ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾದ ನಿರ್ದೇಶಕನ ಕಾರಿದು; ಯಾರೆಂದು ಊಹಿಸಿ

| Updated By: ರಾಜೇಶ್ ದುಗ್ಗುಮನೆ

Updated on: Oct 21, 2024 | 11:00 AM

ಅವರು ಬೇರೆ ಯಾರೂ ಅಲ್ಲ ನಾಗ್ ಅಶ್ವಿನ್. ಹೌದು, ‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಅವರು ಈಗ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಪುಟಾಣಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ.  

ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾದ ನಿರ್ದೇಶಕನ ಕಾರಿದು; ಯಾರೆಂದು ಊಹಿಸಿ
ನಾಗ್ ಅಶ್ವಿನ್ ಕಾರು
Follow us on

ಯಾವುದಾದರೂ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೆ ಅಂಥ ನಿರ್ದೇಶಕರ ಲೆವೆಲ್ ಬೇರೆಯೇ ಆಗಿ ಬಿಡುತ್ತದೆ. ಅವರ ಲೈಫ್​ಸ್ಟೈಲ್ ಕೂಡ ಸಾಕಷ್ಟು ಬದಲಾಗುತ್ತದೆ. ಸಿನಿಮಾ ಗೆದ್ದ ಬಳಿಕ ಮನೆಗೊಂದು ಐಷಾರಾಮಿ ಕಾರು ಬಂದರೂ ಅಚ್ಚರಿ ಏನಿಲ್ಲ. ಆದರೆ, ಇಲ್ಲೊಬ್ಬರು ನಿರ್ದೇಶಕರು ಇದ್ದಾರೆ. ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಅವರು ಮಾತ್ರ ಸಿಂಪಲ್ ಆಗಿದ್ದಾರೆ. ಹಾಗಾದರೆ ಯಾರು ಅವರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅವರು ಬೇರೆ ಯಾರೂ ಅಲ್ಲ ನಾಗ್ ಅಶ್ವಿನ್. ಹೌದು, ‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಅವರು ಈಗ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಪುಟಾಣಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ.

ನಾಗ್ ಅಶ್ವಿನ್ ಅವರು ಮಹಿಂದ್ರಾ ಎಲೆಕ್ಟ್ರಿಕ್ ಕಾರು e2oplus ಕಾರ್​ನ ಚಲಾಯಿಸಿಕೊಂಡು ಹೋಗಿದ್ದಾರೆ. ಅವರದ್ದೇ ಮನೆಯ ಸೋಲಾರ್ ಪ್ಯಾನಲ್ ಮೂಲಕ ಉತ್ಪಾದನೆಯಾದ ವಿದ್ಯುತ್​ನಿಂದ ಕಾರನ್ನು ಚಾರ್ಜ್ ಮಾಡಲಾಗಿದೆ.  ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರನ್ನು ನೋಡಿ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ನಾಗ್ ಅಶ್ವಿನ್ ಅವರ ಐಡಿಯಾದಿಂದ ಬುಜ್ಜಿ ಕಾರು ಸಿದ್ಧವಾಗಿತ್ತು. ಈ ಕಾರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರು. ಇದನ್ನೂ ಮಹಿಂದ್ರಾ ಅವರೇ ಸಿದ್ಧಪಡಿಸಿದ್ದರು. ಆದರೆ, ಅವರು ಮಾತ್ರ ಸಿಂಪಲ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಪೋಸ್ಟ್​ನ ಮೆಚ್ಚಿಕೊಂಡಿದ್ದಾರೆ. ‘ಬಾಕ್ಸ್​ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ವ್ಯಕ್ತಿಯ ಆ್ಯಟಿಟ್ಯೂಡ್ ಇದು’ ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಹನುಮಾನ್’, ‘ಕಲ್ಕಿ 2898 ಎಡಿ’, ‘ಅನಿಮಲ್’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿದ ‘ಲಾಪತಾ ಲೇಡೀಸ್​’

‘ಕಲ್ಕಿ 2898 ಎಡಿ’ ಬಳಿಕ ಸೀಕ್ವೆಲ್​ಗೆ ನಾಗ್ ಅಶ್ವಿನ್ ಸಿದ್ಧರಾಗುತ್ತಿದೆ. ಈ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಮುಖ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದರು.  ಕಮಲ್ ಹಾಸನ್ ಈ ಚಿತ್ರದ ವಿಲನ್ ಆಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ದೀಪಿಕಾಗೆ ಮಗು ಜನಿಸಿರುವುದರಿಂದ ಮುಂದಿನ ವರ್ಷ ಅವರು ಸೆಟ್ ಸೇರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.