ಶೀಘ್ರವೇ ಆರಂಭ ಆಗಲಿದೆ ‘ಕ್ರಿಶ್ 4’ ಶೂಟಿಂಗ್’; ಸ್ಟಾರ್ ನಿರ್ದೇಶಕನಿಗೆ ಅವಕಾಶ?

‘ಕ್ರಿಶ್ 4’ ಬಗ್ಗೆ 2021ರಲ್ಲೇ ಅಪ್​ಡೇಟ್ ಸಿಕ್ಕಿತ್ತು. ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂದು ಹೃತಿಕ್ ರೋಷನ್ ಅಪ್​​ಡೇಟ್ ಕೊಟ್ಟಿದ್ದರು. ಈ ಚಿತ್ರವನ್ನು ಹೃತಿಕ್ ತಂದೆ ರಾಕೇಶ್ ರೋಷನ್ ಅವರೇ ನಿರ್ದೇಶನ ಮಾಡಬೇಕಿತ್ತು. ಆದರೆ, ಈಗ ಅವರಿಗೆ ಸಿನಿಮಾ ನಿರ್ದೇಶನ ಮಾಡುವಷ್ಟು ಶಕ್ತಿ ಉಳಿದುಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ

ಶೀಘ್ರವೇ ಆರಂಭ ಆಗಲಿದೆ ‘ಕ್ರಿಶ್ 4’ ಶೂಟಿಂಗ್’; ಸ್ಟಾರ್ ನಿರ್ದೇಶಕನಿಗೆ ಅವಕಾಶ?
ಹೃತಿಕ್

Updated on: May 04, 2024 | 12:46 PM

ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಕೊಟ್ಟಿದ್ದು ‘ಕ್ರಿಶ್’ ಸರಣಿ. ‘ಕೊಯಿ ಮಿಲ್ ಗಯಾ’, ‘ಕ್ರಿಶ್’ ಹಾಗೂ ‘ಕ್ರಿಶ್ 3’ (Krish 3) ಸಿನಿಮಾಗಳು ಗೆದ್ದು ಬೀಗಿದ್ದವು. ಸೂಪರ್ ಹೀರೋ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಸೈನ್ಸ್​ ಫಿಕ್ಷನ್ ಫ್ಯಾಂಟಸಿ ಕಥೆಯನ್ನು ಒಳಗೊಂಡ ‘ಕ್ರಿಶ್ 4’ ಚಿತ್ರ ಬರೋಕೆ ರೆಡಿ ಆಗಿದೆ. ಈ ಬಗ್ಗೆ ಸಿದ್ದಾರ್ಥ್ ಆನಂದ್ ಅವರು ಅಪ್​​ಡೇಟ್​ ಕೊಟ್ಟಿದ್ದಾರೆ.

‘ಕ್ರಿಶ್ 4’ ಬಗ್ಗೆ 2021ರಲ್ಲೇ ಅಪ್​ಡೇಟ್ ಸಿಕ್ಕಿತ್ತು. ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂದು ಹೃತಿಕ್ ರೋಷನ್ ಅಪ್​​ಡೇಟ್ ಕೊಟ್ಟಿದ್ದರು. ಈ ಚಿತ್ರವನ್ನು ಹೃತಿಕ್ ತಂದೆ ರಾಕೇಶ್ ರೋಷನ್ ಅವರೇ ನಿರ್ದೇಶನ ಮಾಡಬೇಕಿತ್ತು. ಆದರೆ, ಈಗ ಅವರಿಗೆ ಸಿನಿಮಾ ನಿರ್ದೇಶನ ಮಾಡುವಷ್ಟು ಶಕ್ತಿ ಉಳಿದುಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಸಿದ್ದಾರ್ಥ್ ಆನಂದ್ ಅವರ ಕೈಗೆ ಹೋಗಿದೆ ಎಂದು ಹೇಳಲಾಗುತ್ತಿದೆ. ಅವರು ಸಿನಿಮಾ ಕುರಿತು ಮಾಹಿತಿ ನೀಡಿದ್ದಾರೆ.

ಇತ್ತೀಚೆಗದ ಸೋಶಿಯಲ್ ಮೀಡಿಯಾ ಪೇಜ್ ಒಂದರಲ್ಲಿ ಹೃತಿಕ್ ರೋಷನ್ ಅವರ ಫೋಟೋ ಅಪ್​ಲೋಡ್ ಮಾಡಲಾಗಿತ್ತು. ‘ಆತ ಬರುತ್ತಿದ್ದಾನೆ’ ಎಂದು ಕ್ಯಾಪ್ಶನ್ ನೀಡಿ, ಕ್ರಿಶ್ ಫೋಟೋ ಹಾಕಲಾಗಿತ್ತು. ಇದಕ್ಕೆ ಸಿದ್ದಾರ್ಥ್ ಆನಂದ್ ಉತ್ತರಿಸಿದ್ದು, ‘ಹೌದು ಆತ ಬರುತ್ತಿದ್ದಾನೆ’ ಎಂದಿದ್ದಾರೆ.

ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಸಿದ್ದಾರ್ಥ್ ಅವರಿಗೆ ಇದೆ. ಅವರು ಈಗ ‘ಕ್ರಿಶ್ 4’ ನಿರ್ದೇಶನದ ಜವಾಬ್ದಾರಿ ಪಡೆದರೇ ಎನ್ನುವ ಪ್ರಶ್ನೆ ಕಾಡಿದೆ. ಈ ಬಗ್ಗೆ ತಂಡದಿಂದಲೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ‘ವಾರ್​ 2’ ಸಿನಿಮಾ ಸೆಟ್​​ನಿಂದ ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್​​ ಫೋಟೋಸ್ ವೈರಲ್

ಸಿದ್ದಾರ್ಥ್ ಹಾಗೂ ಹೃತಿಕ್ ರೋಷನ್ ಈ ಮೊದಲು ‘ಬ್ಯಾಂಗ್ ಬ್ಯಾಂಗ್​’, ‘ವಾರ್​’ ಹಾಗೂ ‘ಫೈಟರ್’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಕಾರಣಕ್ಕೆ ಹೃತಿಕ್​ಗೆ ಸಿದ್ದಾರ್ಥ್ ಮೇಲೆ ಒಂದು ನಂಬಿಕೆ ಬಂದಿದೆ. ಸದ್ಯ ಹೃತಿಕ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ತೆಲುಗಿನ ಜೂನಿಯರ್ ಎನ್​ಟಿಆರ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us