ಅಮೆರಿಕದ ಜನಪ್ರತಿನಿಧಿಗಳಿಗೆ ‘ದಿ ಬೆಂಗಾಲ್ ಫೈಲ್ಸ್’ ಬಗ್ಗೆ ತಿಳಿಸಿ ಹೇಳಿದ ವಿವೇಕ್ ಅಗ್ನಿಹೋತ್ರಿ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ರೀತಿಯೇ ಈಗ ಅವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮಾಡಿದ್ದಾರೆ. ಆ ಬಗ್ಗೆ ಅವರು ಅಮೆರಿಕಕ್ಕೆ ತೆರಳಿ ಅಲ್ಲಿನ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ.
Updated on: Jul 24, 2025 | 9:22 PM

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಅವರ ಪತ್ನಿ ಪಲ್ಲವಿ ಜೋಶಿ ಅವರು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಅನೇಕ ಸುಳ್ಳು ನಿರೂಪಣೆಗಳನ್ನು ಪ್ರಶ್ನಿಸಲಾಯಿತು. ಆಳವಾಗಿ ಬೇರೂರಿದ್ದ ಅನೇಕ ಗ್ರಹಿಕೆಗಳನ್ನು ಛಿದ್ರಗೊಳಿಸಲಾಯಿತು’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ. ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಅಳಿಸಿಹಾಕಲಾದ, ಸಮಾಧಿ ಮಾಡಲಾದ ಹಾಗೂ ನಿರಾಕರಿಸಿದ ಕಥೆಗಳನ್ನು ಜಗತ್ತಿಗೆ ಹೇಳಲು ಸಿನಿಮಾವನ್ನು ಭಾರತದ ಶಕ್ತಿಯಾಗಿ ಬಳಸಲು ನಾವು ಬದ್ಧರಾಗಿದ್ದೇವೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.

‘ಇದು ಕೇವಲ ಸಿನಿಮಾ ಅಲ್ಲ, ಇದು ಅಳಿಸಿ ಹಾಕಲ್ಪಟ್ಟ ಇತಿಹಾಸ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಆ ಮೂಲಕ ಅವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

‘ಬಂಗಾಳದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಸತ್ಯವನ್ನು ದಶಕಗಳ ಹಿಂದೆಯೇ ಸಮಾಧಿ ಮಾಡಲಾಗಿತ್ತು. ಈಗ ಜಗತ್ತಿನ ಮುಂದೆ ತೆರೆದಿಡಲಾಗಿದೆ’ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.




