‘ರಾಮಾಯಣ 2’ 40% ಚಿತ್ರೀಕರಣ ಮುಗಿಸಲು ಬೇಕಿದೆ ಎರಡು ವರ್ಷ ಸಮಯ

ಸಿನಿಮಾ ನೋಡಿದವರೆಲ್ಲ ಸಿನಿಮಾದ ಗುಣಮಟ್ಟ, ಅದ್ಧೂರಿತನ, ವಿಎಫ್​​ಎಕ್ಸ್​​ನ ನೈಜತೆಗಳನ್ನು ಕೊಂಡಾಡುತ್ತಿದ್ದು, ಸಿನಿಮಾದ ಎರಡನೇ ಭಾಗದ ರಿಲೀಸ್​​ಗಾಗಿ ಎದುರು ನೋಡುತ್ತಿದ್ದಾರೆ. ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ದಿನಾಂಕ ಮುಂದಕ್ಕೆ ಹೋಗಿದೆ. ಖಚಿತ ಮಾಹಿತಿಯ ಪ್ರಕಾರ, ಎರಡನೇ ಭಾಗದ 60% ಚಿತ್ರೀಕರಣ ಈಗಾಗಲೇ ಮುಗಿದಿದೆ. ಆದರೂ ಸಹ ಸಿನಿಮಾ ಬಿಡುಗಡೆಗೆ ಸಾಕಷ್ಟು ಸಮಯದ ಅವಶ್ಯಕತೆ ಇದೆ.

‘ರಾಮಾಯಣ 2’ 40% ಚಿತ್ರೀಕರಣ ಮುಗಿಸಲು ಬೇಕಿದೆ ಎರಡು ವರ್ಷ ಸಮಯ
Ramayana Movie

Updated on: Nov 14, 2026 | 6:49 PM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾದ ಎರಡನೇ ಭಾಗದ ಅಪ್​​ಡೇಟ್
  • ‘ರಾಮಾಯಣ’ ಸಿನಿಮಾದ ಸೀಕ್ವೆಲ್ ತಡವಾಗಲಿದೆ
  • ‘ರಾಮಾಯಣ 2’ ಸಿನಿಮಾದ 60% ಚಿತ್ರೀಕರಣ ಆಗಿದೆ

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಹೆಚ್ಚಳ ಆಗುತ್ತಲೇ ಸಾಗುತ್ತಿದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಗುಣಮಟ್ಟ, ಅದ್ಧೂರಿತನ, ವಿಎಫ್​​ಎಕ್ಸ್​​ನ ನೈಜತೆಗಳನ್ನು ಕೊಂಡಾಡುತ್ತಿದ್ದು, ಸಿನಿಮಾದ ಎರಡನೇ ಭಾಗದ ರಿಲೀಸ್​​ಗಾಗಿ ಎದುರು ನೋಡುತ್ತಿದ್ದಾರೆ. ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ದಿನಾಂಕ ಮುಂದಕ್ಕೆ ಹೋಗಿದೆ. ಖಚಿತ ಮಾಹಿತಿಯ ಪ್ರಕಾರ, ಎರಡನೇ ಭಾಗದ 60% ಚಿತ್ರೀಕರಣ ಈಗಾಗಲೇ ಮುಗಿದಿದೆ. ಆದರೂ ಸಹ ಸಿನಿಮಾ ಬಿಡುಗಡೆಗೆ ಸಾಕಷ್ಟು ಸಮಯದ ಅವಶ್ಯಕತೆ ಇದೆ.

ಇತ್ತೀಚೆಗಷ್ಟೆ ‘ರಾಮಾಯಣ’ ಸಿನಿಮಾದ ಸಿನಿಮೋಟೋಗ್ರಾಫರ್ ಪಂಕಜ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ರಾಮಾಯಣ’ ಸೀಕ್ವೆಲ್‌ನ ಶೇ 60 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದಿದ್ದಾರೆ. 60% ಚಿತ್ರೀಕರಣ ಪೂರ್ಣವಾಗಿದ್ದರೂ ಸಹ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ’ ಎಂದಿದ್ದಾರೆ ಅವರು. ದೊಡ್ಡ ಮೊತ್ತದ ವೀಶುವಲ್ ಎಫೆಕ್ಟ್ಸ್ (VFX) ಮತ್ತು ಮೋಷನ್-ಕ್ಯಾಪ್ಚರ್ ಕೆಲಸಗಳು ಇನ್ನೂ ಬಾಕಿ ಇವೆ. ಅವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ’ ಎಂದಿದ್ದಾರೆ.

Loading...

‘ನಾವು ಈಗಾಗಲೇ ಭಾಗ 2 ರ ಶೇ 60 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಮೊದಲ ಭಾಗಕ್ಕಿಂತ ಎರಡನೇ ಭಾಗವು ಹೆಚ್ಚು ಭವ್ಯವಾಗಿರಲಿರುವುದರಿಂದ ಸಾಕಷ್ಟು ವಿಎಫ್‌ಎಕ್ಸ್ (VFX) ಕೆಲಸ ಮತ್ತು ಮೋಷನ್-ಕ್ಯಾಪ್ಚರ್ ಕೆಲಸಗಳು ಬಾಕಿ ಉಳಿದಿವೆ. ಇದರಲ್ಲಿ ಹನುಮಂತ ಮತ್ತು ಇಡೀ ವಾನರ ಸೇನೆಯಂತಹ ಸಿಜಿ (CG) ಪಾತ್ರಗಳು ಬಹಳಷ್ಟಿವೆ. ವಿಎಫ್​​ಎಕ್ಸ್​​ ಮೇಲೆ ಬಹಳ ವಿವರವಾದ ಕೆಲಸ ಇನ್ನೂ ಆಗಬೇಕಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:‘ತಲೆಕೆಡಿಸಿಕೊಳ್ಳಲ್ಲ’; ‘ರಾಮಾಯಣ’ ವಿಮರ್ಶೆ ಮತ್ತು ಟ್ರೋಲಿಂಗ್‌ಗೆ ರಣಬೀರ್ ಕಪೂರ್ ಉತ್ತರ

ಕಾಡುಗಳನ್ನು ಸಹ ವಿಎಫ್​​ಎಕ್ಸ್ ಮೂಲಕ ಸೃಷ್ಟಿಸಿರುವ ಬಗ್ಗೆ ಮಾತನಾಡಿರುವ ಅವರು, ನೈಜ ಕಾಡಿನಲ್ಲಿ ರಾಮಾಯಣವನ್ನು ಚಿತ್ರೀಕರಿಸುವುದರಿಂದ ಆ ಜಗತ್ತು ವಾಸ್ತವಿಕವಾಗಿ ಕಾಣಿಸಬಹುದು, ಆದರೆ ನಿರ್ದೇಶಕರು ಸೃಷ್ಟಿಸಲು ಬಯಸಿದ ದೃಶ್ಯದ ಅನುಭವವು ಅದೇ ಆಗಿರಬೇಕಾಗಿಲ್ಲ ಎಂದರು. ವಿಶೇಷವಾಗಿ ದೈತ್ಯ ರಾಕ್ಷಸರು ಮತ್ತು ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುವ ಪಾತ್ರಗಳನ್ನು ಒಳಗೊಂಡಿರುವ ಸನ್ನಿವೇಶಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಅವನ್ನೆಲ್ಲ ವಿಎಫ್​​ಎಕ್ಸ್ ಮೂಲಕ ಸೃಷ್ಟಿಸಲಾಗಿದೆ ಎಂದರು.

‘ರಾಮಾಯಣ’ ಸಿನಿಮಾದ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಖುದ್ದು ನಿರ್ಮಾಪಕ ನಮಿತ್ ಮಲ್ಹೋತ್ರಾ ಘೋಷಣೆ ಮಾಡಿರುವಂತೆ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, 2028ರ ರಾಮನವಮಿ ಅಥವಾ ದೀಪಾವಳಿ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಜೊತೆಗೆ ಸಿನಿಮಾದ ಮೂರನೇ ಭಾಗವನ್ನೂ ನಿರ್ಮಾಣ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us