AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ನೋವಿನಲ್ಲೂ ಅರ್ಧಶತಕ ಬಾರಿಸಿ ಹಲವು ದಾಖಲೆ ನಿರ್ಮಿಸಿದ ರಿಷಭ್ ಪಂತ್

Rishabh Pant: ಗಂಭೀರ ಗಾಯದ ನಡುವೆಯೂ ಮ್ಯಾಂಚೆಸ್ಟರ್ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಸೆನಾ ದೇಶಗಳಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಆಗಿದ್ದಾರೆ. ಈ ಸಾಧನೆಯ ಮೂಲಕ ಅವರು ಧೋನಿಯನ್ನು ಹಿಂದಿಕ್ಕಿದ್ದಾರೆ.

ಪೃಥ್ವಿಶಂಕರ
|

Updated on: Jul 24, 2025 | 8:14 PM

Share
ಗಂಭೀರ ಗಾಯದ ನಡುವೆಯೂ ಪ್ಯಾಡ್ ಕಟ್ಟಿ ಬ್ಯಾಟಿಂಗ್​ಗೆ ಇಳಿದಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್‌ ಆಡುವುದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊದಲ ದಿನದಾಟದಲ್ಲಿ ಇಂಜುರಿಗೊಂಡು 37 ರನ್​ಗಳಿಗೆ ಆಟ ನಿಲ್ಲಿಸಿದ ಪಂತ್, ಎರಡನೇ ದಿನದಾಟದಲ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

1 / 6
ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಸೆನಾ ದೇಶಗಳಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್‌ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ದಾಖಲೆ ರಿಷಭ್ ಪಂತ್ ಪಾಲಾಗಿದೆ. ಈ ವಿಷಯದಲ್ಲಿ ಪಂತ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಸಹ ಹಿಂದಿಕ್ಕಿದರು.

2 / 6
ಪ್ರಸ್ತುತ ಪಂತ್ ಸೆನಾ ದೇಶಗಳಲ್ಲಿ 14 ಬಾರಿ 50 ಕ್ಕೂ ಹೆಚ್ಚು ರನ್​ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದೀಗ ಎರಡನೇ ಸ್ಥಾನಕ್ಕೆ ಜಾರಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 13 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಜಾನ್ ವೈಟ್ 12 ಬಾರಿ ಈ ಸಾಧನೆ ಮಾಡಿದ್ದಾರೆ. ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿ ಆಡಮ್ ಗಿಲ್‌ಕ್ರಿಸ್ಟ್ (11) ಮತ್ತು ದಿನೇಶ್ ರಾಮ್ದಿನ್ (10) ಇದ್ದಾರೆ.

3 / 6
ಇದರ ಜೊತೆಗೆ, ಪಂತ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್‌ ದಾಖಲಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಈ ವಿಷಯದಲ್ಲಿ ಅವರು ಫಾರೂಕ್ ಇಂಜಿನಿಯರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.

4 / 6
ವಾಸ್ತವವಾಗಿ ಪ್ರಸ್ತುತ ಸರಣಿಯಲ್ಲಿ ಇದು ಪಂತ್ ಅವರ ಐದನೇ 50+ ಸ್ಕೋರ್ ಆಗಿದೆ. ಫಾರೂಕ್ ಇಂಜಿನಿಯರ್ 1972/73 ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಹಾಗೆಯೇ ಧೋನಿ 2008/09 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್‌ ಆಡಿದ್ದರು. ಅಲ್ಲದೆ 2014 ರಲ್ಲಿ ಇಂಗ್ಲೆಂಡ್ ವಿರುದ್ಧವೂ ನಾಲ್ಕು ಬಾರಿ 50+ ಸ್ಕೋರ್ ಮಾಡಿದ್ದಾರೆ.

5 / 6
ಹಾಗೆಯೇ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಪಂತ್ ಇದುವರೆಗೆ 479* ರನ್‌ ಬಾರಿಸಿದ್ದಾರೆ. ಈ ಮೂಲಕ ಪಂತ್, 1998 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 464 ರನ್‌ಗಳನ್ನು ಗಳಿಸಿದ್ದ ಅಲೆಕ್ ಸ್ಟೀವರ್ಟ್ ಅವರನ್ನು ಹಿಂದಿಕ್ಕಿದ್ದಾರೆ.

6 / 6