AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಜೈಲು ಸೇರಿದ್ದಾಗ ಬಿಡಿಸಿಕೊಂಡು ಬಂದಿದ್ದ ನಾನಾ ಪಾಟೇಕರ್

ಹಿಂದಿ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ಶಾರುಖ್ ಖಾನ್ ಅವರ ಈ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದನ್ನು ನೋಡಿದ ಅಭಿಮಾನಿಗಳು ಭಾವುಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಾರುಖ್ ಒಂದು ತಪ್ಪು ಮಾಡಿ ಜೈಲಿಗೆ ಹೋಗುವ ಸಂದರ್ಭ ಬಂದಾಗ ನಾನಾ ಪಾಟೇಕರ್ ಸಹಾಯ ಮಾಡಿದ್ದರು.

ಶಾರುಖ್ ಖಾನ್ ಜೈಲು ಸೇರಿದ್ದಾಗ ಬಿಡಿಸಿಕೊಂಡು ಬಂದಿದ್ದ ನಾನಾ ಪಾಟೇಕರ್
Nana Patekar, Shah Rukh KhanImage Credit source: PTI
ಮದನ್​ ಕುಮಾರ್​
|

Updated on: Oct 11, 2026 | 10:52 AM

Share

ಹಿರಿಯ ನಟ ನಾನಾ ಪಾಟೇಕರ್ ಇತ್ತೀಚೆಗೆ ನಿಧನರಾದರು. ಅವರ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಖ್ಯಾತ ನಟ ಶಾರುಖ್ ಖಾನ್ ಅವರ ಆರಂಭಿಕ ದಿನಗಳಲ್ಲಿ ನಾನಾ ಪಾಟೇಕರ್ ಸಹಾಯ ಮಾಡಿದ್ದರು. ಆ ಬಗ್ಗೆ ಶಾರುಖ್ ಖಾನ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರೀ ವೈರಲ್ ಆಗಿದೆ. ಶಾರುಖ್ ಖಾನ್ ಅವರು ಜೈಲು ಸೇರಿದ್ದಾಗ ಅವರನ್ನು ಬಿಡಿಸಿಕೊಂಡು ಬಂದಿದ್ದು ಇದೇ ನಾನಾ ಪಾಟೇಕರ್!

ಆರಂಭದ ದಿನಗಳಲ್ಲಿ ಮುಂಬೈಗೆ ಹೊಸಬರಾಗಿದ್ದ ಶಾರುಖ್ ಖಾನ್, 1992ರ ‘ರಾಜು ಬನ್ ಗಯಾ ಜಂಟಲ್​ಮನ್’ ಚಿತ್ರದಲ್ಲಿ ನಾನಾ ಪಾಟೇಕರ್ ಜೊತೆಗೆ ನಟಿಸಿದ್ದರು. ವೃತ್ತಿಜೀವನದ ಆರಂಭದಲ್ಲಿ ಶಾರುಖ್ ಖಾನ್ ಮಾಡಿದ ತಪ್ಪೊಂದಕ್ಕೆ ಜೈಲು ಸೇರಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ನಾನಾ ಪಾಟೇಕರ್ ಅವರು ಶಾರುಖ್ ಅವರನ್ನು ಜೈಲಿನಿಂದ ಬಿಡಿಸಲು ನೆರವಾಗಿದ್ದರು.

ತೇಹಲ್ಕಾ ಅವರ ‘ಥಿಂಕ್ 2012’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾರುಖ್ ಖಾನ್, 1990ರ ದಶಕದ ಆರಂಭದಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದರು. ಹೊಸದಾಗಿ ಮದುವೆಯಾಗಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರನ್ನು ಗುರಿಯಾಗಿಸಿ ಮ್ಯಾಗಜೀನ್ ಒಂದರಲ್ಲಿ ನಟಿಯೊಬ್ಬರ ಜೊತೆಗಿನ ಸಂಬಂಧದ ಬಗ್ಗೆ ವರದಿ ಪ್ರಕಟವಾಗಿತ್ತು. ಇದರಿಂದ ಗೌರಿ ಖಾನ್ ಆತಂಕಗೊಂಡರೆ, ಶಾರುಖ್ ಖಾನ್ ಆಕ್ರೋಶಗೊಂಡಿದ್ದರು.

ಆ ಕೋಪದಲ್ಲೇ ಆ ಪತ್ರಕರ್ತರ ಮನೆಗೆ ತೆರಳಿದ ಶಾರುಖ್, ತಮ್ಮ ಮಾವ (ಸೇನಾಧಿಕಾರಿಯಾಗಿದ್ದವರು) ಉಡುಗೊರೆಯಾಗಿ ನೀಡಿದ್ದ ಕತ್ತಿಯನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದರು. ‘ನಾನು ತುಂಬಾ ತಪ್ಪಾಗಿ ವರ್ತಿಸಿದೆ, ಜೈಲು ಸೇರಬೇಕಾಯಿತು. ನನ್ನ ಮಾವ ಪಂಜಾಬಿ ಸಂಪ್ರದಾಯದಂತೆ ಕತ್ತಿ ನೀಡಿದ್ದರು. ‘ಮಗನೇ, ನೀನು ನನ್ನ ಮಗಳನ್ನು ರಕ್ಷಿಸಬೇಕು’ ಎಂದಿದ್ದರು. ನಾನು ಯೋಚಿಸದೆ ಆ ಕತ್ತಿಯನ್ನು ತೆಗೆದುಕೊಂಡು ಪತ್ರಕರ್ತರ ಮನೆಗೆ ಹೋದೆ’ ಎಂದು ಶಾರುಖ್ ಆ ಘಟನೆಯನ್ನು ಮೆಲುಕು ಹಾಕಿದ್ದರು.

ಪತ್ರಕರ್ತರ ಮನೆಯಲ್ಲಿದ್ದವರನ್ನು ಬೆದರಿಸಿ, ಯುವಕನೊಬ್ಬನನ್ನು ಗಾಯಗೊಳಿಸಿದ್ದ ಶಾರುಖ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ‘ಕಭಿ ಹಾ ಕಭಿ ನಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗ ಪೊಲೀಸರು ಸೆಟ್‌ಗೆ ಬಂದು ಶಾರುಖ್ ಅವರನ್ನು ವಶಕ್ಕೆ ಪಡೆದಿದ್ದರು. ಸಂಜೆ 6 ಗಂಟೆ ದಾಟಿದ್ದರಿಂದ ಅಂದು ಜಾಮೀನು ಸಿಕ್ಕಿರಲಿಲ್ಲ. ಆ ಕಠಿಣ ಪರಿಸ್ಥಿತಿಯಲ್ಲಿ ನಾನಾ ಪಾಟೇಕರ್ ಅವರು ಸಹಾಯಕ್ಕೆ ಬಂದಿದ್ದರು.

ಇದನ್ನೂ ಓದಿ:  ಅಭಿಮಾನಿಗಳ ದರ್ಶನಕ್ಕಾಗಿ ಶಾರುಖ್ ಖಾನ್ ಮನೆ ಮುಂದೆ ನಿರ್ಮಾಣವಾಗುತ್ತಿದೆ ಹೊಸ ಗ್ಯಾಲರಿ

‘ನಾನಾ ಪಾಟೇಕರ್ ಕೊನೆಗೆ ನನ್ನನ್ನು ಜೈಲಿನಿಂದ ಹೊರಬರಲು ತುಂಬಾ ಸಹಾಯ ಮಾಡಿದರು. ವಾರಾಂತ್ಯದಲ್ಲಿ ಸಂಜೆಯ ನ್ಯಾಯಾಲಯದಿಂದ ಜಾಮೀನು ಪಡೆಯಲು ಅವರು ನೆರವಾದರು. ಅಂದಿನಿಂದ ನಾನು ನನ್ನ ನಡವಳಿಕೆಯನ್ನು ತಿದ್ದಿಕೊಂಡಿದ್ದೇನೆ’ ಎಂದು ಶಾರುಖ್ ಖಾನ್ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ