AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ ಅಂಶ್ ಚಿತ್ರಕ್ಕೆ ನೋ ಎಂದ ನಿರ್ಮಾಪಕರು ಕ್ಷಮೆ ಕೇಳುತ್ತಿದ್ದಾರೆ’; ಅನುಪ್ರಿಯಾ

ಕೇವಲ ಎರಡು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ 'ಹನುಮಾನ್ ಅಂಶ್' ಸಿನಿಮಾ ಜಾಗತಿಕವಾಗಿ ಮುನ್ನೂರು ಕೋಟಿಗೂ ಹೆಚ್ಚು ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಆರಂಭದಲ್ಲಿ ಹೂಡಿಕೆ ಮಾಡಲು ನಿರಾಕರಿಸಿದ್ದ ಬಾಲಿವುಡ್ ನಿರ್ಮಾಪಕರು ಈಗ ಯುವ ನಿರ್ಮಾಪಕಿ ಅನುಪ್ರಿಯಾ ಬಳಿ ಕ್ಷಮೆ ಕೇಳುತ್ತಿದ್ದಾರೆ. ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ.

‘ಹನುಮಾನ್ ಅಂಶ್ ಚಿತ್ರಕ್ಕೆ ನೋ ಎಂದ ನಿರ್ಮಾಪಕರು ಕ್ಷಮೆ ಕೇಳುತ್ತಿದ್ದಾರೆ’; ಅನುಪ್ರಿಯಾ
Hanuman Ansh (4)
ರಾಜೇಶ್ ದುಗ್ಗುಮನೆ
|

Updated on: Sep 24, 2026 | 11:02 AM

Share

ಮುಖ್ಯಾಂಶಗಳು

  • 300 ರಿಂದ 30 ಕ್ಕೆ ಕುಸಿದ ಚಿತ್ರಮಂದಿರಗಳು
  • ಸೋಲಿನ ಭೀತಿಯಲ್ಲಿದ್ದ ಯುವ ನಿರ್ಮಾಪಕಿ
  • ಬಾಲಿವುಡ್‌ನಿಂದ ತಿರಸ್ಕಾರ 

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಭಕ್ತಿಪ್ರಧಾನ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಆರಂಭದಲ್ಲಿ ಚಿತ್ರಮಂದಿರ ಸಿಗದೆ ಸಂಕಷ್ಟದಲ್ಲಿದ್ದ ಈ ಚಿತ್ರ ಬಳಿಕ ಭಾರಿ ಸದ್ದು ಮಾಡಿದೆ. 21 ವರ್ಷದ ಸಹ ನಿರ್ಮಾಪಕಿ ಅನುಪ್ರಿಯಾ ನಾಗರ್ ತಮ್ಮ ಕಠಿಣ ದಿನಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಯಶಸ್ಸು ಎಲ್ಲರನ್ನೂ ಬೆರಗುಗೊಳಿಸಿದೆ ಎಂದಿದ್ದಾರೆ ಅವರು.

ಚಿತ್ರ ತೆರೆಕಂಡ ಎಂಟನೇ ದಿನಕ್ಕೆ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳ ಸಂಖ್ಯೆ 300 ರಿಂದ 30 ಕ್ಕೆ ಕುಸಿದಿತ್ತು. ಈ ಹಿನ್ನಡೆಯಿಂದ ಕಂಗಾಲಾದ ಅನುಪ್ರಿಯಾ ಚಿತ್ರರಂಗ ತೊರೆದು ಜ್ಯೂರಿಚ್‌ಗೆ ಹಿಂತಿರುಗಲು ನಿರ್ಧರಿಸಿದ್ದರು. ಆದರೆ ಚಿತ್ರದ ಕಲೆಕ್ಷನ್ ಹಠಾತ್ತನೆ ಹೆಚ್ಚಾಯಿತು. ಪ್ರೇಕ್ಷಕರ ಬೆಂಬಲದಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಚೇತರಿಸಿಕೊಂಡಿತು.

ಕೇವಲ ಎರಡು ಕೋಟಿ ರೂಪಾಯಿಗೂ ಕಡಿಮೆ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಜಾಗತಿಕವಾಗಿ 366.45 ಕೋಟಿ ರೂಪಾಯಿ ಗಳಿಸಿದೆ. ಆರಂಭದಲ್ಲಿ ಚಿತ್ರಕ್ಕೆ ಹಣ ಹೂಡಲು ಬಾಲಿವುಡ್‌ನ ಹಲವು ನಿರ್ಮಾಪಕರು ಸಂಪೂರ್ಣವಾಗಿ ನಿರಾಕರಿಸಿದ್ದರು. ಆದರೆ ಸಿನಿಮಾ ಗಳಿಸಿದ ಅಭೂತಪೂರ್ವ ಗೆಲುವನ್ನು ನೋಡಿ ಅದೇ ನಿರ್ಮಾಪಕರು ಈಗ ಅನುಪ್ರಿಯಾ ಬಳಿ ಕ್ಷಮೆ ಕೇಳುತ್ತಿದ್ದಾರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಚಿತ್ರದ ಪ್ರಚಾರಕ್ಕಾಗಿ ಅನುಪ್ರಿಯಾ ಸ್ವತಃ ದೆಹಲಿಗೆ ತೆರಳಿ ಪ್ರಮುಖ ನಾಯಕರನ್ನು ಮತ್ತು ಧರ್ಮಗುರುಗಳ ಭಕ್ತರನ್ನು ಭೇಟಿಯಾಗಿದ್ದರು. ಪಾಡ್‌ಕಾಸ್ಟ್‌ಗಳ ಮೂಲಕ ಸಿನಿಮಾದ ಬಗ್ಗೆ ಜನರಿಗೆ ಮಾಹಿತಿ ತಲುಪಿಸುವ ನಿರಂತರ ಪ್ರಯತ್ನ ಮಾಡಿದ್ದರು. ತಂಡದಲ್ಲಿದ್ದ ಪ್ರತಿಯೊಬ್ಬರ ಧನಾತ್ಮಕ ನಂಬಿಕೆ ಮತ್ತು ಸತತ ಶ್ರಮವೇ ಈ ಪವಾಡಕ್ಕೆ ಕಾರಣವಾಯಿತು ಎಂದಿದ್ದಾರೆ ಅನುಪ್ರಿಯಾ.

ಇದನ್ನೂ ಓದಿ: ಶತದಿನೋತ್ಸವ ಆಚರಿಸಿದ ಬಳಿಕವೇ ‘ಹನುಮಾನ್ ಅಂಶ್’ ಒಟಿಟಿಗೆ; 100 ಕೋಟಿ ರೂ ಡೀಲ್?

ಶೋಬಿನಾವ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನೀಮ್ ಕರೋಲಿ ಬಾಬಾ ಅವರ ಜೀವನದಿಂದ ಪ್ರೇರಿತವಾಗಿದೆ. ಸಣ್ಣ ಬಜೆಟ್ ಸಿನಿಮಾವೊಂದು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಬಲ್ಲದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ. ಈಗ ಬಾಲಿವುಡ್ ಚಿತ್ರರಂಗವೇ ಈ ಯುವ ನಿರ್ಮಾಪಕಿಯ ಸಾಹಸಕ್ಕೆ ಸಾಟಿ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More