ಕಳಪೆ ಅನಿಮೇಷನ್ ಸಿನಿಮಾ ಸೂಪರ್ ಹಿಟ್; ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆದು ಚಿತ್ರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ಬ್ರಿಟನ್ ಸೆನ್ಸಾರ್ ಮಂಡಳಿಯು 18+ ಪ್ರಮಾಣಪತ್ರ ನೀಡಿದೆ. ಅತಿಯಾದ ಹಿಂಸಾಚಾರ, ತೀವ್ರ ಲೈಂಗಿಕ ಸನ್ನಿವೇಶಗಳು ಹಾಗೂ ಕ್ರೂರ ದೃಶ್ಯಗಳಿಗಾಗಿ ಗರಿಷ್ಠ ರೇಟಿಂಗ್ ನೀಡಲಾಗಿದ್ದು, ವಿಶ್ವದಾದ್ಯಂತ ಸಿನಿಮಾ ಪ್ರೇಕ್ಷಕರಲ್ಲಿ ಚಿತ್ರದ ಕುರಿತು ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ.

ಕಳಪೆ ಅನಿಮೇಷನ್ ಸಿನಿಮಾ ಸೂಪರ್ ಹಿಟ್; ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆದು ಚಿತ್ರ
ನಿಯು ಲಿಯಾ
Edited By:

Updated on: Aug 20, 2026 | 7:55 AM

ಮುಖ್ಯಾಂಶಗಳು

  • ಕಳಪೆ ಗ್ರಾಫಿಕ್ಸ್ ಟ್ರೋಲ್ ಬೆನ್ನಲ್ಲೇ ಥಿಯೇಟರ್‌ನಲ್ಲಿ ಮುಗಿಬಿದ್ದ ಪ್ರೇಕ್ಷಕರು
  • ಹಾಲಿವುಡ್ 'ಸ್ಪೈಡರ್ ಮ್ಯಾನ್' ಚಿತ್ರವನ್ನೇ ಹಿಂದಿಕ್ಕಿದ ಚೀನಾ ಅನಿಮೇಷನ್ ಸಿನಿಮಾ
  • ಮೀಮ್ಸ್ ಮಹಿಮೆ: ನಗಲಿಕ್ಕೆ ಹೋಗಿ ಕೋಟಿ ಕೋಟಿ ಹಣ ಸುರಿದ ಜನ

ಚೀನಾದ ಚಿತ್ರರಂಗದಲ್ಲಿ ಅತ್ಯಂತ ವಿಚಿತ್ರ ಹಾಗೂ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಅತ್ಯಂತ ಕಳಪೆ ಗುಣಮಟ್ಟದ ಕಡಿಮೆ ಬಜೆಟ್‌ನ ಅನಿಮೇಷನ್ ಚಿತ್ರವೊಂದು ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ‘ನಿಯು ಲೈ’ ಹೆಸರಿನ ಈ ಅನಿಮೇಷನ್ ಸಿನಿಮಾ ಒಳ್ಳೆಯ ಕಾರಣಕ್ಕಲ್ಲ ಬದಲಾಗಿ ತೀರಾ ಕಳಪೆಯಾಗಿದೆ ಎಂಬ ಕಾರಣಕ್ಕೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಮತ್ತು ಮೀಮ್ಸ್‌ಗಳು ಈ ಸಣ್ಣ ಚಿತ್ರವನ್ನು ಅದ್ಭುತ ಬಾಕ್ಸ್ ಆಫೀಸ್ ಯಶಸ್ಸಿನತ್ತ ಕೊಂಡೊಯ್ದಿವೆ.

‘ದಿ ಕೌ ಈಸ್ ಕಮಿಂಗ್’ ಎಂಬ ಅರ್ಥ ಕೊಡುವ 86 ನಿಮಿಷಗಳ ಈ ಚಿತ್ರವು ಕರು ಒಂದರ ಕಥೆಯನ್ನು ಹೊಂದಿದೆ. ಚಿತ್ರದ ಕಳಪೆ 3D ಗ್ರಾಫಿಕ್ಸ್ ಮತ್ತು ವಿಚಿತ್ರ ಸಂಭಾಷಣೆಗಳು ಆನ್‌ಲೈನ್‌ನಲ್ಲಿ ಭಾರೀ ನಗೆಪಾಟಲಿಗೆ ಈಡಾಗಿದ್ದವು. ಆದರೆ ಇದೇ ಅಪಹಾಸ್ಯವು ಜನರ ಕುತೂಹಲವನ್ನು ಕೆರಳಿಸಿತು. ಆ ಕುತೂಹಲವೇ ಟಿಕೆಟ್ ಮಾರಾಟವಾಗಿ ಬದಲಾಯಿತು.

ಈ ಸಿನಿಮಾ ಹಾಲಿವುಡ್‌ನ ‘ದಿ ಒಡಿಸ್ಸಿ’ ಮತ್ತು ‘ಸ್ಪೈಡರ್ ಮ್ಯಾನ್’ ಚಿತ್ರಗಳಿಗೂ ಪೈಪೋಟಿ ನೀಡಿದೆ. ಕೆಲವು ದಿನಗಳ ದೈನಂದಿನ ಕಲೆಕ್ಷನ್‌ನಲ್ಲಿ ಹಾಲಿವುಡ್ ಚಿತ್ರಗಳನ್ನೇ ಇದು ಹಿಂದಿಕ್ಕಿದೆ. ಮೊದಲ ಹತ್ತು ದಿನಗಳಲ್ಲಿ ದಿನಕ್ಕೆ ಕೇವಲ 200 ಯುವಾನ್ ಗಳಿಸುತ್ತಿದ್ದ ಸಿನಿಮಾ ಈಗ 1.7 ಕೋಟಿಗೂ ಹೆಚ್ಚು ಯುವಾನ್ ಗಳಿಸಿದೆ.

ಇದನ್ನೂ ಓದಿ: ವಿಶ್ವಾದ್ಯಂತ ಹವಾ ಸೃಷ್ಟಿಸಲು ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್ ರಿಲೀಸ್: ವಿದೇಶದಲ್ಲೂ ಯಶ್ ಕ್ರೇಜ್

ಪ್ರಚಾರಕ್ಕೆ ಹಣವಿಲ್ಲದ ಕಾರಣ ಥಿಯೇಟರ್ ಸಿಬ್ಬಂದಿಯೇ ಕೈಯಿಂದ ಪೋಸ್ಟರ್ ಬರೆದು ಅಂಟಿಸಿದ್ದರು. ಸ್ನೇಹಿತರನ್ನು ತಮಾಷೆ ಮಾಡಲು ಶುರುವಾದ ಈ ಟ್ರೆಂಡ್ ದೊಡ್ಡ ಮಟ್ಟದ ಕಲೆಕ್ಷನ್‌ಗೆ ಕಾರಣವಾಯಿತು. ಕೆಲವರು ಈ ಚಿತ್ರದ ಮುಗ್ಧತೆಯನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಇದು ಚೀನಾ ಚಿತ್ರರಂಗಕ್ಕೆ ನಾಚಿಕೆಗೇಡು ಎಂದಿದ್ದಾರೆ. ಟೀಕೆಗಳ ನಡುವೆಯೂ ಜನ ಮುಗಿಬಿದ್ದು ಚಿತ್ರ ವೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us