ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಇಂದು (ಅಕ್ಟೋಬರ್ 11) ಜನ್ಮದಿನದ ಸಂಭ್ರಮ. ಅವರು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲೂ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಹಲವು ದಶಕಗಳಿಂದ ಅವರು ಕಲಾ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಅವರ ನಟನೆಗೆ ಮನಸೋಲದವರೇ ಇಲ್ಲ ಎಂದರೂ ತಪ್ಪಾಗಲಾರದು. ಅಮಿತಾಭ್ ಬಚ್ಚನ್ ಅವರು ಸಾಗಿ ಬಂದ ಹಾದಿ ಸುಲಭದ್ದಾಗಿರಲಿಲ್ಲ. ಅವರು ಒಮ್ಮೆ ಎಲ್ಲವನ್ನೂ ಕಳೆದುಕೊಂಡಿದ್ದರು. ಆದರೆ ಅವರು ಕುಗ್ಗಲಿಲ್ಲ. ಮತ್ತೆ ಗೆದ್ದು ತೋರಿಸಿದರು.
1999ಕ್ಕೂ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆ ವರ್ಷ ಬಿಸ್ನೆಸ್ನಲ್ಲಿ ಅಮಿತಾಭ್ ಬಚ್ಚನ್ ಕೈ ಸುಟ್ಟುಕೊಂಡರು. ‘ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್’ ಸಂಸ್ಥೆ ದೊಡ್ಡ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಮನೆ ಎದುರು ಬಂದರು. ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಬಂತು. ಆದರೆ, ಅಮಿತಾಭ್ ಅವರು ಇದಕ್ಕೆ ಅಂಜಲಿಲ್ಲ. ನಟನೆಯ ಮೂಲಕ ಮತ್ತೆ ಗೆದ್ದು ತೋರಿಸಿದರು.
1999ರ ವೇಳೆಗೆ ಅಮಿತಾಭ್ ಅವರು ವೃತ್ತಿ ಜೀವನದಲ್ಲಿ 44 ವರ್ಷ ಕಳೆದಿದ್ದರು. ಆದರೆ, ಅವರಿಗೆ ಎಂದಿಗೂ ಆ ರೀತಿಯ ಕಷ್ಟ ಬಂದಿರಲೇ ಇಲ್ಲ. ಈ ಕಷ್ಟದಿಂದ ಹೊರ ಬರಲು ಅವರು ನಿರ್ಧರಿಸಿದರು. ನಿರ್ಮಾಪಕ ಯಶ್ ಚೋಪ್ರಾ ಮನೆಗೆ ಹೋದರು. ಅವಕಾಶಕ್ಕಾಗಿ ಅಂಗಲಾಚಿದರು. ಶಾರುಖ್ ಅಭಿನಯದ ‘ಮೊಹಬ್ಬತೇ’ (2000ರಲ್ಲಿ ರಿಲೀಸ್ ಆಯಿತು) ಚಿತ್ರದಲ್ಲಿ ಅಮಿತಾಭ್ಗೆ ಒಂದು ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದ ಮೂಲಕ ಅಮಿತಾಭ್ ಅವರು ಕಂಬ್ಯಾಕ್ ಮಾಡಿದರು. ಅವರ ಬದುಕು ಮತ್ತೆ ಬದಲಾಯಿತು.
ಇದನ್ನೂ ಓದಿ: ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿ ಅಮಿತಾಭ್ ಎಂದು ಟ್ವೀಟ್ ಮಾಡಿದ ತಾಲಿಬಾನ್
ಸಿಕ್ಕ ಎಲ್ಲಾ ಪಾತ್ರಗಳನ್ನು ಒಪ್ಪಿ ನಟಿಸಿದರು ಅಮಿತಾಭ್. ಇದರಿಂದ ಅವರಿಗೆ ಹಣ ಸಿಗುತ್ತಾ ಹೋಯಿತು. ಒಂದೊಂದೇ ಸಾಲವನ್ನು ಅವರು ತೀರಿಸುತ್ತಾ ಬಂದರು. ಮತ್ತೆ ಬೇಡಿಕೆ ಹೆಚ್ಚಿಸಿಕೊಂಡರು. ಈಗ 81ರ ವಯಸ್ಸಲ್ಲೂ ಅವರು ಚಾರ್ಮ್ ಉಳಿಸಿಕೊಂಡಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಶೋನ ಅವರು ನಡೆಸಿಕೊಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದನ್ನು ನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ಅಮಿತಾಭ್ ಜನ್ಮದಿನಕ್ಕೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ