ಯಡಿಯೂರಪ್ಪಗೆ ಇನ್ನೂ 15 ದಿನ ಸಮಯ ಕೊಡಬೇಕಿತ್ತು: ನೆರೆ ಮಧ್ಯೆ ಸಿಎಂ ಬದಲಿಸಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

TV9 Digital Desk

| Edited By: ganapathi bhat

Updated on:Jul 26, 2021 | 10:30 PM

Siddaramaiah on BS Yediyurappa: ಯಡಿಯೂರಪ್ಪ ರಾಜೀನಾಮೆ ಕೊಟ್ಟಾಯ್ತು, ಕೇರ್ ಟೇಕರ್ ಸಿಎಂ ಆಗಿ ಮುಂದುವರಿದಿದ್ದಾರೆ. ಬೇರೊಬ್ಬ ಮುಖ್ಯಮಂತ್ರಿ ಆಗಬೇಕು, ಈಗ ಮಂತ್ರಿ ಮಂಡಲವೇ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪಗೆ ಇನ್ನೂ 15 ದಿನ ಸಮಯ ಕೊಡಬೇಕಿತ್ತು: ನೆರೆ ಮಧ್ಯೆ ಸಿಎಂ ಬದಲಿಸಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ

ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ದುರ್ದೈವವಾಗಿದೆ. ಇಂತಹ ಸಮಯದಲ್ಲಿ ರಾಜಕೀಯ ಪ್ರಹಸನ ಕರ್ನಾಟಕ ರಾಜ್ಯದ ಜನರ ದುರ್ದೈವ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಮಳೆ, ಪ್ರವಾಹದಿಂದ ಜನ ತತ್ತರಿಸಿಹೋಗಿದ್ದಾರೆ. 15 ದಿನ ಬಿಟ್ಟು ಯಡಿಯೂರಪ್ಪರನ್ನು ತೆಗೆಯಬಹುದಿತ್ತು. ಬಿಜೆಪಿಯವರಿಗೆ ರಾಜ್ಯದ ಜನರ ಹಿತರಕ್ಷಣೆ ಮುಖ್ಯವಲ್ಲ. ಯಡಿಯೂರಪ್ಪರನ್ನು ಹೆದರಿಸಿ ರಾಜೀನಾಮೆ ಕೊಡಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಬೆಳೆ ಹಾನಿ ಬಗ್ಗೆ ಪರಿಶೀಲಿಸಿ ಬಂದಿದ್ದೇನೆ. ಯಾವುದೇ ಗ್ರಾಮಗಳಿಗೆ ನೀರು ನುಗ್ಗಿಲ್ಲ, ಜಮೀನಿಗೆ ನೀರು ನುಗ್ಗಿದೆ ಎಂದು ನೆರೆ ಪರಿಸ್ಥಿತಿಯ ಬಗ್ಗೆ ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ. ಡಿಸಿ, ತಹಶೀಲ್ದಾರ್​ಗೆ ಸೂಚಿಸಿದ್ದೇನೆ. ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ನಾಳೆ ತೆರಳುತ್ತೇನೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್​ 1ರಂದು ಕಾರವಾರಕ್ಕೆ ಭೇಟಿ ನೀಡಿ ಪರಿಶೀಲಿಸುವೆ. 2019ರ ನೆರೆ ಪರಿಹಾರವನ್ನೇ ಇನ್ನೂ ಸರಿಯಾಗಿ ಕೊಟ್ಟಿಲ್ಲ. 2019ರ ಪರಿಹಾರ, ಈಗಿನ ಪರಿಹಾರ ಎರಡೂ ಕೊಡಬೇಕು. ಕೇಂದ್ರ ಸರ್ಕಾರ ಕೂಡ ತಕ್ಷಣ ಪರಿಹಾರ ಘೋಷಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳದಲ್ಲಿದ್ದು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನೆರೆ ಬಂದಿಲ್ಲ ಎಂಬುದು ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆ. ಪ್ರವಾಹ ಬಂದಿಲ್ಲ ಅಂದ್ಮೇಲೆ ನಿನ್ನೆ ಸಿಎಂ ಯಾಕೆ ಬಂದಿದ್ದರು. ಉಸ್ತುವಾರಿ ಸಚಿವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ನೆರೆ ಸಂತ್ರಸ್ತರ ಅಳಲು ಕೇಳದೆ ಯಡಿಯೂರಪ್ಪ ಹೋಗಿದ್ದಾರೆ. ಬಿಎಸ್​ವೈ ಕಾಟಾಚಾರಕ್ಕೆ ಬಂದು ನೆರೆ ವೀಕ್ಷಣೆಗೆ ಬಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಕೊಟ್ಟಾಯ್ತು, ಕೇರ್ ಟೇಕರ್ ಸಿಎಂ ಆಗಿ ಮುಂದುವರಿದಿದ್ದಾರೆ. ಬೇರೊಬ್ಬ ಮುಖ್ಯಮಂತ್ರಿ ಆಗಬೇಕು, ಈಗ ಮಂತ್ರಿ ಮಂಡಲವೇ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಾದಾಮಿಯಲ್ಲಿ ಬೆಳೆ ಹಾನಿ ನೋಡಿಕೊಂಡು ಬಂದೆ. ನಾಳೆ ಖಾನಾಪುರ, ಬೆಳಗಾವಿ ಗ್ರಾಮೀಣ, ಯಮಕನಮರಡಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಬೆಳಗಾವಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಶಾಸಕರಾದ ಗಣೇಶ್ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತ ಕೋರಿದ್ದಾರೆ. ಇಂದು ರಾತ್ರಿ ಬೆಳಗಾವಿಯಲ್ಲೇ ತಂಗಲಿರುವ ಸಿದ್ದರಾಮಯ್ಯ, ನಾಳೆ ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ, ನಾಳೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.

ರಾಜ್ಯದ ಜನರ ಹಿತ ಕಾಪಾಡಲು ಈ ಸರ್ಕಾರ ಬಂದಿರಲಿಲ್ಲ ಬಿಜೆಪಿಯವರು ಬಿಎಸ್​ವೈ ನಡೆಸಿಕೊಂಡ ರೀತಿ ಸರಿಯಿಲ್ಲ. ಯಡಿಯೂರಪ್ಪ ಕಣ್ಣೀರಿಡುತ್ತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತಹ ಪರಿಸ್ಥಿತಿಗೆ ವರಿಷ್ಠರು ನೂಕಿದ್ರಲ್ಲ ಅನ್ನುವ ನೋವಿದೆ. ನೆರೆ ವೇಳೆ ಒಬ್ಬನೇ ಹುಚ್ಚನಂತೆ ಓಡಾಡಿದೆ ಎಂದು ಹೇಳಿದ್ರು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ತಕ್ಕ ಪಾಠ ಕಲಿಸುತ್ತಾರೆ. ನೆರೆ ಸಂದರ್ಭದಲ್ಲಿ ಸಿಎಂ ಬಿಎಸ್​ವೈ ಬದಲಾವಣೆ ಸರಿಯಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ರಾಜ್ಯದ ಜನರ ಹಿತ ಕಾಪಾಡಲು ಈ ಸರ್ಕಾರ ಬಂದಿರಲಿಲ್ಲ. ತಮ್ಮ ಸ್ವಇಚ್ಛೆ ಪೂರೈಸಿಕೊಳ್ಳಲು ಬಂದಿರುವ ಬಿಜೆಪಿ ಸರ್ಕಾರ ಇದಾಗಿದೆ. ಜನಾದೇಶದ ವಿರುದ್ಧ ಬಂದ ಸರ್ಕಾರ, ಜನಪರ ಕಾಳಜಿಯಿಲ್ಲ. 2019ರಲ್ಲಿ ನೆರೆ ಬಂದಾಗ ಕೇಂದ್ರ ಸರ್ಕಾರ ಪರಿಹಾರ ನೀಡಲಿಲ್ಲ. ಪ್ರಸ್ತುತ ಸ್ಥಿತಿಯಲ್ಲಿ ಸಿಎಂ ಬದಲಾವಣೆಯೇ ಮುಖ್ಯವಾಗಿದೆ. ಬಿಜೆಪಿಯವರಿಗೆ ರಾಜ್ಯ ಹಿತ ಕಾಪಾಡುವುದು ಮುಖ್ಯವಾಗಿಲ್ಲ ಎಂದು ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮನಸ್ಸು ಮಾಡಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ಬರಲಿ ಎಂದು ಕಾಯ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನರ ನಿರ್ಧರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಗೆ ನಿನ್ನೆ ಬಂದಿದ್ದ ಬಿಎಸ್​ವೈ ನೆರೆ ವೀಕ್ಷಿಸಿದ್ದಾರೆ. ಈ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ತುರ್ತಾಗಿ 200 ಕೋಟಿ ಬಿಡುಗಡೆ ಮಾಡುವಂತೆ ಕೇಳಿದ್ದರು. ಆದರೆ ಈವರೆಗೆ ಅದರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ರಾಜ್ಯದಲ್ಲಿ ಇನ್ನೂ 3 ದಿನಗಳು ಮುಖ್ಯಮಂತ್ರಿ ಇರುವುದಿಲ್ಲ. ಮುಂದೆ ಏನು ಮಾಡುತ್ತಾರೆಂದು ಕಾದುನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಕರ್ನಾಟಕ ಕಂಡ ಭ್ರಷ್ಟ ಮುಖ್ಯಮಂತ್ರಿ; ವಿಪಕ್ಷ ನಾಯಕ ಸಿದ್ದರಾಮಯ್ಯ

ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹೇಳಿಕೆ ವಿಚಾರ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ ಪ್ರಸಾದ್ ಲೆಫ್ಟ್​​-ರೈಟ್​

(Congress Leader Siddaramaiah on Karnataka CM Change BS Yediyurappa Resign amid Heavy Rainfall Floods)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada