AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀ ಶ್ರೀ ರವಿ ಶಂಕರ್ ಗುರೂಜಿ ಭೇಟಿಯಾದ ‘ಹನುಮಾನ್ ಅಂಶ್’ ನಟ ಶೋಭಿನವ್ ಸತ್ಯ

ಜೆನ್ ಝೀ ಜೊತೆಗಿನ ಸಂವಾದಲ್ಲಿ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ಪಾಲ್ಗೊಂಡರು. ಅವರ ಅವರ ಜೊತೆ ‘ಹನುಮಾನ್ ಅಂಶ್’ ಚಿತ್ರದ ನಟ ಶೋಭಿನವ್ ಸತ್ಯ ಕೂಡ ಭಾಗಿಯಾದರು. ‘ಈ ಜಗತ್ತು ನಿಮ್ಮದು. ಅದನ್ನು ನಿಮ್ಮದಾಗಿಸಿಕೊಳ್ಳಿ. ಜವಾಬ್ದಾರಿ ತೆಗೆದುಕೊಳ್ಳಿ. ನಿಮಗೆ ಆಕಾಶವೇ ಮಿತಿ. ನಿಮ್ಮಲ್ಲಿರುವ ಉತ್ಸಾಹ ಮತ್ತು ಹುರುಪನ್ನು ಕಳೆದುಕೊಳ್ಳಬೇಡಿ’ ಎಂದು ಗುರೂಜಿ ಅವರು ಯುವ ಪ್ರೇಕ್ಷಕರಿಗೆ ಹೇಳಿದರು.

ಶ್ರೀ ಶ್ರೀ ರವಿ ಶಂಕರ್ ಗುರೂಜಿ ಭೇಟಿಯಾದ ‘ಹನುಮಾನ್ ಅಂಶ್’ ನಟ ಶೋಭಿನವ್ ಸತ್ಯ
Shobhinaw Satya, Gurudev Sri Sri Ravi Shankar
ಮದನ್​ ಕುಮಾರ್​
|

Updated on: Oct 22, 2026 | 5:31 PM

Share

‘ಜೆನ್ ಝೀ ವಿಥ್ ಗುರುದೇವ್ 2.0’ ಕಾರ್ಯಕ್ರಮದಲ್ಲಿ 2 ಸಾವಿರ ಯುವಜನರೊಂದಿಗೆ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು ಮುಕ್ತ ಸಂವಾದ ನಡೆಸಿದರು. ಈ ವೇದಿಕೆಯಲ್ಲಿ ‘ಹನುಮಾನ್ ಅಂಶ್’ ಚಿತ್ರದ ಪ್ರಮುಖ ನಟರಾದ ಶೋಭಿನವ್ ಸತ್ಯ, ಪೂರ್ಣಿಮಾ ತಿವಾರಿ ಅವರು ಕೂಡ ಭಾಗಿಯಾದರು. ‘ಹನುಮಾನ್ ಅಂಶ್’ ಚಿತ್ರದಲ್ಲಿ ಶೋಭಿನವ್ ಅವರು ನೀಮ್ ಕರೋಲಿ ಬಾಬಾ ಪಾತ್ರ ಮಾಡಿದ್ದಾರೆ. ಪೂರ್ಣಿಮಾ ತಿವಾರಿ ಅವರು ರಂಬೇಟಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಜೆನ್ ಝೀ ಯುವಜನತೆಯು ‘ಹನುಮಾನ್ ಅಂಶ್’ ಚಿತ್ರವನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಹೇಗೆ ನೆರವಾದರು ಎಂಬುದನ್ನು ಶೋಭಿನವ್ ಹಂಚಿಕೊಂಡರು. ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸುದರ್ಶನ ಕ್ರಿಯೆಯನ್ನು ಕಲಿತಿದ್ದನ್ನೂ ಅವರು ನೆನಪಿಸಿಕೊಂಡರು. ‘ಸುದರ್ಶನ ಕ್ರಿಯೆಯ ಬಗ್ಗೆ ಕೇಳಿದ್ದೆ. ಆದರೆ ಅದನ್ನು ಅಭ್ಯಾಸ ಮಾಡಿದಾಗ, ಅದು ನಿಜವಾಗಿಯೂ ಏನೆಂಬುದು ನನಗೆ ಅರ್ಥವಾಯಿತು’ ಎಂದು ಅವರು ಹೇಳಿದರು. ಅಭ್ಯಾಸ ಆರಂಭಿಸಿದ ಮೊದಲ ದಿನದಿಂದಲೇ ತಮ್ಮ ದೈನಂದಿನ ಒಡನಾಟದಲ್ಲಿ ತಮಗೆ ಹೇಗೆ ಒಂದು ಬದಲಾವಣೆ ಕಂಡುಬಂದಿತೆಂಬುದನ್ನು ಅವರು ವಿವರಿಸಿದರು.

“ಗುರುದೇವ್, ಸೋಲಿನ ನಂತರ ಮತ್ತೆ ಯಶಸ್ಸಿನ ಹಾದಿಗೆ ಮರಳುವುದು ಹೇಗೆ?’, ‘ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯನ್ನು ಬಿಡುವುದು ಹೇಗೆ?’, ‘ನನ್ನ ದೇಹದ ಬಗ್ಗೆ ನನಗಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?’ ಯುವಜನರು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರೊಂದಿಗೆ ತಮ್ಮ ಪ್ರಶ್ನೆಗಳನ್ನು ಹಂಚಿಕೊಂಡರು. ಗುರುದೇವರು ಕೂಡ ಅಷ್ಟೇ ಮುಕ್ತವಾಗಿ, ಹಾಸ್ಯಮಯವಾಗಿ, ಜೊತೆಗೆ ಆಳವಾದ ಅರ್ಥವನ್ನು ಒಳಗೊಂಡ ಉತ್ತರಗಳನ್ನು ನೀಡಿದರು. ಸಾಮಾಜಿಕ ಜಾಲತಾಣಗಳ ಕುರಿತ ಆತಂಕ, ಸ್ವಂತ ಗುರುತನ್ನು ರೂಪಿಸಿಕೊಳ್ಳುವುದು, ಸೋಲು, ಆತ್ಮೀಯತೆ ಮತ್ತು ಸುತ್ತಲಿನ ಜಗತ್ತಿನ ಬಗ್ಗೆ ಯುವಜನರ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಸಂವಾದ ನಡೆಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುವ ಯುವಕನೊಬ್ಬನಿಗೆ, ಧ್ಯಾನ, ಸುದರ್ಶನ ಕ್ರಿಯೆ ಮತ್ತು ಭಸ್ತ್ರಿಕಾ ಪ್ರಾಣಾಯಾಮವನ್ನು ಅಭ್ಯಾಸ ಮಾಡಲು ಗುರುದೇವರು ಸಲಹೆ ನೀಡಿದರು. ಇವು ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ದೇಹದ ಆಕಾರ ಮತ್ತು ರೂಪದ ಬಗ್ಗೆ ಇರುವ ಆತಂಕಕ್ಕೆ ಪ್ರತಿಕ್ರಿಯಿಸುತ್ತಾ, ನಮ್ಮ ದೇಹವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಎಂಬುದನ್ನು ನೆನಪಿಸಿದರು.

ಸೋಲಿನ ನಂತರ ಹೇಗೆ ಚೇತರಿಸಿಕೊಳ್ಳುವುದು ಎಂದು ಒಬ್ಬ ಯುವಕ ಕೇಳಿದಾಗ, ಫಲಿತಾಂಶಗಳ ಮೇಲಿನ ವ್ಯಾಮೋಹದಲ್ಲಿ ಸಿಲುಕಿಕೊಳ್ಳದಂತೆ ಗುರುದೇವರು ಸಲಹೆ ನೀಡಿದರು. ‘ಏನೇ ಬಂದರೂ ಅದನ್ನು ಹಾಗೆಯೇ ಸ್ವೀಕರಿಸಿ’ ಎಂದರು. ಈ ಮಾತು ಒಬ್ಬ ಭಾಗವಹಿಸಿದ ಯುವಕನ ಮನಸ್ಸನ್ನು ಆಳವಾಗಿ ತಟ್ಟಿತು. ಹತ್ತು ಬಾರಿ ಸೋತರೂ ಮುಂದಕ್ಕೆ ಸಾಗುವುದನ್ನು ನಿಲ್ಲಿಸಬೇಕಾಗಿಲ್ಲ ಎಂಬ ಅರಿವು ತನಗೆ ಎಷ್ಟು ಮುಕ್ತ ಭಾವನೆ ನೀಡಿತು ಎಂದು ಅವರು ನಂತರ ಹಂಚಿಕೊಂಡರು.

ಪ್ರಶ್ನೆಗಳು ವೈಯಕ್ತಿಕವಾಗಿದ್ದರೂ, ಗುರುದೇವರ ಉತ್ತರಗಳು ವಿಶಾಲವಾದ ದೃಷ್ಟಿಕೋನವನ್ನು ತೆರೆದಿಟ್ಟವು. ಜಾತಿ ಮತ್ತು ಜನಾಂಗದ ಆಧಾರದ ಮೇಲಿನ ಭೇದಭಾವಗಳನ್ನು ಮೀರಿ ಜನರು ಹೇಗೆ ಬೆಳೆಯಬಹುದು ಎಂದು ಕೇಳಿದಾಗ, ಇಡೀ ಭೂಮಿ ಮತ್ತು ದೇಶದಂತಹ ಉನ್ನತ ಉದ್ದೇಶಗಳಿಗಾಗಿ ಬದ್ಧತೆಯಿಂದ ಕೆಲಸ ಮಾಡುವುದರ ಮಹತ್ವವನ್ನು ಗುರುದೇವರು ತಿಳಿಸಿದರು. ಇಂತಹ ಬದ್ಧತೆಯು ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಿ ಅವರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಹನುಮಾನ್ ಅಂಶ್ ಚಿತ್ರಕ್ಕೆ ನೋ ಎಂದ ನಿರ್ಮಾಪಕರು ಕ್ಷಮೆ ಕೇಳುತ್ತಿದ್ದಾರೆ’; ಅನುಪ್ರಿಯಾ

ತಮ್ಮ ಬಗ್ಗೆ ಯಾರಾದರೂ ನಿಜವಾಗಿಯೂ ಕಾಳಜಿ ವಹಿಸುತ್ತಿದ್ದಾರೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂದು ಮತ್ತೊಬ್ಬ ಯುವಕ ಕೇಳಿದನು. ಗುರುದೇವರು ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ, ಈಗ ಮಧ್ಯಾಹ್ನವಾಗಿದೆ ಎಂಬುದು ಎಷ್ಟು ಸ್ಪಷ್ಟವೋ, ಅಷ್ಟೇ ಸ್ಪಷ್ಟವಾದ ವಿಷಯವಿದು ಎಂದು ಉತ್ತರಿಸಿದರು. ಈ ಸಂವಾದವು ಅಲ್ಲಿನ ಮುಕ್ತ ಮತ್ತು ಆತ್ಮೀಯ ವಾತಾವರಣವನ್ನು ಪ್ರತಿಬಿಂಬಿಸಿತು. ಸಾಂಪ್ರದಾಯಿಕ ಉಪನ್ಯಾಸಗಳಲ್ಲಿರುವ ಔಪಚಾರಿಕತೆಯಿಲ್ಲದೆ, ಯುವಜನರು ತಮ್ಮ ಮನಸ್ಸಿನಲ್ಲಿರುವುದನ್ನು ಮುಕ್ತವಾಗಿ ಕೇಳಲು ಇಲ್ಲಿ ಅವಕಾಶವಿತ್ತು. “ಗುರುವೇ ಗುರಿ” ಎನ್ನುವುದರ ಅರ್ಥವೇನು ಎಂದು ಕೇಳಿದಾಗ, “ಜ್ಞಾನವನ್ನೇ ನಿಮ್ಮ ಜೀವನದ ಕೇಂದ್ರವಾಗಿಸಿಕೊಳ್ಳಿ” ಎಂದು ಅವರು ವಿವರಿಸಿದರು. ಕಥೆಗಳನ್ನು ಹೇಳುವಂತೆ ಸಭಿಕರು ಕೇಳಿಕೊಂಡಾಗ, ಗುರುದೇವರು ತಮಾಷೆಯಾಗಿ, “ನಾನು ಕಥೆಗಳನ್ನು ಹೇಳುವುದಿಲ್ಲ; ಕಥೆಗಳನ್ನು ರಚಿಸುತ್ತೇನೆ” ಎಂದರು.

ಯುವಜನರ ಆತ್ಮಹತ್ಯೆಯ ವಿಷಯವನ್ನು ಪ್ರಸ್ತಾಪಿಸಿದಾಗ ಸಂವಾದವು ಗಂಭೀರ ಸ್ವರೂಪ ಪಡೆದುಕೊಂಡಿತು. ಪ್ರೇಮವೈಫಲ್ಯ ಅಥವಾ ಪರೀಕ್ಷೆಯ ಫಲಿತಾಂಶಗಳು ನಿರೀಕ್ಷೆಯಂತೆ ಬರದಿದ್ದಾಗ ಉಂಟಾಗುವ ಹತಾಶೆಯನ್ನು ಎದುರಿಸಲು, ಯುವಜನರು ಪರಸ್ಪರರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು ಎಂದು ಗುರುದೇವರು ಕರೆ ನೀಡಿದರು. ಜೀವನದಲ್ಲಿ ಹಿನ್ನಡೆ ಎದುರಾದಾಗ, ಬದುಕಿನ ಸಾಧ್ಯತೆಗಳೇ ಮುಗಿದುಹೋದವು ಎಂಬುದಾಗಿ ತಪ್ಪಾಗಿ ಭಾವಿಸಬಾರದು ಎಂದು ಅವರು ಒತ್ತಿಹೇಳಿದರು. ಯುವಜನರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು, ಹೊಸ ಕೌಶಲ್ಯಗಳನ್ನು ಕಲಿಯಬೇಕು ಮತ್ತು ತಾವು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಸಂಗೀತ, ಕಲೆ ಹಾಗೂ ಸೃಜನಶೀಲತೆಗೆ ತಮ್ಮ ಜೀವನದಲ್ಲಿ ಜಾಗ ನೀಡಬೇಕು ಎಂದು ಅವರು ಅಲ್ಲಿ ನೆರೆದವರನ್ನು ಪ್ರೋತ್ಸಾಹಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ