ಸ್ಟಾರ್ ಸೆಲೆಬ್ರಿಟಿಗಳ ಮಕ್ಕಳು ಹೊಸ ಹೊಸ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಿ ಮಿಂಚುತ್ತಾರೆ. ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಧರಿಸುವುದಿಲ್ಲ. ಫ್ಯಾಷನ್ ಸಲುವಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪುತ್ರ ಆರವ್ ಕುಮಾರ್ (Aarav Kumar) ಆ ರೀತಿ ಅಲ್ಲ. ಆರವ್ ಕುಮಾರ್ ಅವರು ಸಿಂಪಲ್ ಆಗಿರಲು ಬಯಸುತ್ತಾರೆ. ಈ ವಿಚಾರವನ್ನು ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ಆರವ್ ಕುಮಾರ್ ಸೆಕೆಂಡ್ ಹ್ಯಾಂಡ್ ಬಟ್ಟೆ (Second Hand Clothes) ಧರಿಸುತ್ತಾರೆ ಎಂದು ಕೂಡ ಅಕ್ಷಯ್ ಕುಮಾರ್ (Akshay Kumar) ಹೇಳಿದ್ದಾರೆ. ಈ ವಿಷಯ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
‘ಲಂಡನ್ ಯೂನಿವರ್ಸಿಟಿಯಲ್ಲಿ ಆರವ್ ಓದುತ್ತಿದ್ದಾನೆ. 15 ವರ್ಷಕ್ಕೆ ಆತ ಮನೆಬಿಟ್ಟು ಹೋದ. ವಿದ್ಯಾಭ್ಯಾಸದ ಬಗ್ಗೆ ಅವನಿಗೆ ಯಾವಾಗಲೂ ಆಸಕ್ತಿ ಇತ್ತು. ಒಬ್ಬನೇ ಇರಲು ಇಷ್ಟಪಡುತ್ತಾನೆ. ಅವನು ಮನೆಯಿಂದ ಹೊರಗೆ ಹೋಗಬಾರದು ಅಂದು ನಾನು ಬಯಸಿದ್ದೆ. ಆದರೆ ಅದು ಅವನ ನಿರ್ಧಾರ. ಹಾಗಂತ ನಾನು ಅವನನ್ನು ತಡೆಯಲಿಲ್ಲ. ಯಾಕೆಂದರೆ ನಾನು ಕೂಡ 14ನೇ ವಯಸ್ಸಿಗೆ ಮನೆ ಬಿಟ್ಟವನು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
‘ಆರವ್ ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಾನೆ. ಚೆನ್ನಾಗಿ ಅಡುಗೆ ಮಾಡುತ್ತಾನೆ ಕೂಡ. ದುಬಾರಿಯಾದ ಬಟ್ಟೆಗಳನ್ನು ಖರೀದಿಸಲು ಆತ ಇಷ್ಟಪಡುವುದಿಲ್ಲ. ಫಿಫ್ಟಿ ಎಂಬ ಸೆಕೆಂಡ್ ಹ್ಯಾಂಡ್ ಅಂಗಡಿಗೆ ಅವನು ಹೋಗುತ್ತಾನೆ. ಅಲ್ಲಿ ಬಟ್ಟೆ ಖರೀದಿಸುತ್ತಾನೆ. ಸಂಪನ್ಮೂಲ ವ್ಯರ್ಥ ಮಾಡುವುದು ಅವನಿಗೆ ಇಷ್ಟ ಇಲ್ಲ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಇದನ್ನೂ ಓದಿ: 500 ರೂಪಾಯಿ ಬಾಡಿಗೆ ಮನೆ ಖರೀದಿಸಲಿರುವ ಅಕ್ಷಯ್ ಕುಮಾರ್; ಕಾರಣ ಏನು?
ಆರವ್ ಕುಮಾರ್ ಅವರಿಗೆ ಈಗ 21 ವರ್ಷ ವಯಸ್ಸು. ಹಾಗಾದರೆ ಅವರು ಯಾವಾಗ ಹೀರೋ ಆಗಿ ಬಾಲಿವುಡ್ಗೆ ಎಂಟ್ರಿ ನೀಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಆರವ್ ಕುಮಾರ್ ಅವರಿಗೆ ನಟನೆ ಇಷ್ಟವಿಲ್ಲ. ಫ್ಯಾಷನ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರು ನಿರ್ಧರಿಸಿದ್ದಾರೆ. ಮಗ ಆಯ್ಕೆ ಮಾಡಿಕೊಂಡಿರುವ ಈ ದಾರಿಯ ಬಗ್ಗೆ ಅಕ್ಷಯ್ ಕುಮಾರ್ ಅವರಿಗೆ ಹೆಮ್ಮೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.