Abdul Kalam: ಕಚ್ಚಾ ವಸ್ತುಗಳಿಂದಲೇ ತಯಾರಿಸಿದ ಅಬ್ದುಲ್ ಕಲಾಂ ಮೂರ್ತಿ; ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಅದ್ಭುತ ಪ್ರತಿಮೆ ನಿರ್ಮಾಣ
ಅಬ್ದುಲ್ ಕಲಾಂ: ಅಬ್ದುಲ್ ಕಲಾಂ ಅವರ ಮೂರ್ತಿಯನ್ನು ನಿರ್ಮಿಸಲು ಸುಮಾರು 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 800 ಕಿಲೋಗ್ರಾಂ ತೂಕ ಹೊಂದಿರುವ ಹಾಗೂ 7.8 ಅಡಿ ಎತ್ತರದ ಮೂರ್ತಿಯನ್ನು ನಿರ್ಮಿಸಲಾಗಿದೆ.
ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ( Abdul Kalam) ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರೈಲ್ವೇ ನಿಲ್ದಾಣದ ಕಚ್ಚಾ ವಸ್ತಗಳನ್ನು ಬಳಸಿ ಅದ್ಭುತ ಮೂರ್ತಿಯನ್ನು ನಿರ್ಮಿಸಲಾಗಿದೆ. ಬೆಂಗಳೂರು ಯಶವಂತಪುರ ರೈಲ್ವೇ ನಿಲ್ದಾಣದಿಂದ ತುಮಕೂರು ಕಡೆಗೆ ಸಂಚಾರ ಕೈಗೊಳ್ಳುವ ಪ್ರಯಾಣಿಕರು ಈ ಪ್ರತಿಮೆಯನ್ನು ನೋಡಬಹುದಾಗಿದೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಮೂರ್ತಿಯನ್ನು ನಿರ್ಮಿಸಲು ಸುಮಾರು 45 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 800 ಕಿಲೋಗ್ರಾಂ ತೂಕ ಹೊಂದಿರುವ ಹಾಗೂ 7.8 ಅಡಿ ಎತ್ತರದ ಮೂರ್ತಿಯನ್ನು ನಿರ್ಮಿಸಲಾಗಿದೆ. ತಂತಿಯ ಎಳೆಗಳು, ನಟ್- ಬೋಲ್ಟ್, ಮೆಟಾಲಿಕ್ ರೋಪ್, ಡ್ಯಾಂಪರ್ ಹೀಗೆ ಕೆಲವು ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಿದ ಅದ್ಭುತ ಪ್ರತಿಮೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ತಲೆ ಎತ್ತಿ ನಿಂತಿದೆ.
ಇಂಜಿನಿಯರ್ ಸಿಪಿ ಶ್ರೀಧರ್ ಮತ್ತು ಶ್ರೀನಿವಾಸ್ ರಾಜು ನೇತೃತ್ವದಲ್ಲಿ ಕಚ್ಚಾ ವಸ್ತುಗಳಿಂದ ಮೂರ್ತಿಯನ್ನು ನಿರ್ಮಿಸಲಾಗಿದೆ. ಕೇವಲ 3,000 ರೂಪಾಯಿಯಲ್ಲಿ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಡಿಪೋ ಅಧಿಕಾರಿ ವಿಕಾಸ್ ಗುರ್ವಾನಿ ಹೇಳಿದ್ದಾರೆ.
ಡಿಪೋ 20 ವರ್ಷ ಹಳೆಯದ್ದು, ಸಂಗ್ರಹವಾಗಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಯನ್ನು ನಿರ್ಮಿಸಿದ್ದೇವೆ. ಕೆಂಪೇಗೌಡ ಹೆರಿಟೇಜ್ ಗಾರ್ಡನ್ನಲ್ಲಿ ಸ್ವಾ ವಿವೇಕಾನಂದರ 3 ಅಡಿ ಮೂರ್ತಿಯನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದು ಎಂಜಿನಿಯರ್ ಸಿಪಿ ಶ್ರೀಧರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ರೀತಿಯ ಕಾರ್ಯಗಳಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಕೆಲಸದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಈ ಮೂರ್ತಿ ಎಲ್ಲರಿಗೂ ಕಾಣುವಂತೆ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಇಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
The most creative tribute to the Missile Man & former President of India, Dr.A.P.J.Abdul Kalam by Yesvantpur Coaching Depot in SWR.
The 7.8 ft high & 800 kg heavy structure is fabricated entirely of scrap materials like Bolts,Nuts,Wire Ropes,Soap Containers & Damper pieces. pic.twitter.com/q0NoGQ2GVY
— Ministry of Railways (@RailMinIndia) July 22, 2021
ಇದನ್ನೂ ಓದಿ:
BS Yediyurappa: ಬಿಎಸ್ ಯಡಿಯೂರಪ್ಪ ತಮ್ಮ ವಿದಾಯವನ್ನು ದಕ್ಕಿಸಿಕೊಂಡ ಬಗೆಯೇ ಅಪೂರ್ವ!
Published On - 9:46 am, Tue, 27 July 21