AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ 10 ಕೋಟಿ, ‘ಅವೇಂಜರ್ಸ್: ಡೂಮ್ಸ್​​ಡೇ’ಗೆ ಭರ್ಜರಿ ಪ್ರತಿಕ್ರಿಯೆ

Avengers Doomsday: ನಿನ್ನೆಯಷ್ಟೆ (ನವೆಂಬರ್ 17) ಭಾರತದಲ್ಲಿ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಭಾರತದಲ್ಲಿ ಸಿನಿಮಾಕ್ಕೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೇ ಕೇವಲ ಅಡ್ವಾನ್ಸ್ ಬುಕಿಂಗ್ ಇಂದ ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾ 10 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದರಲ್ಲೂ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ತಿಂಗಳು ಸಮಯವಿರುವಾಗಲೇ ಕೇವಲ ಅಡ್ವಾನ್ಸ್ ಬುಕಿಂಗ್​​ನಿಂದ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ.

ಒಂದೇ ದಿನದಲ್ಲಿ 10 ಕೋಟಿ, ‘ಅವೇಂಜರ್ಸ್: ಡೂಮ್ಸ್​​ಡೇ’ಗೆ ಭರ್ಜರಿ ಪ್ರತಿಕ್ರಿಯೆ
Avengers Doomsday
ಮಂಜುನಾಥ ಸಿ.
|

Updated on: Nov 18, 2026 | 3:33 PM

Share

‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳು ಸಮಯವಿದೆ. ನಿನ್ನೆಯಷ್ಟೆ (ನವೆಂಬರ್ 17) ಭಾರತದಲ್ಲಿ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಭಾರತದಲ್ಲಿ ಸಿನಿಮಾಕ್ಕೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೇ ಕೇವಲ ಅಡ್ವಾನ್ಸ್ ಬುಕಿಂಗ್ ಇಂದ ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾ 10 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದರಲ್ಲೂ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ತಿಂಗಳು ಸಮಯವಿರುವಾಗಲೇ ಕೇವಲ ಅಡ್ವಾನ್ಸ್ ಬುಕಿಂಗ್​​ನಿಂದ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ.

ಭಾರತದಲ್ಲಿ ಮಂಗಳವಾರ ಮಧ್ಯರಾತ್ರಿ ‘ಅವೆಂಜರ್ಸ್: ಡೂಮ್ಸ್‌ಡೇ’ ಟಿಕೆಟ್ ಬುಕಿಂಗ್ ಅನ್ನು ಓಪನ್ ಆಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ‘ಓಪನ್ ಅಡ್ವಾನ್ಸ್ ಬುಕಿಂಗ್’ ಟ್ರೆಂಡ್ ಆಯ್ತು. ದೇಶದ ಹಲವು ಭಾಗಗಳಲ್ಲಿ ಚಿತ್ರಕ್ಕೆ ದಿನದ 24 ಗಂಟೆಯೂ ಶೋಗಳನ್ನು ಆಯೋಜಿಸಲಾಗಿದೆ. ಹಾಗಿದ್ದರೂ ಸಹ ಮೊದಲ ದಿನದ ಶೋಗಳ ಟಿಕೆಟ್‌ಗಳು ಖಾಲಿ ಆಗುತ್ತಿವೆ. ಸಿನಿಮಾ ಬಿಡುಗಡೆ ಆಗಲಿರುವ ಡಿಸೆಂಬರ್ 17 ರ ಹಲವು ಮಧ್ಯರಾತ್ರಿ ಶೋಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಮುಂಗಡ ಮಾರಾಟ ಆರಂಭವಾದ ಕೆಲವೇ ಗಂಟೆಗಳಲ್ಲಿ ಮುಂಬೈ ಮತ್ತು ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ 2500-3000 ರೂ. ಬೆಲೆಯ 4DX ಟಿಕೆಟ್‌ಗಳು ಖಾಲಿಯಾಗಿವೆ. ಮಂಗಳವಾರ ಮುಗಿಯುವಷ್ಟರಲ್ಲಿ ದಿನ 1 ರ ಮುಂಗಡ ಬುಕಿಂಗ್ ಒಟ್ಟು 10 ಕೋಟಿ ರೂ. ದಾಟಿದೆ. ಬುಧವಾರ ಬೆಳಗಿನ ವೇಳೆಗೆ, ಎಲ್ಲಾ ದಿನಗಳ ಮುಂಗಡ ಬುಕಿಂಗ್ 15 ಕೋಟಿ ರೂ.ಗಳನ್ನು ದಾಟಿದೆ.

‘ಅವೇಂಜರ್ಸ್: ಡೂಮ್ಸ್​​ಡೇ’ ವಿಶ್ವದ ಅತ್ಯಂತ ನಿರೀಕ್ಷಿತ ಸಿನಿಮಾ ಆಗಿದೆ. ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಮುಂತಾದ ಇತರ ದೊಡ್ಡ ಚಿತ್ರಗಳಿಗೆ ಇದ್ದ ನಿರೀಕ್ಷೆಯನ್ನು ಸಹ ಈ ಸಿನಿಮಾ ಹಿಂದಿಕ್ಕಿದೆ. ‘ಸ್ಪೈಡರ್ ಮ್ಯಾನ್’ ಬ್ರ್ಯಾಂಡ್ ನ್ಯೂ ಡೇ ಮತ್ತು ಮೊದಲ 24 ಗಂಟೆಗಳಲ್ಲಿ 8 ಕೋಟಿ ರೂ.ಗಳ ಮುಂಗಡ ಬುಕಿಂಗ್ ಮಾಡಿದ ‘ಅವೆಂಜರ್ಸ್: ಎಂಡ್‌ಗೇಮ್’ ಅನ್ನು ಸಹ ಈಗಾಗಲೇ ‘ಡೂಮ್ಸ್​​ಡೇ’ ಸಿನಿಮಾ ಮೀರಿಸಿದೆ. ಆದಾಗ್ಯೂ, ಇತರ ಎಲ್ಲಾ ಮಾರ್ವೆಲ್ ಚಿತ್ರಗಳ ಮುಂಗಡ ಮಾರಾಟವು ಬಿಡುಗಡೆಗೆ ಒಂದು ಅಥವಾ ಎರಡು ವಾರಗಳ ಮೊದಲು ತೆರೆಯಲ್ಪಟ್ಟಿತ್ತು. ಡೂಮ್ಸ್‌ಡೇಗೆ ಒಂದು ತಿಂಗಳ ಮುಂಚೆಯೇ ಮುಂಗಡ ಬುಕಿಂಗ್ ಓಪನ್ ಮಾಡಲಾಗಿದೆ. ಒಂದು ತಿಂಗಳು ಸಮಯವಿದ್ದರೂ ಸಹ ಜನ ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.‘

ಇದನ್ನೂ ಓದಿ:ಸುಂದರ ಫೋಟೋಗಳಿಂದಲೇ ದೇವಿಕಾ ಭಟ್​​ಗೆ ಸಿಕ್ತು ಸಿನಿಮಾ ಆಫರ್

ಅವೆಂಜರ್ಸ್ ಡೂಮ್ಸ್‌ಡೇ ಶೋಗಳು ಡಿಸೆಂಬರ್ 16ರ ಮಧ್ಯರಾತ್ರಿ ರಾತ್ರಿ 12:01 ರಿಂದ ಡಿಸೆಂಬರ್ 17ರ ರಾತ್ರಿ 11:55 ರವರೆಗೆ ಲಭ್ಯವಿವೆ. ದಿನವಿಡೀ ಸ್ಕ್ರೀನಿಂಗ್‌ಗಳನ್ನು ನಿಗದಿಪಡಿಸಲಾಗಿದೆ. ಬುಕ್‌ಮೈಶೋ ಡೇಟಾ ಪ್ರಕಾರ, ಮುಂಗಡ ಬುಕಿಂಗ್‌ನ ಮೊದಲ ದಿನವೇ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಕೊಚ್ಚಿಯ ಹಲವಾರು ಹಾಲ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಕೆಲವು ಮಧ್ಯರಾತ್ರಿ ಶೋಗಳಿಗೆ ಪ್ರೀಮಿಯಂ ಫಾರ್ಮ್ಯಾಟ್‌ಗಳು ಭಾರೀ ಬೆಲೆಯನ್ನು ವಿಧಿಸುತ್ತಿವೆ. ನವಿ ಮುಂಬೈನ ನೆರುಲ್‌ನಲ್ಲಿರುವ ಸಿನಿಪೊಲಿಸ್ (Cinepolis) ಮೊದಲ 4DX ಶೋನ ಟಿಕೆಟ್ ಬೆಲೆಯನ್ನು ಬರೋಬ್ಬರಿ 4,000 ರೂ.ಗಳಿಗೆ ನಿಗದಿಪಡಿಸಿದೆ, ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವೈಯಕ್ತಿಕ ಟಿಕೆಟ್ ಎಂದು ಹೇಳಲಾಗಿದೆ.

ಆಂಥೋನಿ ಮತ್ತು ಜೋ ರೂಸ್ಸೋ ನಿರ್ದೇಶಿಸಿರುವ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್, ಕ್ರಿಸ್ ಎವಾನ್ಸ್, ಕ್ರಿಸ್ ಹೆಮ್ಸ್‌ವರ್ತ್, ಪೆಡ್ರೊ ಪಾಸ್ಕಲ್, ಪಾಲ್ ರಡ್ಡ್ ಹೀಗೆ ಒಟ್ಟು 30 ಮಂದಿ ಹಾಲಿವುಡ್ ಸ್ಟಾರ್ ನಟ, ನಟಿಯರು ನಟನೆ ಮಾಡಿದ್ದಾರೆ. ಸಿನಿಮಾ ಭಾರತದಲ್ಲಿ ಡಿಸೆಂಬರ್ 17ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ