
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಇದು ‘ಸ್ಪೈಡರ್ ಮ್ಯಾನ್’ ಸರಣಿಯ ಒಂಬತ್ತನೇ ಸಿನಿಮಾ ಆಗಿದೆ. ಟಾಮ್ ಹಾಲೆಂಡ್ ಅವರಿಗೆ ಇದು ಸ್ಪೈಡರ್ ಮ್ಯಾನ್ ಆಗಿ ನಾಲ್ಕನೇ ಸಿನಿಮಾ. ಈ ವರೆಗೆ ‘ಸ್ಪೈಡರ್ ಮ್ಯಾನ್’ ಪಾತ್ರದಲ್ಲಿ ನಟಿಸಿರುವ ನಟರುಗಳಲ್ಲಿ ಟಾಮ್ ಹಾಲೆಂಡ್ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟ ಎನ್ನಲಾಗುತ್ತಿದೆ. ನಿನ್ನೆ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್’ ಸಹ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನೇ ಬರೆಯುತ್ತಿದೆ. ಇಷ್ಟೆಲ್ಲ ಯಶಸ್ಸು ಬೆನ್ನಿಗಿದ್ದರೂ ಸಹ ಇದೀಗ ಟಾಮ್ ಹಾಲೆಂಡ್ ಅನ್ನು ಕೈಬಿಟ್ಟು ಹೊಸ ಸ್ಪೈಡರ್ ಮ್ಯಾನ್ ಅನ್ನು ಪರಿಚಯಿಸಲು ಮಾರ್ವೆಲ್ ಸಜ್ಜಾಗಿದೆ.
ಚಿತ್ರದ ಪ್ರಚಾರದ ಸಂದರ್ಭದಲ್ಲಿ ‘ಹ್ಯಾಪಿ ಸ್ಯಾಡ್ ಕನ್ಫ್ಯೂಸ್ಡ್’ (Happy Sad Confused) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಟಾಮ್ ಹಾಲ್ಯಾಂಡ್, ಸ್ಪೈಡರ್ ಮ್ಯಾನ್ ಫ್ರಾಂಚೈಸಿಯಿಂದ ತಮ್ಮ ನಿರ್ಗಮನದ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ ಎಂದು ಖುದ್ದು ಹೇಳಿದ್ದಾರೆ. ನಟನ ಪ್ರಕಾರ, ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (2021) ಚಿತ್ರ ಮುಗಿದ ತಕ್ಷಣವೇ ಇದರ ಮೂಲಭೂತ ತಯಾರಿಗಳು ಆರಂಭವಾಗಿದ್ದವು. ಆದರೆ ಹೇಗೋ ಈಗ ‘ಬ್ರ್ಯಾಂಡ್ ನ್ಯೂ ಡೇ’ ಸಹ ಬಿಡುಗಡೆ ಆಗಿದೆ. ಆದರೆ ಮುಂದಿನ ಸ್ಪೈಡರ್ ಮ್ಯಾನ್ ಸಿನಿಮಾನಲ್ಲಿ ಕಡ್ಡಾಯವಾಗಿ ಹೊಸ ನಟ ಇರಲಿದ್ದಾನಂತೆ.
ಆದರೆ ಈ ಬಗ್ಗೆ ತಮಗೆ ಬೇಸರ ಇಲ್ಲ ಎಂದಿರುವ ಟಾಮ್ ಹಾಲೆಂಡ್, ‘ನನಗೆ ಇದು ಬಹಳ ಖುಷಿ ಕೊಡುವ ವಿಷಯ ಆಗಿದೆ. ನಾನು ಸಂಸ್ಥೆಯವರ ಜೊತೆಗೆ ಈ ಬಗ್ಗೆ ಮಾತನಾಡಿದಾಗಲೆಲ್ಲ ಬಹಳ ಉತ್ಸಾಹಗೊಳ್ಳುತ್ತೇನೆ. ಹೊಸ ಮತ್ತು ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡಿ, ಆ ಮೂಲಕ ಸ್ಪೈಡರ್ ಮ್ಯಾನ್ ಪಾತ್ರದ ಭವಿಷ್ಯವನ್ನು ಭದ್ರಗೊಳಿಸುವುದು ನನ್ನ ಜವಾಬ್ದಾರಿ ಎಂದು ನಾನು ನಂಬಿದ್ದೇನೆ’ ಎಂದು ಟಾಮ್ ಹಾಲೆಂಡ್ ಹೇಳಿದ್ದಾರೆ.
ಇದನ್ನೂ ಓದಿ:‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
2016ರಲ್ಲಿ ಬಿಡುಗಡೆಯಾದ ‘ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಪೈಡರ್ ಮ್ಯಾನ್ ಆಗಿ ಟಾಮ್ ಹಾಲ್ಯಾಂಡ್ ಕಾಣಿಸಿಕೊಂಡಿದ್ದರು. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ (MCU) ಹಲವಾರು ಸ್ಪೈಡರ್ ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. ಟೋಬಿ ಮ್ಯಾಗೈರ್ ಮತ್ತು ಆಂಡ್ರ್ಯೂ ಗಾರ್ಫೀಲ್ಡ್ ನಂತರ ಪೀಟರ್ ಪಾರ್ಕರ್ ಪಾತ್ರವನ್ನು ನಿರ್ವಹಿಸಿದ ಮೂರನೇ ನಟ ಇವರಾಗಿದ್ದಾರೆ. ತಮ್ಮ ಸ್ವಂತ ಅನುಭವವನ್ನು ಮೆಲುಕು ಹಾಕುತ್ತಾ, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್ ಪಾತ್ರಧಾರಿ) ಅವರು ತಮ್ಮ ಮೊದಲ ಮೂರು ಚಿತ್ರಗಳಲ್ಲಿ ತನಗೆ ಹೇಗೆ ಮಾರ್ಗದರ್ಶಕರಾಗಿದ್ದರೋ, ಅದೇ ರೀತಿಯಲ್ಲಿ ಮುಂದಿನ ಪಾತ್ರಕ್ಕೆ ಬರುವ ನಟನಿಗೂ ತಾನು ಸಹಾಯ ಮಾಡಲು ಬಹಳ ಖುಷಿಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ತಮ್ಮ ನಂತರ ಸ್ಪೈಡರ್ ಮ್ಯಾನ್ ಉಡುಪನ್ನು ಧರಿಸಲು ಯಾರನ್ನು ಬಯಸುತ್ತೀರಿ ಎಂದು ಕೇಳಿದಾಗ, ನೆಟ್‌ಫ್ಲಿಕ್ಸ್ ಸರಣಿ ‘ಅಡೋಲೆಸೆನ್ಸ್’ ನಲ್ಲಿನ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ಯುವ ನಟ ಓವನ್ ಕೂಪರ್ ಅವರ ಹೆಸರನ್ನು ಟಾಮ್ ಹಾಲೆಂಡ್ ಸೂಚಿಸಿದ್ದರು. ಓವನ್ ಕೂಪರ್, ತನ್ನ ಅದ್ಭುತ ನಟನೆಯಿಂದ ಈಗಾಗಲೇ ಗ್ರಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ