75th Cannes Film Festival: ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ ನಟಿ ದೀಪಿಕಾ ಪಡುಕೋಣೆ
TV9 Web | Updated By: Rakesh Nayak Manchi
Updated on:
May 30, 2022 | 10:20 AM
75ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ್ದಾರೆ. ಈ ಬಾರಿಯ ಫೆಸ್ಟಿವಲ್‌ನಲ್ಲಿ ಅವರು ತೀರ್ಪುಗಾರರಾಗಿ ಆಗಮಿಸಿದರು.
1 / 7
75ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ್ದಾರೆ.
2 / 7
ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಿಳಿಯ ರಫಲ್ ಸೀರೆ ಉಟ್ಟು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
3 / 7
ರಫಲ್ ಸೀರೆಯ ಜೊತೆಗೆ ಮುತ್ತಿನ ಹಾರ, ರೌಂಡ್ ಸ್ಟಡ್ ಕಿವಿಯೋಲೆ ಧರಿಸಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
4 / 7
ಈ ಬಾರಿಯ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ, ತೀರ್ಪುಗಾರರಾಗಿ ಆಗಮಿಸಿದ್ದರು.
5 / 7
2017ರಿಂದ ದೀಪಿಕಾ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಿಯಮಿತವಾಗಿದ್ದರೂ, ಈ ವರ್ಷ ಅವರು ತೀರ್ಪುಗಾರರ ಸದಸ್ಯರಾಗಿ ಭಾಗವಹಿಸುತ್ತಿರುವುದು ಅವರಿಗೆ ವಿಶೇಷವಾಗಿದೆ.
6 / 7
ತೀರ್ಪುಗಾರರ ಅಧ್ಯಕ್ಷ ವಿನ್ಸೆಂಟ್ ಲಿಂಡನ್, ತೀರ್ಪುಗಾರರ ಸದಸ್ಯರಾದ ಲಾಡ್ಜ್ ಲೈ, ಜೋಕಿಮ್ ಟ್ರೈಯರ್, ಜೆಫ್ ನಿಕೋಲ್ಸ್, ರೆಬೆಕಾ ಹಾಲ್, ನೂಮಿ ರಾಪೇಸ್, ಜಾಸ್ಮಿನ್ ಟ್ರಿಂಕಾ, ಅಸ್ಗರ್ ಫರ್ಹಾದಿ ಅವರೊಂದಿಗೆ ದೀಪಿಕಾ ಪಡುಕೋಣೆ.
7 / 7
ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್-ಸ್ಟಾರ್ಟರ್ ಪ್ರಾಜೆಕ್ಟ್ 'ಕೆ' ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್ ಜೊತೆಗೆ 'ಪಠಾಣ್' ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.