AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಟ್ಟರ್ ಫ್ಲಾಫ್ ಸಿನಿಮಾಕ್ಕೆ ಸೀಕ್ವೆಲ್​​, ಕಮಲ್ ಸಿನಿಮಾಕ್ಕೆ ಉಧಯನಿಧಿ ಸಂಧಾನ

‘ಇಂಡಿಯನ್’ ಸಿನಿಮಾದ ಸೀಕ್ವೆಲ್ ‘ಇಂಡಿಯನ್ 2’ ರಿಲೀಸ್ ಆಯ್ತು. ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಸಾಕಷ್ಟು ವಿವಾದಗಳಲ್ಲೇ ಇದ್ದ ಈ ಸಿನಿಮಾ ಸಾಕಷ್ಟು ಅಡೆ-ತಡೆ ಗೊಂದಲಗಳೇ ನಡುವೆ ಬಿಡುಗಡೆ ಆಗಿ ಅಟ್ಟರ್ ಫ್ಲಾಫ್ ಎನಿಸಿಕೊಂಡಿತು. ಇನ್ನು ‘ಇಂಡಿಯನ್’ ಪ್ರಾಂಚೈಸ್ ಮುಗಿದಂತೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ‘ಇಂಡಿಯನ್ 3’ ಸಿನಿಮಾ ಘೋಷಣೆ ಆಗಿದೆ.

ಅಟ್ಟರ್ ಫ್ಲಾಫ್ ಸಿನಿಮಾಕ್ಕೆ ಸೀಕ್ವೆಲ್​​, ಕಮಲ್ ಸಿನಿಮಾಕ್ಕೆ ಉಧಯನಿಧಿ ಸಂಧಾನ
Kamal Uday
ಮಂಜುನಾಥ ಸಿ.
|

Updated on: Oct 08, 2026 | 5:47 PM

Share

ಮುಖ್ಯಾಂಶಗಳು

  • ‘ಇಂಡಿಯನ್ 2’ ಸಿನಿಮಾ ಅಟ್ಟರ್ ಫ್ಲಾಫ್ ಆಗಿತ್ತು
  • ಹಾಗಿದ್ದರೂ ಸಹ ‘ಇಂಡಿಯನ್ 3’ ಘೋಷಿಸಲಾಗಿದೆ
  • ಉದಯನಿಧಿ ಸಂಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ.

1996 ರಲ್ಲಿ ರಿಲೀಸ್ ಆಗಿದ್ದ ತಮಿಳು ಸಿನಿಮಾ ‘ಇಂಡಿಯನ್’ ಭಾರಿ ದೊಡ್ಡ ಹಿಟ್ ಆಗಿತ್ತು. ಕಮಲ್ ಹಾಸನ್ ನಾಯಕ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾ ಅನ್ನು ಶಂಕರ್ ನಿರ್ದೇಶಿಸಿದ್ದರು. ಎರಡು ವರ್ಷಗಳ ಹಿಂದೆ 2024 ರಲ್ಲಿ ‘ಇಂಡಿಯನ್’ ಸಿನಿಮಾದ ಸೀಕ್ವೆಲ್ ‘ಇಂಡಿಯನ್ 2’ ರಿಲೀಸ್ ಆಯ್ತು. ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಸಾಕಷ್ಟು ವಿವಾದಗಳಲ್ಲೇ ಇದ್ದ ಈ ಸಿನಿಮಾ ಸಾಕಷ್ಟು ಅಡೆ-ತಡೆ ಗೊಂದಲಗಳೇ ನಡುವೆ ಬಿಡುಗಡೆ ಆಗಿ ಅಟ್ಟರ್ ಫ್ಲಾಫ್ ಎನಿಸಿಕೊಂಡಿತು. ಇನ್ನು ‘ಇಂಡಿಯನ್’ ಪ್ರಾಂಚೈಸ್ ಮುಗಿದಂತೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ‘ಇಂಡಿಯನ್ 3’ ಸಿನಿಮಾ ಘೋಷಣೆ ಆಗಿದೆ.

‘ಇಂಡಿಯನ್ 2’ ನಿರ್ಮಾಣ ಮಾಡಿದ್ದ ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣ ಸಂಸ್ಥೆಯೇ ‘ಇಂಡಿಯನ್ 3: ವಾರ್ ಮೋಡ್’ ಘೋಷಣೆ ಮಾಡಿದೆ. ಚಿತ್ರದ ಕೆಲಸಗಳು ಅಧಿಕೃತವಾಗಿ ಮುಂದುವರಿಯುತ್ತಿವೆ ಎಂದು ಲೈಕಾ ಪ್ರೊಡಕ್ಷನ್ಸ್ ಖಚಿತಪಡಿಸಿದೆ. ನಟ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದು, ನಿರ್ಮಾಣ ಸಂಸ್ಥೆಯು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

‘ಇಂಡಿಯನ್ 2’ ಸಿನಿಮಾ ಸಮಯದಲ್ಲಿ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕ ಶಂಕರ್ ನಡುವೆ ದೊಡ್ಡ ಭಿನ್ನಾಭಿಪ್ರಾಯ ಏರ್ಪಟ್ಟು ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನು ಸಹ ಏರಿತ್ತು. ಶಂಕರ್ ಮಾತ್ರವೇ ಅಲ್ಲದೆ ನಟ ಕಮಲ್ ಹಾಸನ್ ಸಹ ನಿರ್ಮಾಣ ಸಂಸ್ಥೆಯ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿತ್ತು. ಇದರ ಮೇಲೆ ಸಿನಿಮಾ ಸಹ ಅಟ್ಟರ್ ಫ್ಲಾಫ್ ಆಗಿತ್ತು. ಇಷ್ಟೆಲ್ಲ ಆದರೂ ಸಹ ಲೈಕಾ ಸಿನಿಮಾ ಮತ್ತೆ ಕಮಲ್ ಹಾಸನ್ ಹಾಗೂ ಶಂಕರ್ ಜೊತೆಗೆ ‘ಇಂಡಿಯನ್ 3’ ಸಿನಿಮಾ ಘೋಷಿಸಿದೆ.

ಇದನ್ನೂ ಓದಿ: ರಾಮಾಯಣ; ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ ಕಚೇರಿ, ಮನೆ ಮೇಲೆ ಐಟಿ ದಾಳಿ

ಇದಕ್ಕೆ ಮುಖ್ಯ ಕಾರಣ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ ಎನ್ನಲಾಗುತ್ತಿದೆ. ಉದಯನಿಧಿ ಸ್ಟಾಲಿನ್ ಅವರೇ ಲೈಕಾ, ಶಂಕರ್ ಹಾಗೂ ಕಮಲ್ ಹಾಸನ್ ನಡುವೆ ಸಂಧಾನ ನಡೆಸಿ ಈ ಸಿನಿಮಾಕ್ಕೆ ಒಪ್ಪಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಇಂಡಿಯನ್ 2’ ಸಿನಿಮಾನಲ್ಲಿ ನಟಿಸಿದ್ದ ಬಹುತೇಕ ಕಲಾವಿದರೇ ‘ಇಂಡಿಯನ್ 3’ ಸಿನಿಮಾನಲ್ಲೂ ನಟಿಸುವ ಸಾಧ್ಯತೆ ಇದೆ. ಕಮಲ್ ಹಾಸನ್ ಅವರು ಮತ್ತೊಮ್ಮೆ ‘ಸೇನಾಪತಿ’ ಪಾತ್ರದಲ್ಲಿ ಮಿಂಚಲಿದ್ದಾರೆ.

ಈ ಬಾರಿ ಸೇನಾಪತಿ ಪಾತ್ರದ ಹಿಂದಿನ ಕತೆಯನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಶಂಕರ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಂದು ಕಾಲದ ಭಾರತದ ನಂಬರ್ 1 ನಿರ್ದೇಶಕ ಶಂಕರ್ ಅವರಿಗೆ ಸತತ ಸೋಲುಗಳು ಎದುರಾಗುತ್ತಿವೆ. ಅವರ ನಿರ್ದೇಶನದ ‘ಇಂಡಿಯನ್ 2’, ‘ಗೇಮ್ ಚೇಂಜರ್’ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ‘ಇಂಡಿಯನ್ 3’ ಸಿನಿಮಾ ಮೂಲಕವಾದಲೂ ಅವರು ಗೆಲುವು ಸಾಧಿಸುತ್ತಾರಾ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!