AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BS Yediyurappa: ಬಿಎಸ್ ಯಡಿಯೂರಪ್ಪ ತಮ್ಮ ವಿದಾಯವನ್ನು ದಕ್ಕಿಸಿಕೊಂಡ ಬಗೆಯೇ ಅಪೂರ್ವ!

BS Yediyurappa Resigns: ತಾನು ಮುಖ್ಯಮಂತ್ರಿ ಆಗಿರುವಾಗಲೇ, ತಾನೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಾ (ಅಥವಾ ಹಾಗೆ ಹೇಳುತ್ತಾ), ತನ್ನದೇ ಪಕ್ಷ ಆಡಳಿತದಲ್ಲಿ ಇರುತ್ತಾ, ಸೋಲದೇ ಗೆದ್ದು ವಿರಮಿಸುತ್ತಿರುವುದು ಯಡಿಯೂರಪ್ಪಗೆ ಸಿಕ್ಕ ಸುಂದರ ವಿದಾಯ.

BS Yediyurappa: ಬಿಎಸ್ ಯಡಿಯೂರಪ್ಪ ತಮ್ಮ ವಿದಾಯವನ್ನು ದಕ್ಕಿಸಿಕೊಂಡ ಬಗೆಯೇ ಅಪೂರ್ವ!
ಬಿ.ಎಸ್. ಯಡಿಯೂರಪ್ಪ
ganapathi bhat
|

Updated on:Jul 27, 2021 | 9:21 AM

Share

ವಿದಾಯ ಎಂಬುದು ಯಾವತ್ತೂ ನೋವೇ. ಎರಡು ವರ್ಷದ ಕಾಲೇಜಿನ ವಿದಾಯವೂ ಭಾವಪೂರ್ಣವೇ. ಅಂಥಾದ್ದರಲ್ಲಿ ಸುಮಾರು 4 ದಶಕಗಳ ರಾಜಕಾರಣ ಕಂಡು, 4 ಬಾರಿ ಮುಖ್ಯಮಂತ್ರಿಯಾಗಿ ಇದೀಗ ರಾಜಕೀಯ ಜೀವನದಿಂದಲೇ ಬಹುತೇಕ ನಿವೃತ್ತಿಯಾದೆನೋ ಅನ್ನುವಾಗ ಅಳು ಬರದೇ ಇರುತ್ತದೆಯೇ? ಇದೊಂದು ರಾಜಕೀಯ ಜೀವನದ, ರಾಜಕೀಯ ಯುಗದ, ಕರ್ನಾಟಕ ಅಥವಾ ದಕ್ಷಿಣದ ಬಿಜೆಪಿ ಕಂಡ ಯಶಸ್ವಿ ನಾಯಕನ ವಿದಾಯ. ವಯಸ್ಸೂ ಆಗಿದೆ. ಸಾರ್ವಜನಿಕ, ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಅದೇ ಕಾರಣಕ್ಕೆ ಬಹುತೇಕ ಎಲ್ಲರೂ ಯಡಿಯೂರಪ್ಪಗೆ ಭಾವಪೂರ್ಣ ವಿದಾಯ ಹೇಳಿದ್ದಾರೆ.

ತಾನು ಮುಖ್ಯಮಂತ್ರಿ ಆಗಿರುವಾಗಲೇ, ತಾನೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಾ (ಅಥವಾ ಹಾಗೆ ಹೇಳುತ್ತಾ), ತನ್ನದೇ ಪಕ್ಷ ಆಡಳಿತದಲ್ಲಿ ಇರುತ್ತಾ, ಸೋಲದೇ ಗೆದ್ದು ವಿರಮಿಸುತ್ತಿರುವುದು ಯಡಿಯೂರಪ್ಪಗೆ ಸಿಕ್ಕ ಸುಂದರ ವಿದಾಯ.

ವಿವಿಧ ರಾಜಕಾರಣಿಗಳು, ಇತರೆ ಪಕ್ಷದವರು, ಬಿಜೆಪಿ ನಾಯಕರು, ಬಿಜೆಪಿ ಹೈಕಮಾಂಡ್, ಪಕ್ಷದ ಕಾರ್ಯಕರ್ತರು ಅಷ್ಟೇ ಏಕೆ ಬಹುತೇಕ ಜನಸಾಮಾನ್ಯರೂ ಈ ವಿದಾಯವನ್ನು ಭಾವಪೂರ್ಣವಾಗಿ ಅನುಭವಿಸಿದ್ದಾರೆ. ಯಡಿಯೂರಪ್ಪಗೆ ಶುಭಾಶಯ ಕೋರಿದ್ದಾರೆ. ರಾಜಕೀಯ ರಂಗದಲ್ಲಿ ಇದೊಂದು ಅಪೂರ್ವ ವಿದಾಯ. ಈ ಸನ್ನಿವೇಶವನ್ನು ಯಡಿಯೂರಪ್ಪ ದಕ್ಕಿಸಿಕೊಂಡ ಬಗೆಯೇ ವಿಶೇಷ.

ಗೆಲುವಿನ ಹಾದಿಯಲ್ಲಿ ವಿದಾಯವೆಂಬ ವಿರಾಮ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲು ಬಿ.ಎಸ್. ಯಡಿಯೂರಪ್ಪ ಕಾರಣ. ಅದು ಮೊದಲ ಬಾರಿಗೆ ಪಕ್ಷವನ್ನು ಆಡಳಿತಕ್ಕೆ ತಂದದ್ದರಿಂದ ಹಿಡಿದು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲೂ ಯಡಿಯೂರಪ್ಪ ಮುಖ್ಯ ಕಾರಣೀಕರ್ತರು. ಇದು ತನ್ನ ಕೊನೆಯ ಚುನಾವಣೆ, ಈ ಅವಧಿಗೆ ನಾನು ಮುಖ್ಯಮಂತ್ರಿ ಆದರೆ ಸರಿ. ಇಲ್ಲ ಎಂದರೆ ರಾಜಕೀಯ ಜೀವನ ಮುಗೀತು ಎಂಬ ಲೆಕ್ಕಾಚಾರವನ್ನು ಯಡಿಯೂರಪ್ಪ ಹಾಕಿರದೇ ಹೋದರೂ, ಈ ಯೋಚನೆ ಇಂದಿಗೆ ಪ್ರಸ್ತುತ.

ತಾನೇ ಮುಖ್ಯನಾಗಿ ಕಟ್ಟಿದ ಕರ್ನಾಟಕ ಬಿಜೆಪಿ ಹಾಗೂ ಈ ಸರ್ಕಾರದ ಯಶಸ್ವಿ 2ನೇ ವರ್ಷದ ನಡುವೆ ವಿದಾಯವನ್ನು ಕೇವಲ ವಿರಾಮ ಎಂಬಂತೆ ಯಡಿಯೂರಪ್ಪ ನೋಡಿರುವುದು ವಿಶೇಷ. ಅಂದರೆ, ಮುಂದೆ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುತ್ತೇನೆ ಎಂಬಂತೆ ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಅದು ಅವರ ಹಿರಿತನವಾಗಿ ಕಂಡಿದೆ. ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಯಡಿಯೂರಪ್ಪ ಕರ್ನಾಟಕದ ಪಾಲಿಗೆ ಹಿರಿಯ ಬಿಜೆಪಿ ನಾಯಕರಾಗಿ ಸದ್ಯ ಪ್ರಸ್ತುತವೇ ಆಗಿರುತ್ತಾರೆ. ಇಳಿವಯಸ್ಸಿನಲ್ಲೂ ತನ್ನನ್ನು ತಾನು ಪ್ರಸ್ತುತವಾಗಿರುವಂತೆ ಯಡಿಯೂರಪ್ಪ ಸರ್ವತಃ ಸಾಧಿಸಿದ್ದಾರೆ.

ರಾಜಕೀಯ ಜೀವನದ ಅಂತ್ಯವೇ ಇದು?! ಬಿ.ಎಸ್. ಯಡಿಯೂರಪ್ಪ ಇದನ್ನು ರಾಜಕೀಯ ಜೀವನದ ವಿದಾಯ ಎಂದು ಉಲ್ಲೇಖಿಸಿಲ್ಲ. ಆದರೆ, ಬಹುತೇಕ ಜನರು ಅದೇ ಅಭಿಪ್ರಾಯವನ್ನು ಹೊಂದಿದ್ದಾರೆ. ವಯಸ್ಸೂ ಅದನ್ನು ಸಾರಿ ಹೇಳುತ್ತಿದೆ. ಹೀಗೆ ಪರಿಗಣಿಸಿದರೆ, ಯಡಿಯೂರಪ್ಪಗೆ ಸಿಕ್ಕ ರಾಜಕಾರಣದ ವಿದಾಯವೂ ಅಭೂತಪೂರ್ವವೇ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಲೇ, ಆಡಳಿತವನ್ನು ಎರಡು ವರ್ಷ ಭರ್ತಿಗೊಳಿಸಿದ ಸಂಭ್ರಮದ ಸಂದರ್ಭದಲ್ಲಿ, ಸ್ವ ಇಚ್ಛೆಯಿಂದ, ಸಂಭ್ರಮದಿಂದ, ಸಂತೋಷದಿಂದ, ತೃಪ್ತಿಯಿಂದ ಎಂದು ಪುನರುಚ್ಚರಿಸುತ್ತಾ ರಾಜೀನಾಮೆ ನೀಡಿದ್ದಾರೆ. ಸಿಡುಕು, ಆಕ್ರೋಶ ಅವರ ಬಳಿ ಸುಳಿಯಲಿಲ್ಲ. ಕೆಜೆಪಿ, ಬಂಡಾಯ, ಶಕ್ತಿ ಪ್ರದರ್ಶನ ಯಾವುದೂ ಇಲ್ಲ. ಈ ಸುಂದರ ಸನ್ನಿವೇಶವನ್ನು ತನ್ನ ಸುತ್ತಲೂ ಸೃಷ್ಟಿಮಾಡಿಕೊಂಡಿದ್ದಕ್ಕೆ, ಸಿಕ್ಕಿದ ವಿದಾಯವನ್ನು ದಕ್ಕಿಸಿಕೊಳ್ಳುವುದು ಎನ್ನದೆ ಮತ್ತೇನು ಹೇಳೋಣ?

ಈ ದಿನಕ್ಕೆ ತಯಾರಿ ಎಂದಿನದು? ಬಿಎಸ್ ಯಡಿಯೂರಪ್ಪ ನೀಡಿದ ಕಳೆದ ಕೆಲವು ದಿನಗಳ ಹೇಳಿಕೆಗಳು, ನಡೆದುಕೊಂಡ ರೀತಿಯಲ್ಲಿ ಬಹಳ ಮಮಕಾರ ತುಂಬಿತ್ತು. ಮುಖ್ಯಮಂತ್ರಿ ಆಗಿರುವ ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತೇನೆ ಎಂದು. ಪಕ್ಷ ಮಾತೃ ಸಮಾನ ಎಂದು. ಸೇವೆ ಮಾಡುತ್ತೇನೆ, ಕೆಲಸ ಮಾಡುತ್ತೇನೆ ಎಂದು. ಸ್ವಾಮೀಜಿಗಳ, ಮಠಾಧೀಶರ, ಬೆಂಬಲಿಗರ ಸಾಲು ಸಾಲು ಹೇಳಿಕೆಗಳನ್ನು ಕಳೆದು ಕೊನೆಯದಾಗಿ ಯಾರೂ ಪ್ರತಿಭಟಿಸಬೇಡಿ, ಸಹಕರಿಸಿ ಎಂದು ಮಾಡಿದ ಟ್ವೀಟ್ ಸಹಿತ ಎಲ್ಲವೂ ಎಷ್ಟು ಕಳಕಳಿಯನ್ನು ತೋರಿಸುತ್ತಿತ್ತು. ಪರ ವಿರೋಧಗಳನ್ನು ಸಂಭಾಳಿಸಿಕೊಂಡು ಬಂದ ರೀತಿ, ಉದಾರಿ ಮನಸ್ಥಿತಿ ಇಂತಹದೊಂದು ವಿದಾಯಕ್ಕೆ ವೇದಿಕೆ ಒದಗಿಸಿಕೊಟ್ಟಿತು.

ಯಡಿಯೂರಪ್ಪ ರಾಜೀನಾಮೆ ಸಿದ್ಧತೆ ಮೊದಲೇ ಮಾಡಿಕೊಂಡಿದ್ದಂತೆ ಅನಿಸಲು ಈ ಬಾರಿಯ ಬಜೆಟ್​ನ್ನು ಕೂಡ ಹೇಳಬಹುದು. ಬಹುತೇಕರು ಈ ಬಾರಿಯ ಬಜೆಟ್ ಕಂಡು ಆಶ್ಚರ್ಯಪಟ್ಟಿದ್ದರು. ಸರ್ಕಾರದ ಕೊನೆಯ ವರ್ಷದ ಬಜೆಟ್​ನಂತಿದೆ. ಬಹಳ ಉದಾರಿ ಬಜೆಟ್ ಇತ್ಯಾದಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದರು. ಯಡಿಯೂರಪ್ಪ ತಮ್ಮ ಕೊನೆಯ ಬಜೆಟ್ ಎಂಬ ನೆಲೆಯಲ್ಲಿ ಈ ಉದಾರ ಮನೋಭಾವ ತೋರ್ಪಡಿಸಿದರೋ? ಇರಬಹುದು ಅಥವಾ ಗೊತ್ತಿಲ್ಲ. ಪ್ರತಿಭಟನೆ, ಬೆಂಬಲ, ಅನುಕಂಪ, ಗೌರವ, ಶುಭಹಾರೈಕೆ, ಬೇಸರ, ಖುಷಿ, ವಿರೋಧ ಎಲ್ಲವೂ ಸಮ್ಮಿಳಿತವಾದ ದಿನ. ಪ್ರಜ್ಞಾಪೂರ್ವಕವಾಗಿ ಅಥವಾ ಅಲ್ಲದೆ ವಿದಾಯಕ್ಕೆ ಯಡಿಯೂರಪ್ಪ ಇಷ್ಟೊಂದು ಸಿದ್ಧತೆ ಮಾಡಿದ್ದರು. ಸಿಕ್ಕಿದ್ದನ್ನು ದಕ್ಕಿಸಿಕೊಂಡದ್ದಂತೂ ಯಡಿಯೂರಪ್ಪರ ಜಾಣ್ಮೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಲವಂತವಾಗಿಯಾದರೂ ನೀವು ಈಗಲೇ ಒಪ್ಪಿಕೊಂಡಿದ್ದು ಒಳ್ಳೇದಾಯ್ತು. ಯಾಕೆಂದರೆ ಇಂತಹ ವಿದಾಯ ಸನ್ನಿವೇಶ ನಿಮಗೆ ಮುಂದೆ ಸಿಗುತ್ತಿರಲಿಲ್ಲ. ಅಥವಾ ಮತ್ತೊಬ್ಬ ರಾಜಕಾರಣಿಗೆ ಬೇಕು ಎಂದರೂ ಇಂತಹ ವಿದಾಯ ಸಿಗದು.

– ಗಣಪತಿ ದಿವಾಣ

ಇದನ್ನೂ ಓದಿ: BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ

B.S.Yediyurappa: ಬಿಎಸ್​ವೈ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೂ ಹೊಸ ಪಕ್ಷ ಕಟ್ಟುವ ಯೋಚನೆ ಮಾಡಲ್ಲ-ಏಕೆ?

(Karnataka Politics Analysis on BS Yediyurappa Resignation BJP Government)

Published On - 8:49 am, Tue, 27 July 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ