Ayush Mhatre: ಆಯುಷ್ ಆರ್ಭಟಕ್ಕೆ ಮೆಕಲಂ ದಾಖಲೆ ಧೂಳೀಪಟ
Ayush Mhatre Records: ಭಾರತ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ ಯೂತ್ ಟೆಸ್ಟ್ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಸಹ 24 ವರ್ಷಗಳ ಹಿಂದೆ ನ್ಯೂಝಿಲೆಂಡ್ನ ಬ್ರೆಂಡನ್ ಮೆಕಲಂ ಬರೆದಿದ್ದ ವಿಶ್ವ ದಾಖಲೆಗಳನ್ನು ಅಳಿಸುವ ಮೂಲಕ ಎಂಬುದು ವಿಶೇಷ. ಈ ದಾಖಲೆಗಳೊಂದಿಗೆ ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.
Updated on: Jul 24, 2025 | 11:25 AM

ಇಂಗ್ಲೆಂಡ್ನಲ್ಲಿ ನಡೆದ ಅಂಡರ್-19 ಯೂತ್ ಟೆಸ್ಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಆಯುಷ್ ಮ್ಹಾತ್ರೆ (Ayush Mhatre) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚೆಲ್ಮ್ಸ್ಫೋರ್ಡ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡ್ ಅಂಡರ್-19 ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 80 ರನ್ ಬಾರಿಸಿದ್ದ ಆಯುಷ್ ದ್ವಿತೀಯ ಇನಿಂಗ್ಸ್ನಲ್ಲಿ 126 ರನ್ ಚಚ್ಚಿದರು.

ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಯುಷ್ ಬ್ಯಾಟ್ನಿಂದ 134 ರನ್ಗಳು ಮೂಡಿಬಂದಿತ್ತು. ಈ ಮೂಲಕ 2 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಯಂಗ್ ಬ್ಯಾಟರ್ ಕಲೆಹಾಕಿದ್ದು ಬರೋಬ್ಬರಿ 340 ರನ್ಗಳು. ಅದು ಕೂಡ 103.65 ರ ಸ್ಟ್ರೈಕ್ ರೇಟ್‌ನಲ್ಲಿ. ಇದರೊಂದಿಗೆ ಯೂತ್ ಟೆಸ್ಟ್ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್‌ನಲ್ಲಿ 300+ ರನ್ಗಳಿಸಿ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಮೊದಲು ಈ ಭರ್ಜರಿ ದಾಖಲೆ ನ್ಯೂಝಿಲೆಂಡ್ನ ಬ್ರೆಂಡನ್ ಮೆಕಲಂ ಹೆಸರಿನಲ್ಲಿತ್ತು. 2001 ರಲ್ಲಿ ನಡೆದ ಯೂತ್ ಟೆಸ್ಟ್ನಲ್ಲಿ ಮೆಕಲಂ 3 ಪಂದ್ಯಗಳ ಮೂಲಕ 455 ರನ್ ಕಲೆಹಾಕಿದ್ದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 95.58 ಇತ್ತು. ಇದೀಗ 103.65 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಯೂತ್ ಟೆಸ್ಟ್ನಲ್ಲಿ ಆಯುಷ್ ಮ್ಹಾತ್ರೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Am (1)

ಇದೀಗ 24 ವರ್ಷಗಳ ನಂತರ ಆಯುಷ್ ಮ್ಹಾತ್ರೆ ಈ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಯೂತ್ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 80 ರನ್ ಬಾರಿಸಿದ್ದ ಆಯುಷ್ ದ್ವಿತೀಯ ಇನಿಂಗ್ಸ್ನಲ್ಲಿ 126 ರನ್ ಚಚ್ಚಿದ್ದಾರೆ. ಈ ಮೂಲಕ 170 ಎಸೆತಗಳಲ್ಲಿ 121.17 ಸ್ಟ್ರೈಕ್ ರೇಟ್‌ನಲ್ಲಿ 206 ರನ್ ಗಳಿಸಿ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



