AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ ಅಂಶ್’ ಯಶಸ್ಸು: ತುಳಸಿದಾಸರ ಬಯೋಪಿಕ್ ಘೋಷಿಸಿದ ನಿರ್ದೇಶಕ ವಿಶಾಲ್ ಚತುರ್ವೇದಿ

ಕೇವಲ 2 ಕೋಟಿ ಬಜೆಟ್‌ನ ‘ಹನುಮಾನ್ ಅಂಶ’ ಸಿನಿಮಾ ಬರೋಬ್ಬರಿ 268 ಕೋಟಿ ರೂಪಾಯಿ ಗಳಿಸಿ ಶ್ರೇಷ್ಠ ದಾಖಲೆ ಬರೆದಿದೆ. ಈ ಭಾರಿ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ಸಂತ ತುಳಸಿದಾಸರ ಜೀವನ ಆಧಾರಿತ 'ರಾಮ್‌ಬೋಲ' ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಸುದ್ದಿ ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಹನುಮಾನ್ ಅಂಶ್’ ಯಶಸ್ಸು: ತುಳಸಿದಾಸರ ಬಯೋಪಿಕ್ ಘೋಷಿಸಿದ ನಿರ್ದೇಶಕ ವಿಶಾಲ್ ಚತುರ್ವೇದಿ
ವಿಶಾಲ್ ಚತುರ್ವೇದಿ
ರಾಜೇಶ್ ದುಗ್ಗುಮನೆ
|

Updated on: Sep 15, 2026 | 7:47 AM

Share

ಮುಖ್ಯಾಂಶಗಳು

  • 2 ಕೋಟಿಯ ಸಿನಿಮಾ 268 ಕೋಟಿ ಗಳಿಕೆ
  • ‘ಹನುಮಾನ್ ಅಂಶ’ ಸೃಷ್ಟಿಸಿದ ಭಾರಿ ಇತಿಹಾಸ
  • ವಿಶಾಲ್ ಚತುರ್ವೇದಿ ಅವರ ಹೊಸ ಸಾಹಸ ‘ರಾಮ್‌ಬೋಲ’ 

ನೀಮ್ ಕರೌಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕೇವಲ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಭಕ್ತಿ ಪ್ರಧಾನ ಸಿನಿಮಾ ಈಗ ಬರೋಬ್ಬರಿ 268 ಕೋಟಿ ರೂಪಾಯಿ ಗಳಿಸಿದೆ. ಹಾಕಿದ ಬಂಡವಾಳಕ್ಕಿಂತ 134 ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆ. ಈ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಸಿನಿಮಾಗೆ ‘ರಾಮ್‌ಬೋಲ’ ಎಂದು ಹೆಸರಿಟ್ಟಿದ್ದಾರೆ. ಇದು ಮಹಾನ್ ಕವಿ ಮತ್ತು ಸಂತ ಗೋಸ್ವಾಮಿ ತುಳಸಿದಾಸರ ಜೀವನ ಆಧಾರಿತ ಚಿತ್ರವಾಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಾವೀರ್ ಜೈನ್, ವಿಶಾಲ್ ಚತುರ್ವೇದಿ, ಅಮಿತ್ ಉಪಾಧ್ಯಾಯ ಹಾಗೂ ರಘುವೇಂದ್ರ ಸಿಂಗ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಗೋಸ್ವಾಮಿ ತುಳಸಿದಾಸರು 16ನೇ ಶತಮಾನದ ಅತ್ಯಂತ ಪ್ರಸಿದ್ಧ ಸಂತ ಮತ್ತು ಕವಿಯಾಗಿದ್ದರು. ಅವರು ಮಹಾಕಾವ್ಯ ರಾಮಾಯಣವನ್ನು ‘ರಾಮಚರಿತಮಾನಸ’ ಹೆಸರಿನಲ್ಲಿ ರಚಿಸಿದರು. ಇದರ ಜೊತೆಗೆ ವಿನಯ ಪತ್ರಿಕಾ, ಕವಿತಾವಳಿ, ಗೀತಾವಳಿ ಹಾಗೂ ದೋಹಾವಳಿ ಮುಂತಾದ ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಇಂದಿಗೂ ಅವರ ಭಕ್ತಿ ಸಾಹಿತ್ಯ ಪ್ರತಿಯೊಬ್ಬ ಭಾರತೀಯನ ಮನದಲ್ಲಿದೆ.

ಇನ್ನು ‘ಹನುಮಾನ್ ಅಂಶ್’ ಸಿನಿಮಾದಲ್ಲಿ ಶೋಭಿನವ್ ಸತ್ಯ ಮತ್ತು ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೀಮ್ ಕರೌಲಿ ಬಾಬಾ ಅವರನ್ನು ಭಕ್ತರು ಭಗವಾನ್ ಹನುಮಂತನ ಅವತಾರ ಎಂದು ಪೂಜಿಸುತ್ತಾರೆ. ಅವರ ಪ್ರೀತಿ, ಭಕ್ತಿ ಮತ್ತು ಸೇವೆಯ ಸಂದೇಶಗಳು ವಿಶ್ವಪ್ರಸಿದ್ಧವಾಗಿವೆ. 1960 ಮತ್ತು 70ರ ದಶಕದಲ್ಲಿ ಅನೇಕ ವಿದೇಶಿಯರು ಅವರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು.

ಇದನ್ನೂ ಓದಿ: 200 ಕೋಟಿ ರೂ. ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾಗೆ 21ರ ಪ್ರಾಯದ ನಿರ್ಮಾಪಕಿ

ಆರಂಭದಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಂದಗತಿಯ ಪ್ರದರ್ಶನ ಕಂಡಿತ್ತು. ಆದರೆ ಮೂರನೇ ವಾರದಿಂದ ಚಿತ್ರ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿತು. ಭಾರತದಲ್ಲೇ ಈ ಸಿನಿಮಾ 214.63 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಪ್ರಪಂಚದಾದ್ಯಂತ ಒಟ್ಟು 268 ಕೋಟಿ ರೂಪಾಯಿ ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ