ಕೊರೊನಾ ಸಾಂಕ್ರಾಮಿಕದಿಂದ ಅನಾಥರಾದ ಮಕ್ಕಳಿಗೆ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಸೌಲಭ್ಯ ಘೋಷಿಸಿದ ಕೇಂದ್ರ ಸರ್ಕಾರ

ಕೊರೊನಾ ಸಾಂಕ್ರಾಮಿಕದಿಂದ ಅನಾಥರಾದ ಮಕ್ಕಳಿಗೆ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಸೌಲಭ್ಯ ಘೋಷಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ

ಈ ಉಚಿತ ಆರೋಗ್ಯವಿಮೆಯ ಪ್ರೀಮಿಯಮ್​ನ್ನು ಪ್ರಧಾನಮಂತ್ರಿ ತುರ್ತುಪರಿಸ್ಥಿತಿ ಸಂದರ್ಭದ ನಿಧಿಯ, ನಾಗರಿಕ ನೆರವು ಮತ್ತು ಪರಿಹಾರ (PM-CARES)ದಿಂದ ಪಾವತಿಸಲಾಗುವುದು ಎಂದು ಸಚಿವ ಅನುರಾಗ್​ ಠಾಕೂರ್​ ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Aug 05, 2021 | 11:17 AM

ಕೊರೊನಾ ವೈರಸ್​​ ಸಾಂಕ್ರಾಮಿಕ(Coronavirus)ದಿಂದ ಅನಾಥರಾದ ಮಕ್ಕಳಿಗೆ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ (Health Insurance) ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವ ಅನುರಾಗ್​ ಠಾಕೂರ್ (Anurag Thakur)​ ಘೋಷಿಸಿದ್ದಾರೆ. ಅಂದರೆ ಈ ಬಾರಿ ಕೊವಿಡ್​ 19 ಸಾಂಕ್ರಾಮಿಕದಿಂದ ಅನೇಕ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ. ಜೀವನಕ್ಕೆ ಕಷ್ಟಪಡುವಂತಾಗಿದೆ. ಹೀಗೆ ಅನಾಥರಾದ ಮಕ್ಕಳಿಗೆ ಅನುಕೂಲವಾಗುವಂತೆ ಆರೋಗ್ಯ ವಿಮೆ ನೀಡಲು ಕೇಂದ್ರ ಸರ್ಕಾರ (Central Government) ಮುಂದಾಗಿದ್ದು, ಇದು ಪುಟ್ಟ ಮಗುವಿನಿಂದ ಹಿಡಿದು 18ವರ್ಷದವರೆಗಿನವರಿಗೆ ಅನ್ವಯ ಆಗುತ್ತದೆ ಎಂದು ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಅನುರಾಗ್​ ಠಾಕೂರ್​, ಈ ಉಚಿತ ಆರೋಗ್ಯವಿಮೆಯ ಪ್ರೀಮಿಯಮ್​ನ್ನು ಪ್ರಧಾನಮಂತ್ರಿ ತುರ್ತುಪರಿಸ್ಥಿತಿ ಸಂದರ್ಭದ ನಿಧಿಯ, ನಾಗರಿಕ ನೆರವು ಮತ್ತು ಪರಿಹಾರ (PM-CARES)ದಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ, ಈ ಆರೋಗ್ಯ ವಿಮೆ ಸ್ಕೀಮ್​​ಗೆ ಸಂಬಂಧಪಟ್ಟ ಪೂರ್ತಿ ವಿವರವನ್ನೂ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ವಿವರ ಇರುವ ಸರ್ಕಾರಿ ವೆಬ್​ಸೈಟ್​ನ ಲಿಂಕ್​​ನ್ನೂ ಕೂಡ ಅನುರಾಗ್​ ಠಾಕೂರ್​ ಶೇರ್​ ಮಾಡಿಕೊಂಡಿದ್ದಾರೆ.

ಮಕ್ಕಳಿಗಾಗಿ ಪಿಎಂ-ಕೇರ್ಸ್​ (PM-CARES) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಸಕ್ತವರ್ಷದ ಮೇ ತಿಂಗಳಲ್ಲಿ ಉದ್ಘಾಟನೆ ಮಾಡಿದ್ದಾರೆ. 2020ರ ಮಾರ್ಚ್​ನಲ್ಲಿ ಕೊವಿಡ್​ 19 ಸಾಂಕ್ರಾಮಿಕ ಶುರುವಾದಾಗಿನಿಂದ ಅನೇಕ ಮಕ್ಕಳು ತಮ್ಮ ಪಾಲಕರು, ಪೋಷಕರನ್ನು ಕಳೆದುಕೊಂಡಿದ್ದಾರೆ. ಅಂಥವರನ್ನು ನೋಡಿಕೊಳ್ಳಲೂ ಯಾರೂ ಇಲ್ಲದೆ ಅನಾಥಾಶ್ರಮ ಸೇರುವ ಪರಿಸ್ಥಿತಿಯೂ ಬಂದಿದೆ. ಅಂಥ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲ ಒದಗಿಸಿಕೊಡಲು, ಅವರ ಬದುಕನ್ನು ಭದ್ರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಮೂಲಕ ಒಂದಷ್ಟು ಯೋಜನೆಗಳನ್ನು ಪರಿಚಯಿಸಿದೆ. ಅದರ ಒಂದು ಭಾಗವಾಗಿ ಈಗ ಆರೋಗ್ಯ ವಿಮೆ ಸೌಕರ್ಯ ನೀಡಲೂ ನಿರ್ಧಾರ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada