ಲಿ ಸ್ಪರ್ಧಿಸಿತ್ತು ಅನ್ನೋದು ವಿಶೇಷ. 1994ರ ಬಳಿಕ ಭಾರತದ ಚಿತ್ರ ಒಂದು ಕಾನ್ಸ್ ಸಿನಿಮೋತ್ಸವದ ಮುಖ್ಯ ಸ್ಪರ್ಧೆಯಲ್ಲಿ ಇದ್ದಿದ್ದು ಇದೇ ಮೊದಲು.

ಇದನ್ನೂ ಓದಿ: ದರ್ಶನ್​ ಫ್ಯಾನ್ಸ್​​ಗೆ ಡಬಲ್ ಸಿಹಿ ಸುದ್ದಿ; ‘ಡೆವಿಲ್’ ಶೂಟ್​ಗೆ ದಿನಾಂಕ ಫಿಕ್ಸ್?

ಮಲಯಾಳಂ ನಟಿ ಕನಿ ಕುಸ್ರುತಿ, ದಿವ್ಯ ಪ್ರಭ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರವನ್ನು ಬರಾಕ್ ಒಬಾಮಾ ಅವರೇ ನೋಡುವಂತೆ ರೆಕಮಂಡ್ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.