ಗ್ರ್ಯಾಮಿ 2027: ಏಳು ವಿಭಾಗದಲ್ಲಿ ಸ್ಪರ್ಧಿಸಿದ್ದ ‘ಧುರಂಧರ್ 2’ಗೆ ಹಿನ್ನಡೆ

ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಕಳೆದ ಅಕ್ಟೋಬರ್‌ನಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರದ ಸೌಂಡ್‌ಟ್ರ್ಯಾಕ್ ಅನ್ನು ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸಲ್ಲಿಸಿದ್ದವು. ಅವುಗಳಲ್ಲಿ 'ಫಿರ್ ಸೆ' ಹಾಡನ್ನು ಬೆಸ್ಟ್ ಸಾಂಗ್ ರಿಟನ್ ಫಾರ್ ವಿಷುವಲ್ ಮೀಡಿಯಾ, 'ಆರಿ ಆರಿ' ಹಾಡನ್ನು ಬೆಸ್ಟ್ ಏಷ್ಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ 'ಕನ್ಹಯ್ಯ' ಮತ್ತು 'ಜಾನ್ ಸೆ ಗುಜರ್ತೆ ಹೈ' ಹಾಡುಗಳನ್ನು ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ವಿಭಾಗಗಳಿಗೆ ಕಳುಹಿಸಲಾಗಿತ್ತು. ಆದರೆ ಯಾವ ವಿಭಾಗದಲ್ಲೂ ನಾಮಿನೇಟ್ ಆಗಿಲ್ಲ.

ಗ್ರ್ಯಾಮಿ 2027: ಏಳು ವಿಭಾಗದಲ್ಲಿ ಸ್ಪರ್ಧಿಸಿದ್ದ ‘ಧುರಂಧರ್ 2’ಗೆ ಹಿನ್ನಡೆ
Dhurandhar 2

Updated on: Nov 17, 2026 | 2:54 PM

‘ಧುರಂಧರ್’ ಮತ್ತು ಅದರ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿವೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನೇ ಬರೆದಿದೆ. ಸಿನಿಮಾದ ಜೊತೆಗೆ ಸಿನಿಮಾದ ಹಾಡುಗಳು ಮತ್ತು ಸಿನಿಮಾದ ಹಿನ್ನೆಲೆ ಸಂಗೀತ ಸಹ ದೊಡ್ಡ ಹಿಟ್ ಆಗಿತ್ತು. ‘ಧುರಂಧರ್ 2’ ಸಿನಿಮಾ ಅಂತರಾಷ್ಟ್ರೀಯ ಸಿನಿಮಾಗಳ ವಿರುದ್ಧ ಸ್ಪರ್ಧಿಸಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಅದರಲ್ಲೂ ಸಿನಿಮಾದ ಸಂಗೀತಕ್ಕೆ ಅಂತರಾಷ್ಟ್ರೀಯ ಮನ್ನಣೆ ಸಿಗುವ ನಂಬಿಕೆ ಹಲವರು ಅಭಿಮಾನಿಗಳಿಗಿತ್ತು. ಅದರಂತೆ ‘ಧುರಂಧರ್ 2’ ಸಿನಿಮಾ ಪ್ರತಿಷ್ಠಿ ಗ್ರ್ಯಾಮಿಯ ಒಂಬತ್ತು ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆ ಮಾಡಿತ್ತು. ಆದರೆ ಯಾವ ವಿಭಾಗದಲ್ಲಿಯೂ ಸಿನಿಮಾ ನಾಮಿನೇಟ್ ಆಗಿಲ್ಲ.

ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಕಳೆದ ಅಕ್ಟೋಬರ್‌ನಲ್ಲಿ ‘ಧುರಂಧರ್: ದಿ ರಿವೆಂಜ್’ ಚಿತ್ರದ ಸೌಂಡ್‌ಟ್ರ್ಯಾಕ್ ಅನ್ನು ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸಲ್ಲಿಸಿದ್ದವು. ಅವುಗಳಲ್ಲಿ ‘ಫಿರ್ ಸೆ’ ಹಾಡನ್ನು ಬೆಸ್ಟ್ ಸಾಂಗ್ ರಿಟನ್ ಫಾರ್ ವಿಷುವಲ್ ಮೀಡಿಯಾ, ‘ಆರಿ ಆರಿ’ ಹಾಡನ್ನು ಬೆಸ್ಟ್ ಏಷ್ಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ‘ಕನ್ಹಯ್ಯ’ ಮತ್ತು ‘ಜಾನ್ ಸೆ ಗುಜರ್ತೆ ಹೈ’ ಹಾಡುಗಳನ್ನು ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ವಿಭಾಗಗಳಿಗೆ ಕಳುಹಿಸಲಾಗಿತ್ತು. ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದ ಐದು ವಿಭಾಗಗಳಲ್ಲಿ ‘ಬೆಸ್ಟ್ ಏಷ್ಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್’ ಕೂಡ ಒಂದಾಗಿತ್ತು. ನಿನ್ನೆ (ನವೆಂಬರ್ 16) 69ನೇ ಗ್ರ್ಯಾಮಿ ನಾಮಿನೇಷನ್ ಪಟ್ಟಿ ಪ್ರಕಟವಾಗಿದ್ದು, ‘ಧುರಂಧರ್: ದಿ ರಿವೇಂಜ್’ ಸಿನಿಮಾ ಯಾವ ವಿಭಾಗದಲ್ಲಿಯೂ ನಾಮಿನೇಟ್ ಆಗಿಲ್ಲ.

Loading...

69ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 7, 2027 ರಂದು ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಈ ಸಮಾರಂಭವನ್ನು ಎಬಿಸಿ, ಡಿಸ್ನಿ+ ಮತ್ತು ಹುಲು ವೇದಿಕೆಗಳಲ್ಲಿ ಏಕಕಾಲದಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಈ ಬಾರಿಯ ನಾಮನಿರ್ದೇಶನದಲ್ಲಿ ಗಾಯಕರಾದ ರೇ 11 ವಿಭಾಗಗಳಲ್ಲಿ ಸ್ಥಾನ ಪಡೆದು ಮುಂಚೂಣಿಯಲ್ಲಿದ್ದರೆ, ರೊಸಾಲಿಯಾ 9 ಮತ್ತು ಎಲ್ಲಾ ಲ್ಯಾಂಗ್ಲಿ 7 ನಾಮನಿರ್ದೇಶನಗಳನ್ನು ಪಡೆದಿದ್ದಾರೆ. ಗ್ರ್ಯಾಮಿಯಲ್ಲಿ ಹೊಸದಾಗಿ ಪರಿಚಯಿಸಲಾದ ಏಷ್ಯನ್ ಪಾಪ್ ವಿಭಾಗವು ಸಾಕಷ್ಟು ಟೀಕೆಗಳಿಗೂ ಗುರಿಯಾಗಿದೆ. ಈ ವಿಭಾಗವನ್ನು ವಿರೋಧಿಸಿ ಖ್ಯಾತ ಬ್ಯಾಂಡ್ ಬಿಟಿಎಸ್ (BTS) ಈ ವರ್ಷ ಗ್ರ್ಯಾಮಿ ಪ್ರಶಸ್ತಿಗಳಿಗೆ ಯಾವುದೇ ಎಂಟ್ರಿಗಳನ್ನು ಸಲ್ಲಿಸದೆ ದೂರ ಉಳಿದಿದೆ.

ಇದನ್ನೂ ಓದಿ:57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಧುರಂಧರ್’, ‘ರಾಮಾಯಣ’ ಚಿತ್ರಗಳಿಗೆ ಅಗ್ರಸ್ಥಾನ

ಈ ವರ್ಷ ತಮಳಿನ ಒಂದು ಹಾಡು ಗ್ರ್ಯಾಮಿಗೆ ನಾಮಿನೇಟ್ ಆಗಿದೆ. ದೇವನ್ ಏಕಾಂಭರನ್ ಸಂಗೀತ ನಿರ್ದೇಶಿಸಿ ಹಾಡಿರುವ ‘ವರುವಾಯ್’ ಎಂಬ ಹಾಡು ಈ ಬಾರಿ ಗ್ರ್ಯಾಮಿಗೆ ನಾಮಿನೇಟ್ ಆಗಿದೆ. ಈ ಹಾಡಿನ ಹೊರತಾಗಿ ಭಾರತದ ಇನ್ಯಾವ ಹಾಡುಗಳು ಸಹ ಈ ಬಾರಿ ಗ್ರ್ಯಾಮಿ ಪಟ್ಟಿಯಲ್ಲಿ ಇಲ್ಲ. ಈ ಹಿಂದೆ ‘ಆರ್​ಆರ್​ಆರ್’ ಸೇರಿದಂತೆ ಇನ್ನೂ ಹಲವು ಭಾರತದ ಹಾಡುಗಳು ಗ್ರ್ಯಾಮಿ ಪಡೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us