AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಯ್ ದೇವಗನ್​ಗೆ ಶಾಕ್; ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ನಾಶ

ಬಾಲಿವುಡ್ ನಟ ಅಜಯ್ ದೇವ್‌ಗನ್ ಅವರ ಮುಂಬೈನ ಜುಹು ಬಂಗಲೆಯಲ್ಲಿ ಅನಧಿಕೃತ ನಿರ್ಮಾಣಗಳನ್ನು ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಯಾವುದೇ ಅನುಮತಿ ಪಡೆಯದೆ ಒಳಾಂಗಣ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪದ ಮೇಲೆ ನೋಟೀಸ್ ನೀಡಲಾಗಿತ್ತು. ಸಮಯಕ್ಕೆ ಸರಿಯಾಗಿ ಉತ್ತರ ಬಾರದ ಕಾರಣ ಈ ಕಠಿಣ ತೆರವಿನ ಕಾರ್ಯಾಚರಣೆಯನ್ನು ನೆರವೇರಿಸಲಾಗಿದೆ.

ಅಜಯ್ ದೇವಗನ್​ಗೆ ಶಾಕ್; ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ನಾಶ
ಕಾಜಲ್-ಅಜಯ್
ರಾಜೇಶ್ ದುಗ್ಗುಮನೆ
|

Updated on: Oct 17, 2026 | 3:35 PM

Share

ಮುಖ್ಯಾಂಶಗಳು

  • ಅಜಯ್ ದೇವ್‌ಗನ್​ಗೆ ಶಾಕ್
  • ಜುಹು ಬಂಗಲೆ ಮೇಲೆ ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ
  • 2. ಅನಧಿಕೃತ ನಿರ್ಮಾಣ ಆರೋಪ

ಬಾಲಿವುಡ್‌ನ ಖ್ಯಾತ ನಟ ಅಜಯ್ ದೇವ್‌ಗನ್ ಅವರಿಗೆ ಮುಂಬೈ ಮಹಾನಗರ ಪಾಲಿಕೆ ಕಡೆಯಿಂದ ದೊಡ್ಡ ಮಟ್ಟದ ಶಾಕ್ ಎದುರಾಗಿದೆ. ಮುಂಬೈನ ಪ್ರತಿಷ್ಠಿತ ಜುಹು ಪ್ರದೇಶದಲ್ಲಿರುವ ಅವರ ಐಷಾರಾಮಿ ಬಂಗಲೆಯಲ್ಲಿ ನಡೆಸಲಾಗಿದ್ದ ಅನಧಿಕೃತ ನಿರ್ಮಾಣ ಕಾರ್ಯಗಳನ್ನು ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಯಾವುದೇ ಮುನ್ಸೂಚನೆ ಹಾಗೂ ಸರಿಯಾದ ಅನುಮತಿ ಪಡೆಯದೆ ಕಟ್ಟಡದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಈ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ.

ಈ ಹಿಂದೆ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಅಜಯ್ ದೇವ್‌ಗನ್ ಅವರ ಬಂಗಲೆಗೆ ಬಿಎಂಸಿ ವತಿಯಿಂದ ಕೆಲಸ ನಿಲ್ಲಿಸುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಅನುಮತಿ ಇಲ್ಲದೆ ಒಳಾಂಗಣ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ನೋಟೀಸ್‌ಗೆ ಪ್ರತಿಕ್ರಿಯೆ ನೀಡಲು ನಟನ ಪರ ವಕೀಲರು ಅಥವಾ ತಂಡವು ನಾಲ್ಕು ವಾರಗಳ ಕಾಲಾವಕಾಶವನ್ನು ಕೇಳಿತ್ತು. ಆದರೆ ಅಧಿಕಾರಿಗಳು ನಿಗದಿತ ಸಮಯದೊಳಗೆ ಯಾವುದೇ ಸ್ಪಷ್ಟ ಉತ್ತರ ಬಾರದ ಕಾರಣ ಧ್ವಂಸ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಬಿಎಂಸಿ ಅಧಿಕಾರಿಗಳ ಈ ಕಠಿಣ ಕ್ರಮದ ಕುರಿತು ನಟ ಅಜಯ್ ದೇವ್‌ಗನ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಮುಂಬೈ ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಟ್ಟಡಗಳ ತೆರವಿನ ಭಾಗವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಾನೂನು ಪ್ರಕಾರ ಮುಂದಿನ ದಿನಗಳಲ್ಲಿ ನಟ ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುತ್ತಾರಾ ಅಥವಾ ದಾಖಲೆಗಳನ್ನು ಒದಗಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಮುಂಬೈ ನಗರದಾದ್ಯಂತ ಅನಧಿಕೃತ ನಿರ್ಮಾಣಗಳ ವಿರುದ್ಧ ಬಿಎಂಸಿ ಬಿಗಿಯಾದ ಕ್ರಮಗಳನ್ನು ಮುಂದುವರಿಸಿದೆ. ಸಾಮಾನ್ಯ ನಾಗರಿಕರಿಂದ ಹಿಡಿದು ದೊಡ್ಡ ಸೆಲೆಬ್ರಿಟಿಗಳ ಆಸ್ತಿಗಳ ಮೇಲೂ ಕಣ್ಣಿಡಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯು ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಗುಟ್ಕಾ ಜಾಹೀರಾತು ವಿವಾದ: ನೋಟಿಸ್‌ಗೆ ಉತ್ತರಿಸಿದ ಶಾರುಖ್, ಅಜಯ್, ಟೈಗರ್ ಶ್ರಾಫ್

ಮುಂಬರುವ ದಿನಗಳಲ್ಲಿ ಈ ವಿವಾದವು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಅಧಿಕೃತ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್