ಮುಂಬೈ: ಜುಲೈನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 90,000ಕ್ಕೂ ಅಧಿಕ ಪ್ರಯಾಣಿಕರನ್ನು ಹಿಡಿದು ದಂಡ ಹಾಕಿದ ರೈಲ್ವೆ ಇಲಾಖೆ

ಮುಂಬೈ: ಜುಲೈನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 90,000ಕ್ಕೂ ಅಧಿಕ ಪ್ರಯಾಣಿಕರನ್ನು ಹಿಡಿದು ದಂಡ ಹಾಕಿದ ರೈಲ್ವೆ ಇಲಾಖೆ
ಪ್ರಾತಿನಿಧಿನ ಚಿತ್ರ

ನಕಲಿ ಗುರುತಿನ ಚೀಟಿ, ಟಿಕೆಟ್ ವರ್ಗಾವಣೆ ಮತ್ತು ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ.

TV9kannada Web Team

| Edited By: shruti hegde

Aug 05, 2021 | 1:04 PM

ಜುಲೈ ತಿಂಗಳಿನಲ್ಲಿ ಒಟ್ಟು 90,000ಕ್ಕೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಕೈಗೊಂಡಿದ್ದು ಅವರಿಗೆ ದಂಡ ಪಾವತಿಸಲಾಗಿದೆ ಎಂದು ಕೇಂದ್ರ ರೈಲ್ವೆ (CR) ಹೇಳಿದೆ. 90,000 ಕ್ಕೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಕೈಗೊಂಡಿದ್ದಾರೆ. ಅವರಿಂದ ಸಂಗ್ರಹಿಸಿದ ದಂಡದ ಒಟ್ಟೂ ಮೊತ್ತ 3.8 ಕೋಟಿ ರೂಪಾಯಿ. ರೈಲ್ವೆ ಇಲಾಖೆಯ ಪ್ರಕಾರ, ಜೂನ್​ ತಿಂಗಳಿನಿಂದಲೇ ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ. ಕೇಂದ್ರ ರೈಲ್ವೆಯ ಪ್ರಕಾರ 62,000 ಕ್ಕೂ ಹೆಚ್ಚು ಮಂದಿ ದಂಡ ಪಾವತಿಸಿದ್ದು ಒಟ್ಟು 2.6 ಕೋಟಿ ಹಣ ಸಂಗ್ರಹವಾಗಿದೆ.

ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ ಪ್ರಸ್ತುತದಲ್ಲಿ ಅಗತ್ಯ ಸೇವೆ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಪ್ರಯಾಣಿಸುವ ಜನರಿಗೆ ರೈಲ್ವೆ ಸೇವೆಗಳಿವೆ. ನಕಲಿ ಗುರುತಿನ ಚೀಟಿ, ಟಿಕೆಟ್ ವರ್ಗಾವಣೆ ಮತ್ತು ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಸರಿಯಾದ ಮಾನದಂಡದ ಪ್ರಕಾರ ಟಿಕೆಟ್ ಕೊಂಡು ಪ್ರಯಾಣ ಕೈಗೊಳ್ಳುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದೇವೆ ಎಂದು ಕೇಂದ್ರ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ರೈಲ್ವೆ ಪ್ರಕಾರ, ಏಪ್ರಿಲ್​ನಲ್ಲಿ ಕೊವಿಡ್ 19 ಸಾಂಕ್ರಾಮಿಕದಿಂದ ಸಾರ್ವಜನಿಕರಿಗೆ ಸ್ಳಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವರ್ಷದ ಏಪ್ರಿಲ್ ಮತ್ತು ಜುಲೈ ತಿಂಗಳ ನಡುವೆ ಟಿಕೆಟ್ ಇಲ್ಲದೇ ಸಂಚರಿಸಿದ 304,000 ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ಅವರಿಂದ 15.9 ಕೋಟಿ ರೂಪಾಯಿಗಳ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ:

Hubli Crime: ಹುಬ್ಬಳ್ಳಿ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ನಿಗೂಢ ಸಾವು; ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ

Abdul Kalam: ಕಚ್ಚಾ ವಸ್ತುಗಳಿಂದಲೇ ತಯಾರಿಸಿದ ಅಬ್ದುಲ್ ಕಲಾಂ ಮೂರ್ತಿ; ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಅದ್ಭುತ ಪ್ರತಿಮೆ ನಿರ್ಮಾಣ

(More than 90,000 passengers fined because of traveling without ticket in mumbai)

Follow us on

Related Stories

Most Read Stories

Click on your DTH Provider to Add TV9 Kannada