ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ’ ಹೊಸ ಚರಿತ್ರೆ; ನಿರ್ಮಾಪಕರಿಗೆ 150 ಪಟ್ಟು ಲಾಭ

ಎರಡು ಕೋಟಿ ಬಜೆಟ್‌ನ 'ಹನುಮಾನ್ ಅಂಶ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಇತಿಹಾಸ ಸೃಷ್ಟಿಸಿದೆ. ಪ್ರೇಕ್ಷಕರ ಪ್ರೀತಿಯಿಂದ ಈ ಚಿತ್ರ ಮುನ್ನೂರು ಕೋಟಿ ರೂಪಾಯಿ ಗಳಿಸಿ ಸೈ ಎನಿಸಿಕೊಂಡಿದೆ. ಸಾಲು ಸಾಲು ದೊಡ್ಡ ನಟರ ಬಿಗ್ ಬಜೆಟ್ సినిಮಾ ಸೋತರೂ ಈ ಸಣ್ಣ ಸಿನಿಮಾ ಮಾತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಹೊಸ ದಾಖಲೆ ಬರೆದಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ’ ಹೊಸ ಚರಿತ್ರೆ; ನಿರ್ಮಾಪಕರಿಗೆ 150 ಪಟ್ಟು ಲಾಭ
ಹನುಮಾನ್ ಅಂಶ್

Updated on: Sep 17, 2026 | 2:51 PM

ಮುಖ್ಯಾಂಶಗಳು

  • ಕೇವಲ 2 ಕೋಟಿ ಬಜೆಟ್, ಗಳಿಸಿದ್ದು 300 ಕೋಟಿ
  • ದೊಡ್ಡ ನಟರ ಚಿತ್ರಗಳನ್ನೇ ಧೂಳಿಪಟ ಮಾಡಿದ ಸಣ್ಣ ಸಿನಿಮಾ
  • ಜನರ ಪ್ರಚಾರದಿಂದಲೇ ಗೆದ್ದು ಬೀಗಿದ 'ಹನುಮಾನ್ ಅಂಶ'

ಬರೀ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ‘ಹನುಮಾನ್ ಅಂಶ’ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಮಾಲ್ ಮಾಡುತ್ತಿದೆ. ಪ್ರೇಕ್ಷಕರ ಅಪಾರ ಪ್ರೀತಿಯಿಂದ ಈ ಸಿನಿಮಾ ಈಗ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಸಿದೆ. ಸಾಲು ಸಾಲು ಸಿನಿಮಾಗಳು ಇದರ ಎದುರು ಬಂದರೂ ಈ ಚಿತ್ರದ ಹವಾ ಮಾತ್ರ ಎಲ್ಲೂ ಕಡಿಮೆಯಾಗಿಲ್ಲ.

ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಈ ಚಿತ್ರ ನಲವತ್ತೊಂದನೇ ದಿನವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಂಗಳವಾರ ಒಂದೇ ದಿನ ಆರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶೋಗಳ ಟಿಕೆಟ್ ದರ ಕಡಿಮೆ ಇದೆ. ಈ ಚಿತ್ರಕ್ಕೂ ಹೆಚ್ಚಿನ ದರ ನಿಗದಿ ಮಾಡಿದ್ದರೆ ಸಿನಿಮಾ ಇನ್ನಷ್ಟು ಗಳಿಕೆ ಮಾಡುತ್ತಿತ್ತು. ಚಿತ್ರದ ಭಾರತದ ಒಟ್ಟು ಗಳಿಕೆ ಇನ್ನೂರು ಎಂಬತ್ತು ಕೋಟಿ ರೂಪಾಯಿ ದಾಟಿದೆ.

ಸಿನಿಮಾ ಆರಂಭದಲ್ಲಿ ಕೇವಲ ಹತ್ತು ಲಕ್ಷ ರೂಪಾಯಿ ಗಳಿಸಿ ತೀವ್ರ ಮುಖಭಂಗ ಅನುಭವಿಸಿತ್ತು. ದೊಡ್ಡ ದೊಡ್ಡ ಸಿನಿಮಾಗಳ ಆರ್ಭಟಕ್ಕೆ ಹೆದರಿ ಈ ಚಿತ್ರಕ್ಕೆ ಕೇವಲ ಇಪ್ಪತ್ತೊಂಬತ್ತು ಶೋಗಳು ಮಾತ್ರ ಸಿಕ್ಕಿದ್ದವು. ಇದರಿಂದಾಗಿ ಸಿನಿಮಾದ ದಿನನಿತ್ಯದ ಗಳಿಕೆ ಕೇವಲ ನಾಲ್ಕು ಲಕ್ಷ ರೂಪಾಯಿಗೆ ಕುಸಿದು ಬಿದ್ದಿತ್ತು. ಚಿತ್ರದ ಭವಿಷ್ಯ ಸಂಪೂರ್ಣ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ನಿರ್ದೇಶಕ ಮತ್ತು ನಾಯಕ ನಟ ಸೋಲೊಪ್ಪಿಕೊಳ್ಳದೆ ಸ್ವತಃ ಚಿತ್ರಮಂದಿರಗಳಿಗೆ ತೆರಳಿ ಪ್ರಚಾರ ಮಾಡಿದರು. ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಸ್ಪಂದನೆ ಕಂಡು ಚಿತ್ರಮಂದಿರದ ಮಾಲೀಕರು ಶೋಗಳ ಸಂಖ್ಯೆಯನ್ನು ಹೆಚ್ಚಿಸಿದರು. ಬಾಯ್ಮಾತಿನ ಪ್ರಚಾರದ ಮೂಲಕ ಚಿತ್ರದ ಶೋ ಸಂಖ್ಯೆ ಹೆಚ್ಚಿತು. ಈಗ ಸಿನಿಮಾ ಶೋಗಳ ಸಂಖ್ಯೆ ಸಾವಿರಕ್ಕೂ ಅಧಿಕಕ್ಕೆ ಏರಿಕೆಯಾಯಿತು.

ಇದನ್ನೂ ಓದಿ: ‘ಹನುಮಾನ್ ಅಂಶ್’ ಯಶಸ್ಸು: ತುಳಸಿದಾಸರ ಬಯೋಪಿಕ್ ಘೋಷಿಸಿದ ನಿರ್ದೇಶಕ ವಿಶಾಲ್ ಚತುರ್ವೇದಿ

‘ಮಿರ್ಜಾಪುರ್ ದ ಮೂವಿ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಪೈಪೋಟಿಯ ನಡುವೆಯೂ ಹನುಮಾನ್ ಅಂಶ ಗೆದ್ದು ಬೀಗಿದೆ. ಪ್ರಸ್ತುತ ಈ ಚಿತ್ರವು ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us