ಜಾಹ್ನವಿ ಕಪೂರ್ ಬಾಲಿವುಡ್ ಸೆನ್ಸೇಷನಲ್ ನಟಿ. ದಡಕ್ ಸಿನಿಮಾದ ಮೂಲಕ ಸಿನಿಪಯಣವನ್ನು ಆರಂಭಿಸಿದ ತಾರೆ. ಚೊಚ್ಚಲ ಸಿನಿಮಾದಲ್ಲಿಯೇ ಮುಗ್ಧ ನಟನೆಯ ಮೂಲಕ ಮನೆಮಾತಾದ ಬೆಡಗಿ. ಜಾಹ್ನವಿಯ ನಟನೆಗೆ ಮಾತ್ರವಲ್ಲ ಸೌಂದರ್ಯ ಮತ್ತು ಫರ್ಪೆಕ್ಟ್ ಫಿಟ್ನೆಸ್ಗೂ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಕೆಯ ಫಿಟ್ ಆ್ಯಂಡ್ ಫೈನ್ ಬಾಡಿ ಎಂಥವರನ್ನಾದರೂ ಮೋಡಿ ಮಾಡುತ್ತೆ.
ಹಾಗಾದ್ರೆ ಜಾಹ್ನವಿ ಅವರ ಆರೋಗ್ಯಕರ ಮೈ ಕಟ್ಟಿನ ಸೀಕ್ರೆಟ್ ನಿತ್ಯದ ವರ್ಕೌಟ್ ಅಂತೆ. ನಮಗೆಲ್ಲಾ ತಿಳಿದ ಹಾಗೆ ಜಾಹ್ನವಿ ಅವರ ಜಿಮ್ ವರ್ಕೌಟ್ ಸುದ್ದಿಗಳು ಆಗಾಗ ಹರಿದಾಡ್ತಾನೆ ಇರುತ್ತೆ. ಆದ್ರೆ ಜಿಮ್ನಲ್ಲಿ ಏನೆಲ್ಲ ವರ್ಕೌಟ್ ಮಾಡ್ತಾರೆ ಅನ್ನೋದು ಇಲ್ಲಿದೆ ನೋಡಿ.
ಸೆಲೆಬ್ರೆಟಿಗಳು ಅಂದ ಮೇಲೆ ಫಿಟ್ನೆಸ್ ಮೇಲೆ ಹೆಚ್ಚಿನ ಕಾಳಜಿ ವಹಿಸ್ಬೇಕಾಗುತ್ತೆ. ಇದಕ್ಕಾಗಿ ಜಿಮ್ನ ಮೊರೆ ಹೋಗುವುದು ಕಾಮನ್. ಇದು ಜಾಹ್ನವಿ ಅವರಿಗೆ ಹೆಚ್ಚು ಸೂಟ್ ಆಗುತ್ತೆ. ಯಾಕಂದ್ರೆ ಜಾಹ್ನವಿ ಹೆಚ್ಚಿನ ಸಮಯವನ್ನು ಜಿಮ್ನಲ್ಲೇ ಕಳೆಯುತ್ತಾರಂತೆ. ಬ್ಯೂಟಿಫುಲ್ ಜಾಹ್ನವಿ ವರ್ಕೌಟ್ ಬಗ್ಗೆ ತುಂಬಾನೇ ಪರ್ಟಿಕ್ಯುಲರ್ ಅಂತೆ. ಹಾಗಾಗಿ ಯಾವುದೇ ಕಾರಣಕ್ಕೂ ಇದನ್ನು ಮಿಸ್ ಮಾಡೋದಿಲ್ವಂತೆ.
ಇವರು ಜಿಮ್ನಲ್ಲಿ ಕಾರ್ಡಿಯೋ ಮತ್ತು ವೇಟ್ ಲಿಫ್ಟ್ಂಗ್ ಎಕ್ಸ್ಸೈಜ್ಗಳು ಡೇಲಿ ರುಟೀನ್ನಲ್ಲಿ ಇರುತ್ತಂತೆ. ಆಫ್ ಡೇಸ್ನಲ್ಲಿ ಮನೆಯಲ್ಲಿಯೇ ಇದ್ದು ಸ್ವಿಮಿಂಗ್ ಮತ್ತೆ ಜಾಗಿಂಗ್ ಮಾಡಿ ಫಿಟ್ ಆಗಿದ್ದಾರಂತೆ ಈ ಚೆಲುವೆ. ಹಾಗೆಯೇ ವರ್ಕೌಟ್ನಲ್ಲಿ ಫಂಕ್ಷನಲ್ ಟ್ರೇನಿಂಗ್ ಕೂಡಾ ಮಾಡ್ತಾರಂತೆ. ಜಾಹ್ನವಿ ಅವರ ಫರ್ಪೆಕ್ಟ್ ಫಿಟ್ನೆಸ್ ನ ಮತ್ತೊಂದು ಗುಟ್ಟು ಡ್ಯಾನ್ಸ್ ಅಂತೆ.
Published On - 9:27 am, Mon, 28 October 19