
ಇಂದು (ಅಕ್ಟೋಬರ್ 06) ನಟ ಧ್ರುವ ಸರ್ಜಾ ಹುಟ್ಟುಹಬ್ಬ. ಅಭಿಮಾನಿಗಳು ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯಳನ್ನು ಕೋರಿದ್ದಾರೆ. ಹುಟ್ಟುಹಬ್ಬದ ದಿನ ಕೆಲ ಹೊಸ ಸಿನಿಮಾಗಳನ್ನು ಧ್ರುವ ಸರ್ಜಾ ಘೋಷಿಸಿದ್ದಾರೆ. ಧ್ರುವ ಸರ್ಜಾ ಅವರ ಹಿಟ್ ಸಿನಿಮಾ ‘ಪೊಗರು’ ನಿರ್ದೇಶನ ಮಾಡಿದ್ದ ನಂದ ಕಿಶೋರ್ ಅವರು ಇದೀ ಧ್ರುವ ಸರ್ಜಾ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದು, ಸಿನಿಮಾಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುತ್ತಿರುವಂತೆ ಇದೊಂದು ಕೌಟುಂಬಿಕ ಡ್ರಾಮಾ ಕತೆ ಹೊಂದಿರುವ ಸಿನಿಮಾ ಆಗಿದೆ.
ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ಅವರು ನಿರ್ಮಿಸುತ್ತಿರುವ, ಬಿ.ಎಸ್ ಸುಧೀಂದ್ರ ಅವರ ಸಹ ನಿರ್ಮಾಪಕರಾಗಿರುವ ಹಾಗೂ ನಂದ ಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ‘ಪೊಗರು’ ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ನಂದ ಕಿಶೋರ್ ಅವರು ನಂದ ಸುಧೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
‘ವಸುದೈವ ಕುಟುಂಬಕಂ’, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುತ್ತದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ ‘ವಸುದೈವ ಕುಟುಂಬಕಂ’ ಚಿತ್ರದಲ್ಲಿ ಹೆಸರಾಂತ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಬಳಗವಿರಲಿದೆ.
ಇದನ್ನೂ ಓದಿ:ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ
ಧ್ರುವ ಸರ್ಜಾ ಅವರು ‘ಕೆಮಿಸ್ಟ್ರಿ’ ಹೆಸರಿನ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಇದೇ ದಿನ ಮಾಡಿದ್ದಾರೆ. ಸಿನಿಮಾನಲ್ಲಿ ಸಭಾ ನಟೇಶ್ ನಾಯಕಿ. ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಧ್ರುವ ಸರ್ಜಾ ಹಾಗೂ ನಂದ ಸುಧೀರ್ ಅವರು ‘ಪೊಗರು’ ಸಿನಿಮಾಕ್ಕೆ ಒಂದಾಗಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಆ ಸಿನಿಮಾದ ಹಾಡುಗಳು ಸಹ ದೊಡ್ಡ ಹಿಟ್ ಆಗಿದ್ದವು. ಆ ಸಿನಿಮಾನಲ್ಲಿ ರಶ್ಮಿಕಾ, ನಾಯಕಿಯಾಗಿ ನಟಿಸಿದ್ದರು. ಮತ್ತೊಮ್ಮೆ ‘ಪೊಗರು’ ಮ್ಯಾಜಿಕ್ ರೀಕ್ರಿಯೇಟ್ ಮಾಡುತ್ತಾರಾ ನಂದ ಸುಧೀರ್ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ