‘ಕಿಂಗ್’ ಸಿನಿಮಾ ಅನ್ನು ಸುತ್ತುವರೆದ ಹಾಲಿವುಡ್ ಸಿನಿಮಾಗಳು, ಗೆಲ್ತಾರಾ ಶಾರುಖ್ ಖಾನ್?

ಸಿನಿಮಾ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಚಿತ್ರೀಕರಣದಲ್ಲಿದೆ. ಸಿನಿಮಾ ಇದೇ ಡಿಸೆಂಬರ್​​ಗೆ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್ ಸಿನಿಮಾಕ್ಕೆ ಭಾರತದ ಹಲವು ಭಾಷೆಯ ಸಿನಿಮಾಗಳು ದಾರಿ ಬಿಟ್ಟುಕೊಟ್ಟಿವೆ. ಆದರೆ ಹಾಲಿವುಡ್ ಸಿನಿಮಾಗಳು ಶಾರುಖ್ ಸಿನಿಮಾ ಅನ್ನು ಸುತ್ತವರೆದಿದ್ದು, ಸಂಕಷ್ಟಕ್ಕೆ ಎಡೆ ಮಡಿವೆ.

‘ಕಿಂಗ್’ ಸಿನಿಮಾ ಅನ್ನು ಸುತ್ತುವರೆದ ಹಾಲಿವುಡ್ ಸಿನಿಮಾಗಳು, ಗೆಲ್ತಾರಾ ಶಾರುಖ್ ಖಾನ್?
Srk King

Updated on: Oct 31, 2026 | 12:42 PM

ಮುಖ್ಯಾಂಶಗಳು

  • ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ
  • ‘ಕಿಂಗ್’ ಸಿನಿಮಾ ಡಿಸೆಂಬರ್ 24ಕ್ಕೆ ರಿಲೀಸ್ ಆಗಲಿದೆ
  • ಅದೇ ಸಮಯದಲ್ಲಿ ಹಾಲಿವುಡ್ ಸಿನಿಮಾಗಳು ರಿಲೀಸ್ ಆಗುತ್ತಿವೆ

ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ, ಶಾರುಖ್ ಖಾನ್ ಪುತ್ರಿಯೂ ಸಹ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಚಿತ್ರೀಕರಣದಲ್ಲಿದೆ. ಸಿನಿಮಾ ಇದೇ ಡಿಸೆಂಬರ್​​ಗೆ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್ ಸಿನಿಮಾಕ್ಕೆ ಭಾರತದ ಹಲವು ಭಾಷೆಯ ಸಿನಿಮಾಗಳು ದಾರಿ ಬಿಟ್ಟುಕೊಟ್ಟಿವೆ. ಆದರೆ ಹಾಲಿವುಡ್ ಸಿನಿಮಾಗಳು ಶಾರುಖ್ ಸಿನಿಮಾ ಅನ್ನು ಸುತ್ತವರೆದಿದ್ದು, ಸಂಕಷ್ಟಕ್ಕೆ ಎಡೆ ಮಡಿವೆ.

ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಡಿಸೆಂಬರ್ 24 ಕ್ಕೆ ರಿಲೀಸ್ ಆಗುತ್ತಿದೆ. ಕ್ರಿಸ್​​ಮಸ್ ಮತ್ತು ಹೊಸವರ್ಷವನ್ನು ಗುರಿಯಾಗಿಸಿಕೊಂಡು ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಶಾರುಖ್ ಖಾನ್. ಆದರೆ ಅದೇ ಸಮಯಕ್ಕೆ ಸರಿಯಾಗಿ ಹಾಲಿವುಡ್​​ನ ಕೆಲ ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಇದು ‘ಕಿಂಗ್’ ಸಿನಿಮಾಕ್ಕೆ ಭರ್ಜರಿ ಸ್ಪರ್ಧೆಯನ್ನು ಭಾರತದಲ್ಲಿ ಒಡ್ಡಲಿದ್ದು, ಶಾರುಖ್ ಖಾನ್ ಸಂಕಷ್ಟ ಎದುರಿಸಬೇಕಾಗಿ ಬಂದಿದೆ.

ವಿಶ್ವದಾದ್ಯಂತ ಸಿನಿಮಾ ಪ್ರೇಕ್ಷಕರು ಎದುರು ನೋಡುತ್ತಿರುವ ‘ಅವೇಂಜರ್ಸ್: ಡೋಮ್ಸ್​ ಡೇ’ ಸಿನಿಮಾ ಡಿಸೆಂಬರ್ 17ಕ್ಕೆ ಭಾರತದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ವಿಶ್ವದಾದ್ಯಂತ ಭಾರಿ ಕ್ರೇಜ್ ಹುಟ್ಟಿಸಿದೆ. ಅದಾದ ಕೆಲವೇ ದಿನಗಳಲ್ಲಿ ಜನಪ್ರಿಯ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಡ್ಯೂನ್ 3’ ರಿಲೀಸ್ ಆಗಲಿದೆ. ಇದಕ್ಕೂ ಸಹ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರ ಬಳಿಕ ಜನಪ್ರಿಯ ‘ಜುಮಾಂಜಿ’ ಸಿನಿಮಾ ಸಹ ರಿಲೀಸ್ ಆಗಲಿದೆ. ಈ ಮೂರೂ ಸಿನಿಮಾಗಳು ಸಹ ಬಲು ಜನಪ್ರಿಯ ಹಾಲಿವುಡ್ ಪ್ರಾಂಚೈಸ್ ಸಿನಿಮಾಗಳಾಗಿದ್ದು, ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಿನಿಮಾಗಳಾಗಿವೆ.

ಇದನ್ನೂ ಓದಿ:ಶಾರುಖ್ ಖಾನ್ ಜೈಲು ಸೇರಿದ್ದಾಗ ಬಿಡಿಸಿಕೊಂಡು ಬಂದಿದ್ದ ನಾನಾ ಪಾಟೇಕರ್

ಭಾರತದಲ್ಲಿ ಸಹ ‘ಅವೇಂಜರ್ಸ್’, ‘ಡ್ಯೂನ್’ ಮತ್ತು ‘ಜುಮಾಂಜಿ’ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಅಲ್ಲದೆ ಈ ಮೂರು ಸಿನಿಮಾಗಳು ಮಲ್ಟಿಪ್ಲೆಕ್ಸ್​​ಗಳಲ್ಲಿ ಹೆಚ್ಚಿನ ಸ್ಕ್ರೀನ್ ಅನ್ನು ಅಕ್ವೈರ್ ಮಾಡಿಕೊಳ್ಳಲಿವೆ. ಇದು ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾಕ್ಕೆ ಸಮಸ್ಯೆ ಸೃಷ್ಟಿಸಲಿದೆ. ‘ಕಿಂಗ್’ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಬಾಲಿವುಡ್​​ನ ಇತರೆ ಕೆಲ ಸಿನಿಮಾಗಳು ಬಿಡುಗಡೆ ಮುಂದೂಡಲ್ಪಟ್ಟಿದೆ. ಆದರೆ ಹಾಲಿವುಡ್ ಸಿನಿಮಾಗಳಿಂದ ಸ್ಪರ್ಧೆ ಎದುರಿಸುವಂತಾಗಿದೆ ನಟ ಶಾರುಖ್ ಖಾನ್.

ಶಾರುಖ್ ಖಾನ್ ಅವರ ಈ ಹಿಂದಿನ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿವೆ. ‘ಕಿಂಗ್’ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ಖುದ್ದು ಶಾರುಖ್ ಖಾನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಜೊತೆಗೆ ಶಾರುಖ್ ಪುತ್ರಿ ಸುಹಾನಾ ಸಹ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us