ಹೆಚ್ಡಿ ಕುಮಾರಸ್ವಾಮಿ ಹೆಸರು ಬಳಸಿ ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ವಂಚನೆ ಮಾಡ್ತಿದ್ದ ಆರೋಪಿ ಅರೆಸ್ಟ್
ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆಂಜನೇಯ ದೇಗುಲದ ಅರ್ಚಕ ಮಂಜುನಾಥ್, ತನಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೊತ್ತು. ಅಧಿಕಾರಿಗಳು ಗೊತ್ತು ಎಂದು ಹೇಳಿ ವಂಚನೆ ಮಾಡಿದ್ದ. ಈ ಬಗ್ಗೆ ತನಿಖೆ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸುಬ್ರಮಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ವಂಚನೆ ಮಾಡಿದ್ದ ವಂಚಕ ಮಂಜುನಾಥ್ ಅಲಿಯಾಸ್ ಮಹಾಬಲನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮಂಜುನಾಥ್‌ಗೆ ಸಹಾಯ ಮಾಡಿದ್ದ ಪೋಷಕರನ್ನೂ ಸಹ ಬಂಧಿಸಲಾಗಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆಂಜನೇಯ ದೇಗುಲದ ಅರ್ಚಕ ಮಂಜುನಾಥ್, ತನಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೊತ್ತು. ಅಧಿಕಾರಿಗಳು ಗೊತ್ತು ಎಂದು ಹೇಳಿ ವಂಚನೆ ಮಾಡಿದ್ದ. ಈ ಬಗ್ಗೆ ತನಿಖೆ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸುಬ್ರಮಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಂಚಕ ಮಂಜುನಾಥ್ ಅಲಿಯಾಸ್ ಮಹಾಬಲ, ಆತನ ತಂದೆ ಹಾಗೂ ತಾಯಿಯನ್ನು ಬಂಧಿಸಲಾಗಿದೆ.
ಪ್ರಭಾವಿಗಳ ಜೊತೆ ತೆಗೆಸಿಕೊಂಡ ಫೋಟೊ ತೋರಿಸಿ ಬಿಲ್ಡ್ ಅಪ್ ಮಾಡಿ ಸರ್ಕಾರದ ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿಕೊಡುವುದಾಗಿ ಸುಳ್ಳು ಹೇಳಿ ಮೋಸ ಮಾಡಲಾಗುತ್ತಿತ್ತು. ಸಿಎಂ ಗೊತ್ತು, ಕುಮಾರಣ್ಣ ಗೊತ್ತು, ಐಪಿಎಸ್ ಅಲೋಕ್ ಕುಮಾರ್, ರವಿ ಚನ್ನಣ್ಣನವರ್ ಗೊತ್ತು ಅಂತ ಪುಂಗಿ ಊದಿ ಯಾಮಾರಿಸಿ ಏರಿಯಾ ಜನರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ. ಆರೋಪಿ ಹೆಚ್ಡಿ ಕುಮಾರಸ್ವಾಮಿ ಹೆಸರನ್ನು ಬಳಸಿ ಹೆಚ್ಚಾಗಿ ವಂಚನೆ ಮಾಡಿದ್ದ ಕಾರಣ ವಂಚನೆಗೊಳಗಾದವರು ಹೆಚ್ಡಿಕೆ ಬಳಿ ದೂರು ನೀಡಿದ್ದರು. ಹೀಗಾಗಿ ಕುಮಾರಸ್ವಾಮಿ ಈ ಬಗ್ಗೆ ತನಿಖೆ ನಡೆಸಲು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆಗೆ ಸೂಚಿಸಿದ್ದು ಆರೋಪಿ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ‘ಜಯಂತಿ ಅಮ್ಮ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯಲ್ಲ’; ನಟಿ ಪದ್ಮಜಾ ರಾವ್
ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್