ಬೆಂಗಳೂರು: ಆಸ್ಪತ್ರೆ ಕಟ್ಟಡದಿಂದ ಬಿದ್ದು ವೈದ್ಯ ಸಾವು; ಮಾನಸಿಕ ಖಿನ್ನತೆಯಿಂದ ಮೃತಪಟ್ಟಿರುವ ಶಂಕೆ
ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಡಾ. ಅಂಬರೀಶ್ ಕಟ್ಟಡದಿಂದ ಜಿಗಿದಿದ್ದಾರೆ. ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿರುವ ಶಂಕೆ ಸದ್ಯ ವ್ಯಕ್ತವಾಗಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಆಸ್ಪತ್ರೆ ಕಟ್ಟಡದಿಂದ ಬಿದ್ದು ವೈದ್ಯ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಅಂಬರೀಶ್ ವಿಜಯ ರಾಘವ ಮೃತ ವೈದ್ಯ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಡಾ.ಅಂಬರೀಶ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಡಾ. ಅಂಬರೀಶ್ ಕಟ್ಟಡದಿಂದ ಜಿಗಿದಿದ್ದಾರೆ. ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿರುವ ಶಂಕೆ ಸದ್ಯ ವ್ಯಕ್ತವಾಗಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಮಗನನ್ನು ಹುಡುಕಿಕೊಡುವಂತೆ ಮನವಿ ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ ಎಂದು ಟಿವಿ9 ಮೂಲಕ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ನೀರುಪಾಲಾದ ವೈದ್ಯ ರುದ್ರೇಶ್ ತಂದೆ ಶ್ರೀಧರ್ ಮನವಿ ಮಾಡಿಕೊಂಡಿದ್ದಾರೆ. ಶ್ರೀಧರ್, ಭದ್ರಾ ನದಿ ತೀರದಲ್ಲೇ ಅನ್ನ-ನೀರು ಬಿಟ್ಟು ಮಗನಿಗಾಗಿ ಕಾಯುತ್ತಿದ್ದಾರೆ. ಕಳೆದ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ಸಮೀಪವಿರುವ ಭದ್ರಾ ನದಿಯಲ್ಲಿ ಬೆಂಗಳೂರು ಮೂಲದ ವೈದ್ಯ ರುದ್ರೇಶ್ (36) ಕೊಚ್ಚಿ ಹೋಗಿದ್ದರು. ಸದ್ಯ ಮೃತದೇಹಕ್ಕಾಗಿ SDRF, ಅಗ್ನಿಶಾಮಕ ದಳ, ಮುಳುಗು ತಜ್ಞರು, ಶೌರ್ಯ ತಂಡದಿಂದ ಜಂಟಿ ಕಾರ್ಯಚರಣೆ ನಡೆಯುತ್ತಿದೆ. ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತನ್ನ ಸ್ನೇಹಿತರ ಜೊತೆಗೂಡಿ ಜಿಲ್ಲೆಯ ಕಳಸ ಪಟ್ಟಣಕ್ಕೆ ಬಂದಿದ್ದ ರುದ್ರೇಶ್ ಕಳೆದ ಭಾನುವಾರ ಪೋಟೋ ತೆಗೆಯುವ ವೇಳೆ ಕಾಲುಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ರು. ಅಂದಿನಿಂದಲೂ SDRF ಪಡೆ, ಅಗ್ನಿಶಾಮಕದಳದ ಸಿಬ್ಬಂದಿ, ನುರಿತ ಮುಳುಗು ತಜ್ಞರು, ಶೌರ್ಯ ವಿಪತ್ತು ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ನೀರುಪಾಲಾಗಿದ್ದ ರುದ್ರೇಶ್ ಹುಡುಕಾಟ ನಡೆಸುತಿದ್ರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ವಿಚಾರ ತಿಳಿದು ಭಾನುವಾರ ಸಂಜೆಯೇ ಬೆಂಗಳೂರಿನಿಂದ ಕಳಸಕ್ಕೆ ಆಗಮಿಸಿದ್ದ ರುದ್ರೇಶ್ ತಂದೆ, ಶ್ರೀಧರ್ ಭದ್ರಾ ನದಿ ತೀರದಲ್ಲಿಯೇ ಬೀಡುಬಿಟ್ಟಿದ್ದಾರೆ. ಅಯ್ಯೋ.. ಆಗಿದ್ದು ಆಗೋಯ್ತು, ನನ್ನ ಮಗನ ಮೃತದೇಹವನ್ನಾದ್ರೂ ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಮಗನಾಗಿ ತಂದೆಯ ಅಂತ್ಯ ಸಂಸ್ಕಾರವನ್ನ ಮಾಡ್ಬೇಕು, ಆದ್ರೆ ನನಗೆ ಮಗನ ಅಂತ್ಯ ಸಂಸ್ಕಾರ ನೆರವೇರಿಸೋ ಪರಿಸ್ಥಿತಿ ಬಂದೋದಾಗಿದೆ. ಆದ್ರೂ ಪರವಾಗಿಲ್ಲ, ಗಟ್ಟಿ ಮನಸ್ಸು ಮಾಡಿಕೊಂಡಿದ್ದೇನೆ, ಹೇಗಾದ್ರೂ ಮಾಡಿ ಕೊಚ್ಚಿ ಹೋಗಿರುವ ಮಗನ ಮೃತದೇಹ ಹುಡಕಿಕೊಡಿ ಅಂತಾ ಭದ್ರಾ ನದಿ ತೀರದಲ್ಲಿ ತಂದೆ ಶ್ರೀಧರ್ ಅಂಗಲಾಚುತ್ತಿರೋ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು.
ಇದನ್ನೂ ಓದಿ: ಕಾಫಿ ವ್ಯಾಪಾರದಲ್ಲಿ 1 ಕೋಟಿ ನಷ್ಟ: ಚಿಕ್ಕಮಗಳೂರಿನ ವ್ಯಾಪಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ
ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ -ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟ ತಂದೆ