‘ಹನುಮಾನ್ ಅಂಶ್‌’ ಓಟ ಬಹುತೇಕ ಅಂತ್ಯ; ಅಂತಿಮವಾಗಿ ಸಿನಿಮಾ ಗಳಿಸಿದ್ದೆಷ್ಟು?

ನೀಮ್ ಕರೋಲಿ ಬಾಬಾ ಅವರ ಪ್ರಭಾವದ ಕುರಿತಾದ ಭಕ್ತಿಪ್ರಧಾನ ಸಿನಿಮಾ 'ಹನುಮಾನ್ ಅಂಶ್‌' ಬಾಕ್ಸ್‌ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯುವ ಮೂಲಕ ತನ್ನ ಯಶಸ್ವಿ ಓಟವನ್ನು ಮುಕ್ತಾಯಗೊಳಿಸುತ್ತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಬರೋಬ್ಬರಿ 439 ಕೋಟಿ ರೂ.ಗಳ ಗಳಿಕೆ ದಾಖಲಿಸಿದೆ.

‘ಹನುಮಾನ್ ಅಂಶ್‌’ ಓಟ ಬಹುತೇಕ ಅಂತ್ಯ; ಅಂತಿಮವಾಗಿ ಸಿನಿಮಾ ಗಳಿಸಿದ್ದೆಷ್ಟು?
ಹನುಮಾನ್ ಅಂಶ್

Updated on: Oct 29, 2026 | 12:44 PM

ಮುಖ್ಯಾಂಶಗಳು

  • ಬಾಕ್ಸ್‌ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ 'ಹನುಮಾನ್ ಅಂಶ್‌’
  • ಕೇವಲ 8 ಲಕ್ಷದಿಂದ ಆರಂಭವಾಗಿ 439 ಕೋಟಿ ಕ್ಲಬ್‌ ಸೇರಿದ ಭಕ್ತಿಪ್ರಧಾನ ಸಿನಿಮಾ
  • ಯಶಸ್ವಿ ಪ್ರದರ್ಶನದ ಬಳಿಕ ಅತಿ ಶೀಘ್ರದಲ್ಲೇ ಬರಲಿದೆ 'ಹನುಮಾನ್ ಅಂಶ್‌' ಸೀಕ್ವೆಲ್

ನೀಮ್ ಕರೋಲಿ ಬಾಬಾ ಅವರ ಪ್ರಭಾವದ ಕುರಿತಾದ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್ ಅಂಶ್‌‘ ಬಾಕ್ಸ್‌ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯುವ ಮೂಲಕ ತನ್ನ ಯಶಸ್ವಿ ಓಟವನ್ನು ಮುಕ್ತಾಯಗೊಳಿಸುತ್ತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಆರಂಭದಲ್ಲಿ ಕೇವಲ 8 ಲಕ್ಷ ರೂ.ಗಳೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಆದರೆ, ವಾರದಿಂದ ವಾರಕ್ಕೆ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾ ಸಾಗಿರುವ ಈ ಸಿನಿಮಾ, ಈಗ ಜಾಗತಿಕ ಮಟ್ಟದಲ್ಲಿ ಬರೋಬ್ಬರಿ 439 ಕೋಟಿ ರೂ.ಗಳ ಗಳಿಕೆಯೊಂದಿಗೆ ದಾಖಲೆ ನಿರ್ಮಿಸಿದೆ.

ಚಿತ್ರವು 5ನೇ ವಾರದಿಂದ 10ನೇ ವಾರದವರೆಗೆ ಸತತವಾಗಿ ಸಾರ್ವಕಾಲಿಕ ದಾಖಲೆಗಳನ್ನು ಬರೆದಿದ್ದು, 11ನೇ ವಾರದಲ್ಲೂ ಉತ್ತಮ ಪ್ರದರ್ಶನ ಕಂಡಿದೆ. ಒಟ್ಟಾರೆಯಾಗಿ 81 ದಿನಗಳಲ್ಲಿ ಹಿಂದಿ ಭಾಷೆಯಲ್ಲಿ 317.90 ಕೋಟಿ ರೂ. ನೆಟ್‌ ಕಲೆಕ್ಷನ್‌ ಗಳಿಸಿರುವ ಈ ಸಿನಿಮಾ, ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿ 319 ರಿಂದ 320 ಕೋಟಿ ರೂಪಾಯಿಗೆ ಓಟ ಮುಗಿಸುವ ನಿರೀಕ್ಷೆಯಿದೆ. ದೀಪಾವಳಿಯವರೆಗೆ ಪ್ರದರ್ಶನ ಮುಂದುವರಿಸಲಿರುವ ಈ ಚಿತ್ರವು ಹಲವು ಕೇಂದ್ರಗಳಲ್ಲಿ 100 ದಿನಗಳನ್ನು ಪೂರೈಸುವ ಹಾದಿಯಲ್ಲಿದೆ.

ಹಿಂದಿ ಮಾರುಕಟ್ಟೆಯಲ್ಲದೆ ತೆಲುಗು ಆವೃತ್ತಿಯಿಂದಲೂ ಸುಮಾರು 4 ಕೋಟಿ ರೂ.ಗಳನ್ನು ಈ ಚಿತ್ರ ಬಾಚಿಕೊಂಡಿದೆ. ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ‘ಹನುಮಾನ್ ಅಂಶ್‌’ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ 51 ಕೋಟಿ ರೂ.ಗಳಿಗೂ ಅಧಿಕ ಗ್ರಾಸ್‌ ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: ಶ್ರೀ ಶ್ರೀ ರವಿ ಶಂಕರ್ ಗುರೂಜಿ ಭೇಟಿಯಾದ ‘ಹನುಮಾನ್ ಅಂಶ್’ ನಟ ಶೋಭಿನವ್ ಸತ್ಯ

ಭಾರತೀಯ ಸಿನಿಮಾಗಳ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಲಾಭ ತಂದುಕೊಟ್ಟ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಈ ಸಿನಿಮಾದ ಸೀಕ್ವೆಲ್ ಕೂಡ ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಈ ಚಿತ್ರದ ಬಜೆಟ್ 2 ಕೋಟಿ ರೂಪಾಯಿ. ಆದರೆ, ಮಾಡಿದ ಕಲೆಕ್ಷನ್ 400+ ಕೋಟಿ ರೂಪಾಯಿ!

ಬಾಕ್ಸ್ ಆಫೀಸ್ ಗಳಿಕೆ ವಿವರ

ಹಿಂದಿ: 384 ಕೋಟಿ ರೂ ಗ್ರಾಸ್ ಕಲೆಕ್ಷನ್
ತೆಲುಗು: 4 ಕೋಟಿ ರೂ ಗ್ರಾಸ್
ವಿದೇಶಿ ಮಾರುಕಟ್ಟೆ: 51 ಕೋಟಿ ರೂ
ಜಾಗತಿಕ ಮಟ್ಟದಲ್ಲಿ ಒಟ್ಟು ಕಲೆಕ್ಷನ್: 439 ಕೋಟಿ ರೂ. ಗ್ರಾಸ್‌

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us