AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವಿಎಂಗಳ ಕಾರ್ಯಕ್ಷಮತೆ ಬಗ್ಗೆ ನಮ್ಮ ನಾಯಕರು ಪ್ರಶ್ನೆ ಎತ್ತಿರುವುದು ಸಮಂಜಸವಾಗಿದೆ: ಶಿವರಾಜ ತಂಗಡಿಗಿ

ಈವಿಎಂಗಳ ಕಾರ್ಯಕ್ಷಮತೆ ಬಗ್ಗೆ ನಮ್ಮ ನಾಯಕರು ಪ್ರಶ್ನೆ ಎತ್ತಿರುವುದು ಸಮಂಜಸವಾಗಿದೆ: ಶಿವರಾಜ ತಂಗಡಿಗಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2025 | 7:53 PM

Share

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ ಯಾಕೆ ಈವಿಎಂಗಳ ಕಾರ್ಯಕ್ಷಮತೆ ಬಗ್ಗೆ ಯಾಕೆ ಕಾಂಗ್ರೆಸ್ ನಾಯಕರು ಪ್ರಶ್ನೆ ಎತ್ತಲಿಲ್ಲ ಅಂತ ಕೇಳಿದರೆ ಸಚಿವ ತಂಗಡಿಗಿ, ಅದನ್ನೂ ತನಿಖೆ ಮಾಡಲಿ ಅಂತ ನಾವು ಹೇಳುತ್ತಿದ್ದೇವೆ, ಲೋಕ ಸಭಾ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್​ಗಳ ಬಳಕೆಯಾಗಿದ್ದರೆ ನಮಗೆ ಹೆಚ್ಚು ಸ್ಥಾನ ಸಿಗುತ್ತಿದ್ದವು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇನ್ನೂ ಹೆಚ್ಚು ಅಂತರದಿಂದ ಗೆಲ್ಲುತ್ತಿದ್ದರು ಎಂದರು.

ಬೆಂಗಳೂರು, ಜುಲೈ 24: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಸೋಲಿಗೆ ಮತಗಳ್ಳತನವೇ ಕಾರಣ ಎಂದು ಡಿಕೆ ಶಿವಕುಮಾರ್ ಮತ್ತು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸಮರ್ಪಕವಾಗಿ ನಡೆದಿಲ್ಲ ಎಂದು ರಾಹುಲ್ ಗಾಂಧಿಯವರು (Rahul Gandhi) ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿಗಿ, ನಮ್ಮ ನಾಯಕರು ಹೇಳಿದ್ದರಲ್ಲಿ ಸತ್ಯಾಂಶ ಅಡಗಿದೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ರಾಹುಲ್ ಗಾಂಧಿಯವರು ಹಲವು ಪ್ರಶ್ನೆಗಳನ್ನು ಎತ್ತಿದ್ದರು, ಆದರೆ ಚುನಾವಣಾ ಆಯೋಗ ಅವರ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ ಎಂದರು. ವೈಯಕ್ತಿಕವಾಗಿ ತಾನು ಲೋಕಸಭಾ ಚುನಾವಣೆಗಿಂತ ಮುಂಚೆಯಿಂದ ಈವಿಎಂ ಯಂತ್ರಗಳಲ್ಲಿ ಸಮಸ್ಯೆ ಇದೆ, ಬೇರೆ ಅಭಿವೃದ್ಧಿ ಹೊಂದಿದ ದೇಶಗಳ ಹಾಗೆ ನಮ್ಮಲ್ಲೂ ಈವಿಎಂ ಬದಲು ಬ್ಯಾಲಟ್ ಪೇಪರ್​ಗಳ ಮೂಲಕ ಚುನಾವಣೆ ನಡೆಯುವಂತಾಗಬೇಕು ಎಂದಿದ್ದೆ ಅಂತ ಸಚಿವ ಹೇಳಿದರು.

ಇದನ್ನೂ ಓದಿ:  ಮುಖ್ಯಮಂತ್ರಿ ಕೈ ಮಾಡಲು ಮುಂದಾಗಿರಲಿಲ್ಲ, ಅಧಿಕಾರಿಗೆ ಕೈ ತೋರಿಸಿ ಏನು ಭದ್ರತೆ ಅಂತಷ್ಟೇ ಪ್ರಶ್ನಿಸಿದ್ದು: ಶಿವರಾಜ್ ತಂಗಡಿಗಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ