Covid 19 Karnataka Update: ಕರ್ನಾಟಕದ 1785 ಮಂದಿಗೆ ಕೊರೊನಾ ಸೋಂಕು, 25 ಸಾವು

Covid 19 Karnataka Update: ಕರ್ನಾಟಕದ 1785 ಮಂದಿಗೆ ಕೊರೊನಾ ಸೋಂಕು, 25 ಸಾವು
ಸಾಂದರ್ಭಿಕ ಚಿತ್ರ

ಬೆಂಗಳೂರು ನಗರದಲ್ಲಿ ಗುರುವಾರ 414 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 05, 2021 | 9:15 PM

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಒಂದೇ ದಿನ 1785 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. 25 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 1651 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಜಿಲ್ಲೆಗಳಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ ಒಟ್ಟು 29,13,512 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 28,52,368 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 24,414 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಒಟ್ಟು 36,705 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದಿನ ಸೋಂಕು ಖಚಿತ ಪ್ರಕರಣದ ಸರಾಸರಿ ಶೇ 1.10 ಇದೆ.

ಬೆಂಗಳೂರು ನಗರದಲ್ಲಿ ಗುರುವಾರ 414 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,29,340 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 15,901 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ 8560 ಸಕ್ರಿಯ ಪ್ರಕರಣಗಳಿವೆ. ಇಂದು 554 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ರಾಜ್ಯದ ಒಟ್ಟು 1785 ಮಂದಿಯಲ್ಲಿ ಗುರುವಾರ ಕೊರೊನಾ ಸೋಂಕು ದೃಢಪಟ್ಟಿತ್ತು. ಬಾಗಲಕೋಟೆ, ಬಳ್ಳಾರಿ 6, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 414, ಬೀದರ್ 1, ಚಾಮರಾಜನಗರ 44, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 97, ಚಿತ್ರದುರ್ಗ 26, ದಕ್ಷಿಣ ಕನ್ನಡ 337, ದಾವಣಗೆರೆ, ಧಾರವಾಡ 10, ಗದಗ 5, ಹಾಸನ 125, ಹಾವೇರಿ 3, ಕಲಬುರಗಿ 9, ಕೊಡಗು 100, ಕೋಲಾರ 57, ಕೊಪ್ಪಳ 7, ಮಂಡ್ಯ 46, ಮೈಸೂರು 105, ರಾಯಚೂರು 7, ರಾಮನಗರ 8, ಶಿವಮೊಗ್ಗ 35, ತುಮಕೂರು 49, ಉಡುಪಿ 134, ಉತ್ತರ ಕನ್ನಡ 60, ವಿಜಯಪುರ 5.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? ಬೆಳಗಾವಿ 3, ಬೆಂಗಳೂರು ನಗರ 5, ಕೋಲಾರ, ದಕ್ಷಿಣ ಕನ್ನಡ 3, ಮಂಡ್ಯ, ರಾಯಚೂರು, ಉಡುಪಿ 2, ಗದಗ, ಹಾವೇರಿ, ಕೊಡಗು, ಕೊಪ್ಪಳ, ಉತ್ತರ ಕನ್ನಡ 1.

(Karnataka Coronavirus Numbers 1785 infected 25 deaths due to covid)

ಇದನ್ನೂ ಓದಿ: Covishield Vaccine ಕೊವಿಶೀಲ್ಡ್ ಲಸಿಕೆ ಡೋಸ್​​ಗಳ ನಡುವಿನ ಅಂತರ ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆ

ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕದಿಂದ ಅನಾಥರಾದ ಮಕ್ಕಳಿಗೆ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಸೌಲಭ್ಯ ಘೋಷಿಸಿದ ಕೇಂದ್ರ ಸರ್ಕಾರ

Follow us on

Most Read Stories

Click on your DTH Provider to Add TV9 Kannada