
ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಹಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಒಟಿಟಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿದೆ. ಪಾಕಿಸ್ತಾನದ (Pakistan) ಜನರು ಕೂಡ ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಧುರಂಧರ್’ ಸಿನಿಮಾದ ಪೂರ್ತಿ ಕಥೆ ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲಿ ನಡೆಯುತ್ತದೆ. ಆ ದೃಶ್ಯಗಳನ್ನು ಕಂಡು ಪಾಕ್ ಮಂದಿ ಫಿದಾ ಆಗಿದ್ದಾರೆ.
2000ನೇ ಇಸವಿಯ ಆಸುಪಾಸಿನಲ್ಲಿ ಪಾಕಿಸ್ತಾನ ಯಾವ ರೀತಿ ಇತ್ತು ಎಂಬುದನ್ನು ‘ಧುರಂಧರ್’ ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ನೋಡಿ ಪಾಕ್ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಅಷ್ಟು ಕರಾರುವಕ್ಕಾಗಿ ನಿರ್ದೇಶಕ ಆದಿತ್ಯ ಧಾರ್ ಅವರು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ‘ನಮಗೆ ಆ ಕಾಲಕ್ಕೆ ಹೋಗಿ ಬಂದ ಅನುಭವ ಆಯಿತು’ ಎಂದು ಪಾಕಿಸ್ತಾನದಲ್ಲಿನ ಪ್ರೇಕ್ಷಕರು ಹೊಗಳಿದ್ದಾರೆ.
ಈ ಸಿನಿಮಾ ಪಾಕ್ ವಿರೋಧಿ ಆಗಿಲ್ಲ ಎಂಬ ಅಭಿಪ್ರಾಯವನ್ನು ಕೂಡ ಅಲ್ಲಿನ ಕೆಲವು ಪ್ರೇಕ್ಷಕರು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ಗ್ಯಾಂಗ್ಸ್ಟರ್ ರೆಹಮಾನ್ ಡಕಾಯಿತ್ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
Saw the movie as a Pakistani born in Karachi
byu/Either-Spray5349 inDhurandhar
ಅಂದಹಾಗೆ, ಪಾಕಿಸ್ತಾನದ ಲಿಯಾರಿ ಪಟ್ಟಣದ ಸೆಟ್ ಹಾಕಿ ‘ಧುರಂಧರ್’ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಆ ಕಾಲದ ಲಿಯಾರಿಯನ್ನು ತೋರಿಸಲು ಕಲಾ ನಿರ್ದೇಶನದ ತಂಡ ಕಷ್ಟಪಟ್ಟಿದೆ. ನಿಖರವಾಗಿ ಉರ್ದು ಪೋಸ್ಟರ್, ಸೂಚನಾ ಫಲಕ ಮುಂತಾದ್ದನ್ನು ಬಳಸಿಕೊಳ್ಳಲಾಗಿದೆ. ಅದನ್ನೆಲ್ಲ ನೋಡಿ ಪಾಕಿಸ್ತಾನದ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ.
ಇದನ್ನೂ ಓದಿ: ‘ಧುರಂಧರ್ 2’ ಚಿತ್ರಕ್ಕಾಗಿ ಮತ್ತೆ ಶೂಟಿಂಗ್ ಮಾಡಲ್ಲ ಅರ್ಜುನ್ ರಾಮ್ಪಾಲ್
‘ಧುರಂಧರ್’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈಗ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು (ಫೆಬ್ರವರಿ 3) ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಟ್ರೇಲರ್ ಕೂಡ ಹೊರಬರಲಿದೆ. ಮಾರ್ಚ್ 19ರಂದು ‘ಧುರಂಧರ್ 2’ ತೆರೆಕಾಣಲಿದೆ. ಅಂದು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.