ಬಾಲಿವುಡ್ನಲ್ಲಿ ಹೊಸ ತಲೆಮಾರಿನ ನಟ-ನಟಿಯರ ಮೇಲೆ ಫೋಕಸ್ ಹೆಚ್ಚುತ್ತಿದೆ. ಸೈಫ್ ಅಲಿ ಖಾನ್, ಶಾರುಖ್ ಖಾನ್ (Shah Rukh Khan) ಮುಂತಾದ ಸ್ಟಾರ್ ಕಲಾವಿದರ ಮಕ್ಕಳು ಹೋದಲ್ಲಿ ಬಂದಲ್ಲಿ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತಿವೆ. ಶಾರುಖ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಇನ್ನೂ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ಸುಹಾನಾ ಖಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಿದ್ದಾರೆ. ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್ (Khushi Kapoor) ಜೊತೆ ಇತ್ತೀಚೆಗೆ ಸುಹಾನಾ ಅವರು ಸುತ್ತಾಡುತ್ತಿರುವುದು ಕಾಣಿಸಿದೆ. ಆಗ ಅವರು ಏನೋ ಟೆನ್ಷನ್ನಲ್ಲಿ ಇದ್ದರು ಎಂಬುದನ್ನು ಗುರುತಿಸಿದ್ದಾರೆ ಪಾಪರಾಜಿಗಳು.
ಮುಂಬೈನ ಅಂಧೇರಿಯಲ್ಲಿ ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಪಾಪರಾಜಿಗಳು ಪ್ರಯತ್ನಿಸಿದ್ದಾರೆ. ಆದರೆ ಸುಹಾನಾ ಖಾನ್ ಒಂದು ನಿಮಿಷವೂ ಅಲ್ಲಿ ನಿಂತಿಲ್ಲ. ಪಾಪರಾಜಿಗಳು ಮನವಿ ಮಾಡಿಕೊಂಡಾಗ ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಒಂದರ್ಧ ನಿಮಿಷವಾದರೂ ನಿಂತು ಪೋಸ್ ನೀಡುತ್ತಾರೆ. ಆದರೆ ಸುಹಾನಾ ಖಾನ್ ಗಡಿಬಿಡಿಯಲ್ಲಿ ಹೊರಟು ಹೋದರು.
ಇದನ್ನೂ ಓದಿ: ಶಾರುಖ್ ಪುತ್ರಿ ಸುಹಾನಾ ಖಾನ್ ಹಾಟ್ ಫೋಟೋಶೂಟ್ ವೈರಲ್; ಅಪ್ಪನ ಕಮೆಂಟ್ ಏನು?
ಸುಹಾನಾ ಖಾನ್ ಅವರ ಈ ಗಡಿಬಿಡಿ ಕಂಡ ಪಾಪರಾಜಿಯೊಬ್ಬರು ನೇರವಾಗಿ ಪ್ರಶ್ನೆ ಕೇಳಿದ್ದಾರೆ. ‘ಸುಹಾನಾ ಅವರೇ ಸ್ವಲ್ಪ ನಿಲ್ಲಿ. ನಿಮ್ಮ ಸಿನಿಮಾ ರಿಲೀಸ್ ಆಗಲಿದೆ. ಈಗ ಟೆನ್ಷನ್ ಯಾಕೆ? ನಮ್ಮ ಮುಖ ನೆನಪಿಟ್ಟುಕೊಳ್ಳಿ. ನಾವು ದಿನವೂ ಸಿಗುತ್ತಿರುತ್ತೇವೆ’ ಎಂದು ಮಾತನಾಡಿಸಿದ್ದಕ್ಕೆ ಸುಹಾನಾ ಖಾನ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್, ಖುಷಿ ಕಪೂರ್, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸುತ್ತಿದ್ದಾರೆ. ಈ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಲಿದೆ. ಶಾರುಖ್ ಪುತ್ರಿಯ ನಟನೆ ನೋಡಲು ಅವರ ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅವರು ತುಂಬ ಫೇಮಸ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಸದ್ಯ 28 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.