ನಟಿ ಮಲೈಕಾ ಅರೋರಾ (Malaika Arora) ಹಾಗೂ ನಟ ಅರ್ಜುನ್ ಕಪೂರ್ ಅವರ ಲವ್ಸ್ಟೋರಿ ಸೀಕ್ರೆಟ್ ಆಗಿ ಉಳಿದುಕೊಂಡಿಲ್ಲ. ಇವರಿಬ್ಬರೂ ಡೇಟಿಂಗ್ ಮಾಡೋಕೆ ಆರಂಭಿಸಿ ಹಲವು ವರ್ಷಗಳೇ ಕಳೆದಿವೆ. ಈ ಜೋಡಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದೂ ಇದೆ. ಇವರ ಬಗ್ಗೆ ಹುಟ್ಟಿಕೊಂಡಿರುವ ವದಂತಿಗಳು ಒಂದೆರಡಲ್ಲ. ಆದರೆ, ಯಾವ ವದಂತಿಗೂ ಈ ಜೋಡಿ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಇತ್ತೀಚೆಗೆ ಇಂಗ್ಲಿಷ್ ವೆಬ್ಸೈಟ್ ಒಂದು ಮಲೈಕಾ ಅರೋರಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಹಬ್ಬಿಸಿತ್ತು. ಇದಕ್ಕೆ ಅರ್ಜುನ್ ಕಪೂರ್ (Arjun Kapoor) ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಅರ್ಜುನ್ ಕಪೂರ್ ಅವರ ವಯಸ್ಸು 37 ಹಾಗೂ ಮಲೈಕಾ ವಯಸ್ಸು 49. ಇಬ್ಬರ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರ ಇದೆ. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಇವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಕೆಲ ದಿನಗಳ ಕಾಲ ಈ ವದಂತಿ ಚಾಲ್ತಿಯಲ್ಲಿತ್ತು. ಈಗ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿದೆ ಎಂದು ಸುದ್ದಿ ಹಬ್ಬಿಸಲಾಯಿತು.
ಸೆಲೆಬ್ರಿಟಿಗಳ ವಲಯದಲ್ಲಿ ಮದುವೆ ಆಗದೆ ಮಗು ಪಡೆಯೋದು ತುಂಬಾನೇ ಕಾಮನ್. ಇದಕ್ಕೆ ಸಮಾಜ ಏನು ಹೇಳುತ್ತದೆ ಎಂಬ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದೇ ರೀತಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಮದುವೆ ಆಗದೆ ಮಗು ಪಡೆಯಲು ಚಿಂತನೆ ನಡೆಸಿದ್ದಾರೆ, ಶೀಘ್ರವೇ ಮಲೈಕಾ ತಾಯಿ ಆಗಲಿದ್ದಾರೆ ಎಂದು ವರದಿ ಮಾಡಲಾಗಿತ್ತು.
ಈ ಸುದ್ದಿಯ ಸ್ಕ್ರೀನ್ಶಾಟ್ ಅನ್ನು ಅರ್ಜುನ್ ಕಪೂರ್ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಹಾಗೂ ಸುದ್ದಿ ಬರೆದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ‘ಜೀವಗಳ ಜತೆ ಆಟ ಆಡಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅರ್ಜುನ್ ಕಪೂರ್ಗಿಂತ 12 ವರ್ಷ ದೊಡ್ಡವರು ಮಲೈಕಾ; ನಟಿಯ ವಿಚ್ಛೇದನಕ್ಕೆ ಕಾರಣವಾಗಿದ್ದು ಅಫೇರ್?
ಅರ್ಜುನ್ ಕಪೂರ್ ಅವರ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗದೇ ಎಷ್ಟೋ ವರ್ಷಗಳೇ ಕಳೆದು ಹೋಗಿವೆ. ಅವರು ಇತ್ತೀಚೆಗೆ ಸಿನಿಮಾಗಿಂತ ಮಲೈಕಾ ಜತೆಗಿನ ರಿಲೇಶನ್ಶಿಪ್ ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ವಿಚಾರ ಅವರ ವೃತ್ತಿ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.