ಈಕೆ ಮೆಹ್ರೆನ್ ಕೌರ್ ಫಿರ್ಝಾದ. ಬಾಲಿವುಡ್ ಫಿಲ್ಲೌರಿ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಎಂಟ್ರಿ ಕೊಟ್ಟ ತಾರೆ. ಮುಗ್ಧ ನಟನೆಯ ಮೂಲಕ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಪಂಜಾಬಿ ಬ್ಯೂಟಿ.
ಇವರ ನಟನೆಗೆ ಮಾತ್ರವಲ್ಲ ಇವರ ಸೌಂದರ್ಯ ಮತ್ತು ಲೀನ್ ಫಿಗರ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಮೆಹ್ರೆನ್ ಫಿಟ್ ಆ್ಯಂಡ್ ಫೈನ್ ಬಾಡಿಯ ಗುಟ್ಟು ನಿತ್ಯ ವರ್ಕೌಟ್ ಅಂತೆ. ಫಿಟ್ನೆಸ್ ಬಗ್ಗೆ ಮೆಹ್ರೆನ್ ಸಖತ್ ಸೀರಿಯಸ್ ಅಂತೆ. ಸೋ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರೆ. ಇನ್ನು ಇವರ ವರ್ಕೌಟ್ನಲ್ಲಿ ಕಾರ್ಡಿಯೋ, ಲೆಗ್ ವರ್ಕೌಟ್, ಲೈಟ್ ವೇಟ್ ಟ್ರೇನಿಂಗ್ ಇರುತ್ತಂತೆ. ಹಾಗೆಯೇ ಪ್ರತಿದಿನ ಯೋಗ ಕೂಡಾ ಮಾಡ್ತಾರಂತೆ ಇವರು.
ಟೋನ್ಡ್ ಬಾಡಿ ಮೇಂಟೇನ್ ಮಾಡಲು ಸ್ಟ್ರಿಟ್ ವರ್ಕೌಟ್ ಫಾಲೋ ಮಾಡ್ತಾರಂತೆ. ತನ್ನ ಸ್ಟ್ರೆಂಥ್ ಹಾಗೂ ಫ್ಲೆಕ್ಸಿಬಲಿಟಿ ಹೆಚ್ಚಿಸಲು ಕಿಕ್ ಬಾಕ್ಸಿಂಗ್ ಮತ್ತು ಜಿಮ್ ತುಂಬಾನೇ ಸಹಕಾರಿಯಾಗಿದೆ ಅಂತಾರೆ ಫಿಟ್ನೆಸ್ ಫ್ರೀಕ್ ಮೆಹ್ರೆನ್. ಹಾಗೆಯೇ ಇವರ ಜಿಮ್ ವರ್ಕೌಟ್ನಲ್ಲಿ ಪುಲ್ ಅಪ್ಸ್, ಪುಶ್ ಅಪ್ಸ್, ಆಬ್ಸ್ ವರ್ಕೌಟ್ ಕೂಡಾ ಒಳಗೊಂಡಿರುತ್ತಂತೆ.
ಪ್ರತಿ ದಿನ ತಪ್ಪದೇ ವರ್ಕೌಟ್ ಮಾಡೋದ್ರಿಂದ ಇಷ್ಟು ಫಿಟ್ ಆಗಿರಲು ಸಾಧ್ಯ ಅನ್ನೋದು ಮೆಹ್ರೆನ್ ಅವರ ಮಾತು. ಫಂಕ್ಷನಲ್ ಟ್ರೇನಿಂಗ್ ಮತ್ತು ವೇಟ್ ಟ್ರೇನಿಂಗ್ ಮಾಡೋದು ಅಂದ್ರೆ ತುಂಬ ಇಷ್ಟವಂತೆ. ಈ ಎಲ್ಲಾ ಎಕ್ಸ್ಸೈಜ್ಗಳು ಇವರನ್ನು ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಮಾಡಿದೆ.
Published On - 9:19 pm, Thu, 24 October 19