ಚಂದ್ರಯಾನ -2ರ ನಂತರ ಆಗಸ್ಟ್ 12ರಂದು ಇಒಎಸ್3 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೊ

EOS-3: ಉಡಾವಣೆಯನ್ನು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಗಸ್ಟ್ 12, 2021 ರಂದು ಭಾರತೀಯ ಕಾಲಮಾನ 0543 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಂದ್ರಯಾನ -2ರ ನಂತರ ಆಗಸ್ಟ್ 12ರಂದು ಇಒಎಸ್3 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೊ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 05, 2021 | 6:20 PM

ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಜಿಎಸ್‌ಎಲ್‌ವಿ ಎಂಕೆ III (GSLV Mk III) ಯಲ್ಲಿ ಭೂಚಲನೆಯ ಗತಿ ಅವಲೋಕಿಸುವ ಉಪಗ್ರಹ ಇಒಎಸ್ -3  (EOS-3) ಅನ್ನು ಆಗಸ್ಟ್ 12 ರಂದು ಬೆಳಿಗ್ಗೆ 5.43 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಉಡಾಯಿಸುವುದಾಗಿ ದೃಢಪಡಿಸಿದೆ. ಈ ಕಾರ್ಯಾಚರಣೆಯೊಂದಿಗೆ ಕೊರೊನವೈರಸ್  (ಕೊವಿಡ್ -19) ಸಾಂಕ್ರಾಮಿಕ ರೋಗದ ಎರಡನೇ ಅಲೆದಿಂದಾಗಿ ನಾಲ್ಕು ತಿಂಗಳ ಅಂತರದ ಬಳಿಕ ಇಸ್ರೊ ದೇಶದ ಬಾಹ್ಯಾಕಾಶ ಚಟುವಟಿಕೆಗಳನ್ನು ಪುನರಾರಂಭಿಸಲಿದೆ. ಉಡಾವಣೆಯನ್ನು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಗಸ್ಟ್ 12, 2021 ರಂದು ಭಾರತೀಯ ಕಾಲಮಾನ 0543 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಚಂದ್ರಯಾನ -2 ಕಾರ್ಯಾಚರಣೆಯ ನಂತರ ಜಿಎಸ್‌ಎಲ್‌ವಿ ಎಂಕೆ III ನ ಎರಡನೇ ಕಾರ್ಯಾಚರಣೆಯ ಹಾರಾಟವಾಗಿದ್ದು, ಉಡಾವಣಾ ವಾಹನವು “ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ” ಬಾಹ್ಯಾಕಾಶ ನೌಕೆಯನ್ನು ಹೆಚ್ಚಿನ ಕಕ್ಷೆಯಲ್ಲಿ ಇರಿಸಿದಾಗ ಮತ್ತು ಮುಂಬರುವ ಕುಶಲತೆಗೆ ಇಂಧನವನ್ನು ಉಳಿಸುತ್ತದೆ ಎಂದು ಇಸ್ರೊ ಹೇಳಿದೆ.

ಬಾಹ್ಯಾಕಾಶವಾಹನದ ಪೇಲೋಡ್ ಫೇರಿಂಗ್, ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ ತುದಿ 4 ಮೀ ಓಜಿವ್ (ಬುಲೆಟ್ ತರಹದ ಆಕಾರ) ಆಗಿರುವುದು ಇದೇ ಮೊದಲು. ಈ ಬದಲಾವಣೆಗಳು ವಾಹನವನ್ನು ಹೆಚ್ಚು ವಾಯುಬಲ ಹೊಂದುವಂತೆ ಮಾಡುತ್ತದೆ ಮತ್ತು ಅದೇ ಪೇಲೋಡ್ ಫೈರಿಂಗ್ ದೇಶದ ಮಾನವ ಅಂತರಿಕ್ಷಯಾನಕ್ಕೆ ಬಳಸುವ ಸಾಧ್ಯತೆ ಇದೆ.

EOS-3 ಉಪಗ್ರಹವನ್ನು ಈ ಹಿಂದೆ GISAT-1 ಎಂದೂ ಕರೆಯಲ್ಪಡುತ್ತಿತ್ತು. ಇದು ಎರಡು ಜೋಡಿಯಾಗಿರುವ ಉಪಗ್ರಹಗಳಲ್ಲಿ ಒಂದಾಗಿದೆ, ಇನ್ನೊಂದು GISAT-2 ಅಥವಾ EOS-5.  ಪ್ರತಿ 30 ನಿಮಿಷಗಳಿಗೊಮ್ಮೆ ಭಾರತೀಯ ಭೂಪ್ರದೇಶದ ಚಿತ್ರವನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ.

ಬಾಹ್ಯಾಕಾಶ ಸಂಸ್ಥೆ ಮುಂದಿನ ಐದು ತಿಂಗಳಲ್ಲಿ ನಾಲ್ಕು ಉಡಾವಣೆಗಳನ್ನು ನಡೆಸಲಿದ್ದು ಇವು ಎಲ್ಲಾ ಭೂಮಿಯ ವೀಕ್ಷಣೆ ಉಪಗ್ರಹಗಳು. ನಾಲ್ಕರಲ್ಲಿ ಒಂದು ಸಣ್ಣ ಉಪಗ್ರಹವನ್ನು ಉಡಾವಣಾ ವಾಹನವು ತನ್ನ ಮೊದಲ ಹಾರಾಟದಲ್ಲಿ ಕೊಂಡೊಯ್ಯುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಗಗನಯಾನ್ ಮಿಷನ್, ಚಂದ್ರಯಾನ -3 ಮಿಷನ್, ಮತ್ತು ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಕಾರ್ಯಾಚರಣೆಗಳು ವಿಳಂಬವಾಗಿವೆ.

ಇದನ್ನೂ ಓದಿ: Chandrayaan 3: 2022ರ ಆಗಸ್ಟ್​ ವೇಳೆಗೆ ಇಸ್ರೋದಿಂದ ಚಂದ್ರಯಾನ-3 ಉಡಾವಣೆ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ

(ISRO to launch the earth observation satellite EOS-3 aboard its GSLV Mk III vehicle on August 12)