Covishield Vaccine ಕೊವಿಶೀಲ್ಡ್ ಲಸಿಕೆ ಡೋಸ್‌ಗಳ ನಡುವಿನ ಅಂತರ ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆ
ಕೊವಿಶೀಲ್ಡ್ ಡೋಸ್ ನಡುವಿನ ಪ್ರಸ್ತುತ ಅಂತರವು ಎಲ್ಲ ವಯಸ್ಕರಿಗೆ 12 ರಿಂದ 16 ವಾರಗಳವರೆಗೆ ಇರುತ್ತದೆ. ಭಾರತದಲ್ಲಿ ಲಸಿಕೆ ಹಾಕುವಿಕೆಯ ಪ್ರಾರಂಭದಲ್ಲಿ ಕೊವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಶಿಫಾರಸು ಮಾಡಿರುವ ಅಂತರವು 4-6 ವಾರಗಳಾಗಿದ್ದು, ಇದನ್ನು 4 ರಿಂದ 8 ವಾರಗಳಿಗೆ ಮತ್ತು ಅಂತಿಮವಾಗಿ 12 ರಿಂದ 16 ವಾರಗಳಿಗೆ ಹೆಚ್ಚಿಸಲಾಯಿತು.
ದೆಹಲಿ: ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಸರ್ಕಾರ ಮತ್ತೊಮ್ಮೆ ಕಡಿಮೆ ಮಾಡಬಹುದು. ಆದರೆ ಈ ಬಾರಿ ಅದು ಕೇವಲ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಎಂದು ಮಿಂಟ್ ವರದಿ ಮಾಡಿದೆ. ಈ ಬಗ್ಗೆ ಎರಡರಿಂದ ನಾಲ್ಕು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೊವಿಡ್ -19 ವರ್ಕಿಂಗ್ ಗ್ರೂಪ್ ಅಧ್ಯಕ್ಷ ಡಾ ಎನ್. ಕೆ. ಅರೋರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಂತಿಮ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ಹೇಳಿದೆ.
ಕೊವಿಶೀಲ್ಡ್ ಡೋಸ್ ನಡುವಿನ ಪ್ರಸ್ತುತ ಅಂತರವು ಎಲ್ಲ ವಯಸ್ಕರಿಗೆ 12 ರಿಂದ 16 ವಾರಗಳವರೆಗೆ ಇರುತ್ತದೆ. ಭಾರತದಲ್ಲಿ ಲಸಿಕೆ ಹಾಕುವಿಕೆಯ ಪ್ರಾರಂಭದಲ್ಲಿ ಕೊವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಶಿಫಾರಸು ಮಾಡಿರುವ ಅಂತರವು 4-6 ವಾರಗಳಾಗಿದ್ದು, ಇದನ್ನು 4 ರಿಂದ 8 ವಾರಗಳಿಗೆ ಮತ್ತು ಅಂತಿಮವಾಗಿ 12 ರಿಂದ 16 ವಾರಗಳಿಗೆ ಹೆಚ್ಚಿಸಲಾಯಿತು.
ಈ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸುವ ನಿರ್ಧಾರವು ಟೀಕೆಗೆ ಒಳಗಾಯಿತು. ಏಕೆಂದರೆ ಈ ಕ್ರಮವು ಆ ಸಮಯದಲ್ಲಿ ದೇಶದಲ್ಲಿ ಲಸಿಕೆ ಕೊರತೆಯನ್ನು ನಿರ್ವಹಿಸುವ ಪ್ರಯತ್ನವೆಂದು ಹೇಳಲಾಯಿತು. ಆದಾಗ್ಯೂ, ಈ ನಿರ್ಧಾರವು ಉದಯೋನ್ಮುಖ ಅಂತರಾಷ್ಟ್ರೀಯ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿದೆ ಎಂದು ತಜ್ಞರು ಪ್ರತಿಪಾದಿಸಿದರು. ಇದರ ಪ್ರಕಾರ ಡೋಸ್‌ಗಳ ನಡುವಿನ ದೀರ್ಘ ಅಂತರವು ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.
ಈ ಅಧ್ಯಯನಗಳಲ್ಲಿ ಲಸಿಕೆಯ ಮೊದಲ ಡೋಸ್ನಿಂದ ಉತ್ಪತ್ತಿಯಾದ ಪ್ರತಿಕಾಯಗಳ ಶೇಕಡಾವಾರು ಸಾಕಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ. ಆದ್ದರಿಂದ, ಮೊದಲ ಡೋಸ್ ಹೆಚ್ಚು ಸಮಯ ಕೆಲಸ ಮಾಡಲು ಅನುವು ಮಾಡಿಕೊಟ್ಟು ಮುಂದಿನ ಡೋಸ್ ಅನ್ನು ವಿಳಂಬಗೊಳಿಸಬೇಕು. ಆದರೆ ಸ್ವಲ್ಪ ಸಮಯದ ನಂತರ, ಜೂನ್ ನಲ್ಲಿ ಭಾರತವು ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿತು. ಹೊಸ ಅಧ್ಯಯನಗಳು ಕೊವಿಶೀಲ್ಡ್‌ನ ಮೊದಲ ಡೋಸ್ ನ ಪರಿಣಾಮಕಾರಿತ್ವವನ್ನು ಮೊದಲೇ ಅತಿಯಾಗಿ ಅಂದಾಜಿಸಲಾಗಿದೆ ಎಂದು ಹೇಳಿದೆ. ಇದು ಮತ್ತೆ ಹಲವು ದೇಶಗಳಲ್ಲಿ ಕೊವಿಶೀಲ್ಡ್‌ನ ಎರಡು ಡೋಸ್‌ಗಳ ಅಂತರವನ್ನು ಕಡಿಮೆಗೊಳಿಸಿತು.
ಭಾರತೀಯ ತಜ್ಞರು ವ್ಯಾಕ್ಸಿನೇಷನ್ ಪರಿಸ್ಥಿತಿಯು ಕ್ರಿಯಾತ್ಮಕವಾಗಿದೆ ಮತ್ತು ಹೊಸ ಅಧ್ಯಯನಗಳು ಹೊರಹೊಮ್ಮಿದಂತೆ ಬದಲಾಗುತ್ತವೆ ಎಂದು ಪುನರುಚ್ಚರಿಸಿದ್ದಾರೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಾರ್ವಜನಿಕ ಆರೋಗ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಕೊವಿಶೀಲ್ಡ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯಂತೆಯೇ ಇರುವುದರಿಂದ ಪ್ರತಿ ಡೋಸ್‌ನ ಪರಿಣಾಮಕಾರಿತ್ವದ ಬಗ್ಗೆ ಅಂತರಾಷ್ಟ್ರೀಯ ಅಧ್ಯಯನಗಳು ಲಭ್ಯವಿದೆ. ಈಗ ಭಾರತದಲ್ಲಿಯೂ ಸ್ಥಳೀಯ ಜನಸಂಖ್ಯೆಯ ಮೇಲೆ ಡೋಸ್‌ಗಳ ಪರಿಣಾಮಕಾರಿತ್ವದ ಕುರಿತು ಅನೇಕ ಅಧ್ಯಯನಗಳಿವೆ. “ನಾವು ವಿವಿಧ ವಯೋಮಾನದವರು ಮತ್ತು ವಿವಿಧ ಪ್ರದೇಶಗಳಿಂದ ಲಸಿಕೆಗಳ ಪ್ರಭಾವ ಮತ್ತು ಅವುಗಳ ಡೋಸೇಜ್ ಮಧ್ಯಂತರದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದೇವೆ” ಎಂದು ಡಾ ಎನ್.ಕೆ. ಅರೋರಾ ಹೇಳಿದ್ದಾರೆ.
ಹಿರಿಯ ನಾಗರಿಕರನ್ನು ಕೊವಿಡ್‌ಗೆ ಹೆಚ್ಚು ದುರ್ಬಲರೆಂದು ಪರಿಗಣಿಸಲಾಗಿದ್ದರೂ, 45 ರಿಂದ 60 ರ ವಯೋಮಾನದವರು ಸಹ ಇತರ ಜನಸಂಖ್ಯೆಗಿಂತ ಹೆಚ್ಚಿನ ಅಪಾಯದಲ್ಲಿದ್ದಾರೆ ಮತ್ತು ಸಹ-ರೋಗಕಾರಕ ಅಂಶಗಳ ಉಪಸ್ಥಿತಿಯು ಅಪಾಯವನ್ನು ಹೆಚ್ಚಿಸುತ್ತದೆ.
ಸರ್ಕಾರವು ಕೊವಿಶೀಲ್ಡ್ ಡೋಸ್‌ಗಳ ನಡುವಿನ ಅಂತರವನ್ನು ವಿಸ್ತರಿಸಿದಾಗ, ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗುವ ಕ್ರೀಡಾಪಟುಗಳು, ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ವ್ಯಕ್ತಿಗಳು, ಉದ್ಯೋಗ ಇತ್ಯಾದಿಗಳಿಗೆ ಕೆಲವು ವಿನಾಯಿತಿಗಳನ್ನು ಅನುಮತಿಸಿತು.
ಇದನ್ನೂ ಓದಿ: ಕಪ್ಪು ಜೀರಿಗೆಯಲ್ಲಿ ಕೊವಿಡ್ ಸೋಂಕು ತಡೆಗಟ್ಟುವ ಸಾಮರ್ಥ್ಯವಿದೆ: ವರದಿ
ಇದನ್ನೂ ಓದಿ: ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸೆಲ್ಫ್ ಗೋಲ್ ಹೊಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ
(Government may again reduce the gap between the two doses of the Covishield vaccine)
Published On - 5:39 pm, Thu, 5 August 21