ಸಂಜಯ್ ದತ್ ಮೇಲೆ ಬಿಷ್ಣೋಯ್ ಗ್ಯಾಂಗ್ ಕಣ್ಣು; ಇನ್‌ಸ್ಟಾಗ್ರಾಮ್‌ ಮೂಲಕ ಟ್ರ್ಯಾಕ್ ಮಾಡಿದ್ದ ಶೂಟರ್ಸ್

ಸಲ್ಮಾನ್ ಖಾನ್ ಅವರನ್ನು ನೇರವಾಗಿ ಹೆದರಿಸಲು ಸಾಧ್ಯವಾಗದಿದ್ದಾಗ, ಅವರ ಆಪ್ತರು, ಸ್ನೇಹಿತರು ಮತ್ತು ಉದ್ಯಮದ ಸಹವರ್ತಿಗಳನ್ನು ಗುರಿಯಾಗಿಸಿಕೊಂಡು ಭೀತಿ ಹುಟ್ಟಿಸುವುದು ಬಿಷ್ಣೋಯ್ ಗ್ಯಾಂಗ್‌ನ ತಂತ್ರ. ಈ ಹಿಂದೆ ಹತ್ಯೆಗೊಳಗಾದ ರಾಜಕಾರಣಿ ಬಾಬಾ ಸಿದ್ದೀಕಿ ಅವರ ಹತ್ಯೆಯೂ ಇದೇ ತಂತ್ರದ ಭಾಗವಾಗಿತ್ತು. ಪ್ರಸ್ತುತ ಮುಂಬೈ ಪೊಲೀಸರು ಈ ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಸಂಜಯ್ ದತ್ ಮೇಲೆ ಬಿಷ್ಣೋಯ್ ಗ್ಯಾಂಗ್ ಕಣ್ಣು; ಇನ್‌ಸ್ಟಾಗ್ರಾಮ್‌ ಮೂಲಕ ಟ್ರ್ಯಾಕ್ ಮಾಡಿದ್ದ ಶೂಟರ್ಸ್
Sanjay Dutt
Image Credit source: PTI

Updated on: Oct 28, 2026 | 5:40 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ನಿರಂತರ ಬೆದರಿಕೆ ಹಾಕುತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಈಗ ಸಲ್ಮಾನ್ ಅವರ ಆಪ್ತ ನಟರನ್ನೂ ಟಾರ್ಗೆಟ್ ಮಾಡಲು ಸಂಚು ರೂಪಿಸಿತ್ತು ಎಂಬ ಆಘಾತಕಾರಿ ಮಾಹಿತಿಯು ತನಿಖೆಯಿಂದ ಹೊರಬಿದ್ದಿದೆ. ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಭದ್ರತೆ ಇರುವ ಕಾರಣ, ಗ್ಯಾಂಗ್‌ನ ಶೂಟರ್‌ಗಳು ನಟ ಸಂಜಯ್ ದತ್, ಆಮಿರ್ ಖಾನ್, ಇಮ್ರಾನ್ ಹಶ್ಮಿ ಹಾಗೂ ಟೈಗರ್ ಶ್ರಾಫ್ ನಿವಾಸಗಳ ಸುತ್ತ ಹೊಂಚುಹಾಕಿ ಕಾದಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ವಿವರಗಳ ಪ್ರಕಾರ, ಹರಿಯಾಣದ ಸೋನಿಪತ್ ಮೂಲದ ಶೂಟರ್‌ಗಳಾದ ರೆಹಾನ್ ಮತ್ತು ಫೂಲ್ ಸಿಂಗ್ ಎಂಬುವವರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಕ್ರಮ ಪಿಸ್ತೂಲ್‌ನೊಂದಿಗೆ ಮುಂಬೈಗೆ ಆಗಮಿಸಿದ್ದರು. ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸಂಚುಕೋರ ಅನಿಲ್ ಪಂಡಿತ್ ಸೂಚನೆಯಂತೆ ಇಬ್ಬರೂ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಳಿ ತೆರಳಿದ್ದರು. ಆದರೆ, ಅಲ್ಲಿ ಪೊಲೀಸ್ ಭದ್ರತೆ ತೀವ್ರವಾಗಿದ್ದರಿಂದ ನೇರ ದಾಳಿ ಸಾಧ್ಯವಿಲ್ಲವೆಂದು ತಮ್ಮ ಹ್ಯಾಂಡ್ಲರ್‌ಗೆ ತಿಳಿಸಿದ್ದರು.

ಸಲ್ಮಾನ್ ಮೇಲಿನ ದಾಳಿ ಕಷ್ಟವೆನಿಸಿದಾಗ, ಬಾಲಿವುಡ್‌ನ ಇತರ ಪ್ರಸಿದ್ಧ ನಟರ ಮನೆಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಳುಹಿಸುವಂತೆ ಅನಿಲ್ ಪಂಡಿತ್ ಶೂಟರ್‌ಗಳಿಗೆ ಸೂಚಿಸಿದ್ದನು. ಸಲ್ಮಾನ್ ಮನೆ ಬಳಿಯಿಂದ ತೆರಳಿದ ಶೂಟರ್‌ಗಳು 400 ರೂಪಾಯಿ ಬಾಡಿಗೆ ನೀಡಿ ಆಟೋರಿಕ್ಷಾವೊಂದನ್ನು ಗೊತ್ತುಪಡಿಸಿಕೊಂಡು ಆಮಿರ್ ಖಾನ್, ಇಮ್ರಾನ್ ಹಶ್ಮಿ ಹಾಗೂ ಸಂಜಯ್ ದತ್ ಅವರ ನಿವಾಸಗಳ ಬಳಿ ತೆರಳಿದ್ದರು. ಸಲ್ಮಾನ್ ಖಾನ್ ಅವರ ಬಹುಕಾಲದ ಆಪ್ತ ಸ್ನೇಹಿತರಾಗಿರುವ ಸಂಜಯ್ ದತ್ ಅವರನ್ನು ಪರ್ಯಾಯ ಟಾರ್ಗೆಟ್ ಆಗಿ ಆಯ್ಕೆ ಮಾಡಿಕೊಳ್ಳಲು ಗ್ಯಾಂಗ್ ಯೋಜನೆ ರೂಪಿಸಿತ್ತು.

ಪಾಲಿ ಹಿಲ್‌ನಲ್ಲಿರುವ ಸಂಜಯ್ ದತ್ ನಿವಾಸದ ಬಳಿ ತಲುಪಿದ ಶೂಟರ್‌ಗಳು, ಸ್ಥಳೀಯರ ಬಳಿ ‘ಸಂಜಯ್ ಬಾಬಾ ಮನೆಯಲ್ಲಿದ್ದಾರಾ?’ ಎಂದು ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಜಯ್ ದತ್ ಯಾವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಬಳಸುವ ಕಾರು ಯಾವುದು ಎಂಬುದನ್ನು ತಿಳಿಯಲು ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿ, ಪಾರ್ಕಿಂಗ್‌ನಲ್ಲಿದ್ದ ಕಾರುಗಳನ್ನು ಹೋಲಿಸಿ ನೋಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ದತ್ ನಿವಾಸದ ಬಳಿ ದೊಡ್ಡ ಮರಗಳು ಇದ್ದುದರಿಂದ ಅವರಿಗೆ ಯಾವುದೇ ನಿಖರ ಮಾಹಿತಿ ಸಿಗಲಿಲ್ಲ.

ಇದನ್ನೂ ಓದಿ: ಗುಂಡಿನ ದಾಳಿ ಘಟನೆ ಬಳಿಕ ಮುಂಬೈನ ಫ್ಲಾಟ್‌ ಮಾರಾಟ ಮಾಡಿದ ನಟ ಟೈಗರ್ ಶ್ರಾಫ್

ಸಂಜಯ್ ದತ್ ಅವರ ಮಾಹಿತಿ ಸಿಗದಿದ್ದಾಗ, ಇತರ ನಟರ ಮೇಲಿನ ಗಮನವನ್ನು ಬಿಟ್ಟು ಟೈಗರ್ ಶ್ರಾಫ್ ಅವರನ್ನು ಟ್ರ್ಯಾಕ್ ಮಾಡುವಂತೆ ಶೂಟರ್‌ಗಳಿಗೆ ಸಂಚುಕೋರ ಅನಿಲ್ ಪಂಡಿತ್ ಸೂಚಿಸಿದ್ದನು. ಟೈಗರ್ ಶ್ರಾಫ್ ಪ್ರತಿ ಭಾನುವಾರ ಜುಹುವಿನ ಪುಷ್ಪಾ ಪಾರ್ಕ್ ಬಳಿಯ ಶಾಲಾ ಮೈದಾನಕ್ಕೆ ಆಗಮಿಸುತ್ತಾರೆ ಮತ್ತು ಅವರಿಗೆ ಹೆಚ್ಚಿನ ಅಧಿಕೃತ ಪೊಲೀಸ್ ಭದ್ರತೆ ಇರುವುದಿಲ್ಲ ಎಂಬ ಮಾಹಿತಿಯನ್ನು ಶೂಟರ್‌ಗಳಿಗೆ ನೀಡಿ, ಅಲ್ಲಿಯೇ ಯೋಜನೆ ಕಾರ್ಯರೂಪಕ್ಕೆ ತರಲು ಸೂಚಿಸಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us