ನಟಿ ಶಿಲ್ಪಾ ಶೆಟ್ಟಿ ಅವರ ಫ್ಯಾಮಿಲಿ (Shilpa Shetty Family) ವಿಷಯ ಭಾರಿ ಚರ್ಚೆಗೆ ಒಳಪಡುತ್ತಿದೆ. ಪತಿ ರಾಜ್ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ಜೈಲು ಸೇರಿದ ಬಳಿಕ ಶಿಲ್ಪಾ ಶೆಟ್ಟಿ (Shilpa Shetty) ಸಖತ್ ಮುಜುಗರಕ್ಕೆ ಒಳಗಾದರು. ಈಗ ರಾಜ್ ಕುಂದ್ರಾ ಜಾಮೀನು ಪಡೆದು ಹೊರಬಂದಿದ್ದರೂ ಕೂಡ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅಚ್ಚರಿ ವಿಚಾರ ಏನೆಂದರೆ, ಈಗ ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿ ಹೆಸರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ವರ್ಗಾವಣೆ ಮಾಡಿದ್ದಾರೆ. ಏಕಾಏಕಿ ಅವರು ಈ ರೀತಿ ಮಾಡಿರುವುದು ಯಾಕೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. zapkey.com ಪ್ರಕಟಿಸಿದ ವರದಿಯ ಪ್ರಕಾರ, ಬರೋಬ್ಬರಿ 38.5 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ರಾಜ್ ಕುಂದ್ರಾ ಅವರು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ. ಅವರು ಈ ರೀತಿ ಮಾಡಿರುವುದಕ್ಕೆ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆಸ್ತಿ ವರ್ಗಾವಣೆಗಾಗಿ ಶಿಲ್ಪಾ ಶೆಟ್ಟಿ ಅವರು 1.9 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಉದ್ಯಮಿ ಆಗಿರುವ ರಾಜ್ ಕುಂದ್ರಾ ಅವರು ದೇಶದ ಹಲವು ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಆ ಪೈಕಿ ಕೆಲವನ್ನು ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾಯಿಸಿದ್ದಾರೆ. ಜುಹೂನಲ್ಲಿ ಇರುವ ಒಂದು ಮನೆ ಮತ್ತು ‘ಓಷನ್ ವ್ಯೂ’ ಹೆಸರಿನ ಕಟ್ಟಡದ 5 ಫ್ಲಾಟ್ಗಳನ್ನು ಶಿಲ್ಪಾ ಶೆಟ್ಟಿಗೆ ನೀಡಲಾಗಿದೆ. ಎಲ್ಲ ಸೇರಿಸಿದರೆ ಇದರ ಬೆಲೆ 38.5 ಕೋಟಿ ರೂ. ಆಗಲಿದೆ ಎಂದು ವರದಿ ಆಗಿದೆ.
ಸೋಶಿಯಲ್ ಮೀಡಿಯಾಗೆ ರಾಜ್ ಕುಂದ್ರಾ ವಾಪಸ್:
2021ರ ಜುಲೈ ತಿಂಗಳಲ್ಲಿ ರಾಜ್ ಕುಂದ್ರಾ ಬಂಧನಕ್ಕೆ ಒಳಗಾಗಿದ್ದರು. ಒಂದು ತಿಂಗಳ ನಂತರ ಅವರು ಜೈಲಿನಿಂದ ಹೊರ ಬಂದಿದ್ದರು. ಆದರೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ನವೆಂಬರ್ನಲ್ಲಿ. ಈ ಮಧ್ಯೆ ಅವರು ಸೋಶಿಯಲ್ ಮೀಡಿಯಾಗೆ ಗುಡ್ಬೈ ಹೇಳಿದ್ದರು. ಇತ್ತೀಚೆಗೆ ಅವರು ಮತ್ತೆ ಇನ್ಸ್ಟಾಗ್ರಾಮ್ಗೆ ಮರಳಿದ್ದಾರೆ. ಅವರು 9.77 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಿಂಬಾಲಿಸುತ್ತಿರುವುದು ಒಂದು ಖಾತೆಯನ್ನು ಮಾತ್ರ.
ರಾಜ್ ಕುಂದ್ರಾ ಹಿಂಬಾಲಿಸುತ್ತಿರುವ ಒಂದು ಖಾತೆ ಎಂದರೆ ಅದು ಬಾಂದ್ರಾದಲ್ಲಿರುವ ಸೀಫುಡ್ ರೆಸ್ಟೋರೆಂಟ್. ಈ ರೆಸ್ಟೋರೆಂಟ್ಗೆ ಅವರ ಪತ್ನಿ ಶಿಲ್ಪಾ ಶೆಟ್ಟಿ ಸಹ ಮಾಲಕಿ. ಈ ಕಾರಣಕ್ಕೆ ರಾಜ್ ಕುಂದ್ರಾ ಇದನ್ನು ಹಿಂಬಾಲಿಸುತ್ತಿದ್ದಾರೆ ಎನ್ನಲಾಗಿದೆ. ಹಳೆಯ ಎಲ್ಲಾ ಪೋಸ್ಟ್ಗಳನ್ನು ಇನ್ಸ್ಟಾಗ್ರಾಮ್ ಖಾತೆಯಿಂದ ರಾಜ್ ಕುಂದ್ರಾ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ:
8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ
‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್ ಕುಂದ್ರಾ