ಮಹತ್ವದ ಒಪ್ಪಂದ; ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ ಸ್ಟಾರ್ಮರ್ ಬಣ್ಣನೆ
ಭಾರತ ಮತ್ತು ಇಂಗ್ಲೆಂಡ್ (ಯುಕೆ) ನಡುವೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಶ್ಲಾಘಿಸಿದರು. ಇದು ಭಾರತ ಇದುವರೆಗೆ ಮಾಡಿದ ಅತ್ಯಂತ ಸಮಗ್ರ ಒಪ್ಪಂದಗಳಲ್ಲಿ ಒಂದಾಗಿದೆ ಎಂದು ನಾನು ಹೇಳಬಲ್ಲೆ. "ಪ್ರಧಾನಿ ನರೇಂದ್ರ ಮೋದಿ ನಿಮ್ಮ ನಾಯಕತ್ವ ಮತ್ತು ವಾಸ್ತವಿಕತೆಗೆ ಧನ್ಯವಾದಗಳು. ಮತ್ತು ಈ ಒಪ್ಪಂದವನ್ನು ಗಡಿ ದಾಟಿಸಲು ತುಂಬಾ ಶ್ರಮಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಲಂಡನ್, ಜುಲೈ 24: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ (UK PM Starmer) ಭಾರತ-ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿದ್ದಾರೆ. ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಇದು ಒಂದು ಮಹತ್ವದ ಕ್ಷಣ. ಈ ಒಪ್ಪಂದವು ಎರಡೂ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಇಂಗ್ಲೆಂಡ್ ಯುರೋಪಿಯನ್ ಒಕ್ಕೂಟವನ್ನು (ಇಯು) ತೊರೆದ ನಂತರದ “ಅತ್ಯಂತ ಮಹತ್ವದ ಒಪ್ಪಂದ” ಇದಾಗಿದೆ ಹಾಗೇ, ಇದು ಭಾರತ ಇದುವರೆಗೆ ಮಾಡಿಕೊಂಡ ಅತ್ಯಂತ ಸಮಗ್ರ ಒಪ್ಪಂದಗಳಲ್ಲಿ ಒಂದಾಗಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Modi in UK) ಅವರೊಂದಿಗೆ ಲಂಡನ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ರಿಟಿಷ್ ಪ್ರಧಾನಿ, “ಎಫ್‌ಟಿಎ ಎರಡೂ ದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ವೇತನವನ್ನು ಹೆಚ್ಚಿಸುತ್ತದೆ, ಜೀವನ ಮಟ್ಟವನ್ನು ಸುಧಾರಿಸುತ್ತದೆ ಮತ್ತು ದುಡಿಯುವ ಜನರ ಜೇಬಿನಲ್ಲಿ ಹೆಚ್ಚಿನ ಹಣವನ್ನು ಹಾಕುತ್ತದೆ” ಎಂದು ಹೇಳಿದರು.
“ಇಂದು ನಮ್ಮ ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಐತಿಹಾಸಿಕ ದಿನವಾಗಿದೆ” ಎಂದು ಪ್ರಧಾನಿ ಮೋದಿ ಲಂಡನ್‌ಗೆ ತಮ್ಮ ಅಧಿಕೃತ ಭೇಟಿಯ ಸಮಯದಲ್ಲಿ ಹೇಳಿದ್ದಾರೆ. “ಹಲವಾರು ವರ್ಷಗಳ ಕಠಿಣ ಪರಿಶ್ರಮದ ನಂತರ ಇಂದು ನಮ್ಮ ಎರಡೂ ರಾಷ್ಟ್ರಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ ಎಂಬುದು ನನಗೆ ಬಹಳ ಸಂತೋಷ ತಂದಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಅವರ ಪಕ್ಕದಲ್ಲಿದ್ದ ಯುಕೆ ಪ್ರಧಾನಿ ಸ್ಟಾರ್ಮರ್ ಕೂಡ ಇದಕ್ಕೆ ಧ್ವನಿಗೂಡಿಸಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

