ಹೀನಾಯವಾಗಿ ಸೋತ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್‌ ಸಿನಿಮಾ ‘ಹೈವಾನ್’

ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅವರಂತಹ ಸ್ಟಾರ್ ಹೀರೋಗಳು ನಟಿಸಿದ್ದರೂ ಕೂಡ ‘ಹೈವಾನ್’ ಸಿನಿಮಾ ಎರಡು ದಿನಗಳಲ್ಲಿ ಪ್ರಪಂಚದಾದ್ಯಂತ ಕೇವಲ 8.60 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಸೋಲಿನಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ..

ಹೀನಾಯವಾಗಿ ಸೋತ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್‌ ಸಿನಿಮಾ ‘ಹೈವಾನ್’
Haiwaan Movie Poster

Updated on: Sep 14, 2026 | 12:02 PM

ಬಾಲಿವುಡ್‌ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅವರು ಸುದೀರ್ಘ 18 ವರ್ಷಗಳ ನಂತರ ಒಂದಾಗಿ ನಟಿಸಿದ್ದ ‘ಹೈವಾನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದೆ. ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಈ ವರ್ಷದ ಅತ್ಯಂತ ಹೀನಾಯ ಸೋಲುಗಳಲ್ಲಿ ಒಂದಾಗಿದೆ.

ಖ್ಯಾತ ಡೈರೆಕ್ಟರ್ ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾದಲ್ಲಿ ಬೊಮನ್ ಇರಾನಿ, ಶ್ರಿಯಾ ಪಿಲ್ಗಾಂವ್ಕರ್ ಮತ್ತು ಸಯಾಮಿ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅಕ್ಟೋಬರ್ 2025ರಲ್ಲಿ ನಿಧನರಾದ ಹಿರಿಯ ನಟ ಅಸ್ರಾನಿ ಅವರ ಕೊನೆಯ ಅಭಿನಯದ ಚಿತ್ರ ಇದಾಗಿದೆ.

ದೊಡ್ಡ ತಾರಾಗಣ ಹಾಗೂ ಪ್ರಚಾರದ ಹೊರತಾಗಿಯೂ ‘ಹೈವಾನ್’ ಚಿತ್ರಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿದೆ. ಮೊದಲ ದಿನ ಭಾರತದಲ್ಲಿ ಕೇವಲ 3 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದ ಈ ಚಿತ್ರ, ಒಟ್ಟು 4.60 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಕಲೆಕ್ಷನ್ ಮತ್ತಷ್ಟು ಕುಸಿತ ಕಂಡಿದ್ದು, ಚಿತ್ರಕ್ಕೆ ಭಾರಿ ಹೊಡೆತ ಬಿದ್ದಿದೆ.

2008ರ ‘ತಶನ್’ ಚಿತ್ರದ ನಂತರ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಬರೋಬ್ಬರಿ 18 ವರ್ಷಗಳ ಬಳಿಕ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದರು. 1994ರಲ್ಲಿ ‘ಯೇ ದಿಲ್ಲಗಿ’ ಚಿತ್ರದ ಮೂಲಕ ಆರಂಭವಾದ ಇವರ ಕಾಂಬಿನೇಷನ್, ‘ಮೈ ಖಿಲಾಡಿ ತೂ ಅನಾಡಿ’ (1994), ‘ತೂ ಚೋರ್ ಮೈ ಸಿಪಾಯಿ’ (1996), ‘ಕೀಮತ್’ (1998) ಮತ್ತು ‘ಆರ್ಝೂ’ (1999) ರೀತಿಯ ಹಿಟ್ ಸಿನಿಮಾಗಳನ್ನು ನೀಡಿದ್ದರು. ಹೀಗಾಗಿ ಈ ಜೋಡಿಯ ಹೊಸ ಸಿನಿಮಾ ಮೇಲೆ ಭಾರಿ ನಿರೀಕ್ಷೆಯಿತ್ತು.

ಇದನ್ನೂ ಓದಿ: ಅಕ್ಷಯ್ ಕುಮಾರ್, ಹಣದಾಸೆ ಇರುವ ನಟರೇ? ಇತಿಹಾಸ ಏನು ಹೇಳುತ್ತದೆ?

‘ಹೈವಾನ್’ ಚಿತ್ರವು 2016ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಮಲಯಾಳಂ ಕ್ರೈಮ್ ಥ್ರಿಲ್ಲರ್ ‘ಒಪ್ಪಂ’ ಸಿನಿಮಾದ ಅಧಿಕೃತ ರಿಮೇಕ್ ಆಗಿದೆ. ಮೂಲ ಚಿತ್ರವನ್ನೂ ಸಹ ಪ್ರಿಯದರ್ಶನ್ ಅವರೇ ನಿರ್ದೇಶಿಸಿದ್ದರು, ಅದರಲ್ಲಿ ಮೋಹನ್‌ಲಾಲ್ ಅಂಧ ವ್ಯಕ್ತಿಯಾಗಿ ಹಾಗೂ ಸಮುದ್ರಖನಿ ಸೀರಿಯಲ್ ಕಿಲ್ಲರ್ ಆಗಿ ಅಭಿನಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us