Amanda Bynes: ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಾಡಿದ ಖ್ಯಾತ ನಟಿ; ಮಾನಸಿಕ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

|

Updated on: Mar 21, 2023 | 6:16 PM

ಲಾಸ್​ ಏಂಜಲಿಸ್​ನ ರಸ್ತೆಯಲ್ಲಿ ಅಮಾಂಡಾ ಬೈನ್ಸ್​ ಬೆತ್ತಲಾಗಿ ತಿರುಗಾಡಿದ್ದಾರೆ. ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ಸಹಾಯ ಬೇಡಿದ್ದಾರೆ.

Amanda Bynes: ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಾಡಿದ ಖ್ಯಾತ ನಟಿ; ಮಾನಸಿಕ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಅಮಾಂಡಾ ಬೈನ್ಸ್
Follow us on

ಹಾಲಿವುಡ್​ನ ಖ್ಯಾತ ನಟಿ ಅಮಾಂಡಾ ಬೈನ್ಸ್ (Amanda Bynes)​ ಅವರ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಲಾಸ್​ ಏಂಜಲಿಸ್​ನ (Los Angeles) ಬೀದಿಯಲ್ಲಿ ಅಮಾಂಡಾ ಬೈನ್ಸ್ ಬೆತ್ತಲಾಗಿ ಓಡಾಡಿದ ಘಟನೆ ವರದಿ ಆಗಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅವರು 90ರ ದಶಕದಲ್ಲಿ ತುಂಬ ಫೇಮಸ್​ ಆಗಿದ್ದರು. ಈಗ ಅವರಿಗೆ 36 ವರ್ಷ ವಯಸ್ಸು. ಭಾನುವಾರ (ಮಾರ್ಚ್​ 19) ಅಮಾಂಡಾ ಬೈನ್ಸ್​ ಅವರು ಸಂಪೂರ್ಣ ಬೆತ್ತಲಾಗಿ ನಡು ರಸ್ತೆಯಲ್ಲಿ ತಿರುಗಾಡಿದ್ದಾರೆ. ಅವರನ್ನು ಕಂಡ ಎಲ್ಲರಿಗೂ ಅಚ್ಚರಿ ಆಗಿದೆ. ಈಗ ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಾಂಡಾ ಬೈನ್ಸ್ ಅವರ ವರ್ತನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ವಿಚಿತ್ರವಾಗಿದೆ ನಟಿಯ ವರ್ತನೆ:

ಮೊದಲಿನಿಂದಲೂ ಅಮಾಂಡಾ ಬೈನ್ಸ್​ ಅವರ ಮಾನಸಿಕ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇತ್ತು. ಈಗ ಅದು ಮಿತಿ ಮೀರಿದಂತಿದೆ. ಲಾಸ್​ ಏಂಜಲಿಸ್​ನ ರಸ್ತೆಯಲ್ಲಿ ಬೆತ್ತಲಾಗಿ ತಿರುಗಾಡಿದ ಅವರು ಸ್ವತಃ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ಸಹಾಯ ಬೇಡಿದ್ದಾರೆ. ಮೊದಲು ಅವರನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಲಾಯಿತು. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.

ಇದನ್ನೂ ಓದಿ: ಮಾನಸಿಕ ಅಸ್ವಸ್ಥತೆಯು ಹೃದಯ ಹಾಗೂ ಮನಸ್ಸನ್ನು ಹಾನಿಗೊಳಿಸಬಹುದು

ಅಮಾಂಡಾ ಬೈನ್ಸ್​ಗೆ ವಿವಾದ ಹೊಸದಲ್ಲ:

1996ರಲ್ಲಿ ಬಾಲನಟಿಯಾಗಿ ಅಮಾಂಡಾ ಬೈನ್ಸ್​ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡರು. ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಹೆಚ್ಚಿಸಿಕೊಂಡರು. ಒಂದಷ್ಟು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. 2012ರಿಂದ ಈಚೆಗೆ ಅಮಾಂಡಾ ಬೈನ್ಸ್​ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಮಾದಕ ವಸ್ತು ಸೇವನೆ, ಮದ್ಯಪಾನದ ಬಳಿಕ ವಾಹನ ಚಾಲನೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದುಂಟು.

ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡ ಆರೋಪಿಗಳು

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ನಟಿ:

2014ರಲ್ಲಿ ಅಮಾಂಡಾ ಬೈನ್ಸ್​ ಅವರು ತಂದೆ-ತಾಯಿ ವಿರುದ್ಧವೇ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಮಾದಕ ವಸ್ತು ಸೇವನೆಯ ಪರಿಣಾಮದಿಂದ ಅವರು ಆ ರೀತಿ ಆರೋಪ ಹೊರಿಸಿದ್ದರು ಎಂಬುದು ನಂತರ ತಿಳಿದುಬಂತು. ತಮಗೆ ಬೈ-ಪೋಲರ್ ಡಿಸಾರ್ಡರ್​ ಇದೆ ಎಂಬುದು ಅವರು ಬಳಿಕ ಬಹಿರಂಗಪಡಿಸಿದರು.

ಅಮಾಂಡಾ ಬೈನ್ಸ್​ ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರ ಎಲ್ಲ ವ್ಯವಹಾರಗಳ ಜವಾಬ್ದಾರಿಯನ್ನು ನ್ಯಾಯಾಲಯವು ಪೋಷಕರಿಗೆ ವಹಿಸಿತ್ತು. ಆದರೆ ತಾವೇ ಎಲ್ಲವನ್ನೂ ನಿಭಾಯಿಸಿಕೊಳ್ಳುವುದಾಗಿ 2022ರಲ್ಲಿ ಅಮಾಂಡಾ ಬೈನ್ಸ್​ ಅನುಮತಿ ಪಡೆದುಕೊಂಡಿದ್ದರು. ಅದಾಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅವರು ಬೆತ್ತಲಾಗಿ ತಿರುಗಾಡಿದ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:16 pm, Tue, 21 March 23