50ರ ವಯಸ್ಸಿನಲ್ಲಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಆಗಿದ್ದ ನಾನಾ ಪಟೇಕರ್
ನಾನಾ ಪಟೇಕರ್ ಅವರು ಹಲವಾರು ಅತ್ಯದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದ್ಭುತ ನಟರಾಗಿದ್ದರೂ ಸಹ ಅವರು ತಮ್ಮನ್ನು ಕೇವಲ ನಟನೆಗೆ ಮಾತ್ರ ಸೀಮಿತಗೊಳಿಸಿಕೊಂಡಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಅವರು ಹೊಂದಿದ್ದರು. ಕೃಷಿ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದರು. ನಾನಾ ಪಟೇಕರ್ ಅದೆಷ್ಟು ಸಕ್ರಿಯ ವ್ಯಕ್ತಿಯಾಗಿದ್ದರೆಂದರೆ ತಮ್ಮ 50ನೇ ವಯಸ್ಸಿನಲ್ಲಿ ರಾಷ್ಟ್ರೀಯ ಶೂಟಿಂಗ್ ಸ್ಪರ್ಧಿಯಲ್ಲಿ ಭಾಗವಹಿಸಿ ಮೆಡಲ್ ಗೆದ್ದಿದ್ದರು.

ಭಾರತೀಯ ಚಿತ್ರರಂಗದ ಖ್ಯಾತ ನಟ ನಾನಾ ಪಟೇಕರ್ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ನಾನಾ ಪಟೇಕರ್ ಅವರು ಹಲವಾರು ಅತ್ಯದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದ್ಭುತ ನಟರಾಗಿದ್ದರೂ ಸಹ ಅವರು ತಮ್ಮನ್ನು ಕೇವಲ ನಟನೆಗೆ ಮಾತ್ರ ಸೀಮಿತಗೊಳಿಸಿಕೊಂಡಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಅವರು ಹೊಂದಿದ್ದರು. ಕೃಷಿ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದರು. ನಾನಾ ಪಟೇಕರ್ ಅದೆಷ್ಟು ಸಕ್ರಿಯ ವ್ಯಕ್ತಿಯಾಗಿದ್ದರೆಂದರೆ ತಮ್ಮ 50ನೇ ವಯಸ್ಸಿನಲ್ಲಿ ರಾಷ್ಟ್ರೀಯ ಶೂಟಿಂಗ್ ಸ್ಪರ್ಧಿಯಲ್ಲಿ ಭಾಗವಹಿಸಿ ಮೆಡಲ್ ಗೆದ್ದಿದ್ದರು.
ತಮ್ಮ 40 ರ ಹರೆಯದ ನಂತರ ರೈಫಲ್ ಶೂಟಿಂಗ್ ಅಭ್ಯಾಸ ಆರಂಭಿಸಿದ ಅವರು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪದಕಗಳನ್ನು ಗೆಲ್ಲುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತಮ್ಮನ್ನು ತಾವು ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲು ಮಾಡಿಕೊಳ್ಳದೆ ತಮಗೆ ಇಷ್ಟವಾದ ಸಂಗತಿಗಳಲ್ಲಿ ನಾನಾ ಪಟೇಕರ್ ತೊಡಗಿಸಿಕೊಳ್ಳುತ್ತಿದ್ದರು.
ಅವರಿಗೆ ಶೂಟಿಂಗ್ ಬಗ್ಗೆ ಆಸಕ್ತಿ ಹುಟ್ಟಿದ್ದೂ ಸಹ ಆಸಕ್ತಿಕರ ಕತೆ. ಒಮ್ಮೆ ನಾನಾ ಪಟೇಕರ್ ಅವರು ಶೂಟಿಂಗ್ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರಂತೆ. ಅಲ್ಲಿ ತಮ್ಮ ಗುರಿ ಪರೀಕ್ಷೆ ಮಾಡಲು ಶೂಟಿಂಗ್ ಮಾಡಿದ್ದಾರೆ. ನಾನಾ ಪಟೇಕರ್ ಅವರ ಗುರಿ ಚೆನ್ನಾಗಿತ್ತಂತೆ. ಇದು ಖುದ್ದು ಅವರಿಗೇ ಆಶ್ಚರ್ಯ ತರಿಸಿದ, ಆ ಬಳಿಕ ಅವರು ಶೂಟಿಂಗ್ ಅನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ನಡೆಸಲು ಪ್ರಾರಂಭಿಸಿದರಂತೆ. ಅವರ ಗುರಿ ಅದೆಷ್ಟು ನಿಖರವಾಗಿತ್ತೆಂದರೆ ಕೆಲವೇ ದಿನಗಳಲ್ಲಿ ಅವರು ನೀರಿನ ಬಾಟಲಿಯ ಮುಚ್ಚಳಕ್ಕೆ ನಿಖರವಾಗಿ ಗುರಿ ಇಡಬಲ್ಲವರಾದರಂತೆ.
ಇದನ್ನೂ ಓದಿ:ಕಾರ್ಗಿಲ್ ಯೋಧ, ರೈತರ ಬಂಧು: ನಾನಾ ಪಟೇಕರ್ ಇನ್ನೊಂದು ಮುಖ
ಬಳಿಕ 2001ರಲ್ಲಿ ತಮ್ಮ 49ನೇ ವಯಸ್ಸಿನಲ್ಲಿ ಅವರು ಸ್ಪರ್ಧಾತ್ಮಕ ಶೂಟಿಂಗ್ ಲೋಕಕ್ಕೆ ಕಾಲಿಟ್ಟರು. ಪುಣೆಯ ಬಾಲೇವಾಡಿ ಮತ್ತು ಮಹೌ ಮುಂತಾದ ಕಡೆಗಳಲ್ಲಿ ತೀವ್ರ ತರಬೇತಿ ಪಡೆದ ಅವರು, 50 ಮೀಟರ್ ರೈಫಲ್ ಪ್ರೋನ್ ಹಾಗೂ 300 ಮೀಟರ್ ಬಿಗ್-ಬೋರ್ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲ್ಲಿ ಕೆಲವು ಮೆಡಲ್ಗಳನ್ನು ಸಹ ನಾನಾ ಪಟೇಕರ್ ಗೆದ್ದರು. 2004ರಲ್ಲಿ ಇಂದೋರ್‌ನಲ್ಲಿ ನಡೆದ 48ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ 300 ಮೀಟರ್ ಬಿಗ್-ಬೋರ್ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಮೂರು ವರ್ಷಗಳ ನಂತರ, ಮಹಾರಾಷ್ಟ್ರ ತಂಡದ ಪರವಾಗಿ ಆಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
1991ರಲ್ಲಿ ಬಿಡುಗಡೆ ಆಗಿದ್ದ ‘ಪ್ರಹಾರ್’ ಚಿತ್ರಕ್ಕಾಗಿ ಭಾರತೀಯ ಸೇನೆಯೊಂದಿಗೆ ನಾನಾ ಪಟೇಕರ್ ಸೈನ್ಯದಲ್ಲಿ ಪಡೆದಿದ್ದರು. ಆ ಸಮಯದಲ್ಲಿ ಅವರು ಬಂದೂಕಿನ ಬಳಕೆ, ಶೂಟ್ ಮಾಡುವ ವಿಧಾನ ಇತ್ಯಾದಿಗಳ ತರಬೇತಿಯನ್ನೂ ಸಹ ಪಡೆದುಕೊಂಡಿದ್ದರು. ಇದೇ ಕಾರಣಕ್ಕೆ ನಾನಾ ಪಟೇಕರ್ ಅವರಿಗೆ ಶೂಟಿಂಗ್ ನಿಖರತೆ ಬಂದಿತ್ತು. ಅದನ್ನೇ ಅವರು ಮುಂದೆ ಹವ್ಯಾಸವಾಗಿಸಿಕೊಂಡು, ಮೆಡಲ್ಗಳನ್ನು ಸಹ ಗೆದ್ದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




